ಜಿಡೆಕಲ್ಲು ರೆಪ್ರಿಜರೇಟರ್ ಸ್ಪೋಟಗೊಂಡು ಬೆಂಕಿ ಅನಾಹುತ!- ಅಗ್ಮಿಶಾಮಕದ ದಳದಿಂದ ಬೆಂಕಿ ಶಮನ

0

ಪುತ್ತೂರು: ರೆಪ್ರಿಜರೇಟರ್ ಸ್ಪೋಟಗೊಂಡು‌ ಮನೆಯ ವಿದ್ಯುತ್ ಉಪಕರಣ ಸೇರಿದಂತೆ ಮನೆಯಲ್ಲಿದ್ದ ಇತರ ಪರಿಕರಕ್ಕೆ ಬೆಂಕಿ ಹತ್ತಿಗೊಂಡು ಹಾನಿಗೊಂಡ ಘಟನೆ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಕೆಎಂಎಫ್ ಪ್ಯಾಕ್ಟರಿ ಬಳಿ ಜೂ.18ರ ಬೆಳಗ್ಗೆ ನಡೆದಿದೆ.
ಜಿಡೆಕಲ್ಲು ಕೆ ಎಂ ಎಫ್ ಹಾಲು ಶಿಥಲೀಕರಣ ಪ್ಯಾಕ್ಟರಿ ಬಳಿಯ ನಿವಾಸಿ ಮೋನಪ್ಪ ಪುರುಷ ಎಂಬವರ ಮನೆಯಲ್ಲಿ ರೆಫ್ರಿಜರೇಟರ್ ಸ್ಪೋಟಗೊಂಡಿದೆ. ಸ್ಪೋಟಗೊಂಡ ರಭಸಕ್ಕೆ ಮನೆಯ ವಿದ್ಯುತ್ ಪರಿಕರಗಳು ಸಹಿತ ಇತರ ಸೊತ್ತುಗಳಿಗೆ ಬೆಂಕಿ ಹತ್ತಿಕೊಂಡು ಹಾನಿಗೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ರೆಫ್ರಿಜರೇಟರ್ ಗೆ ಹತ್ತಿಕೊಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

LEAVE A REPLY

Please enter your comment!
Please enter your name here