ನಿನ್ನಿಕಲ್‌ನ ಜಲೀಲ್ ಇಫ್ತಿಕ್ಕಾರ್ ಮೆಕ್ಕಾದಲ್ಲಿ ಹೃದಯಾಘಾತದಿಂದ ನಿಧನ

0

ಉಪ್ಪಿನಂಗಡಿ: ಮೂಲತಃ ಅಡ್ಯಾರುನವರಾಗಿದ್ದು, ಪ್ರಸಕ್ತ ಉಪ್ಪಿನಂಗಡಿ ನಿನ್ನಿಕಲ್ ನಿವಾಸಿಯಾಗಿರುವ ಜಲೀಲ್ ಇಫ್ತಿಕ್ಕಾರ್ (57 ವ.) ಮೇ. 26ರಂದು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.


ಕಳೆದ ಹಲವಾರು ವರ್ಷಗಳಿಂದ ಮೆಕ್ಕಾದಲ್ಲಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ಇವರು ಈಚೆಗೆ ಊರಿಗೆ ಬಂದು ಮತ್ತೆ ಅಲ್ಲಿಗೆ ತೆರಳಿದ್ದರು. ಮೃತರು ಪತ್ನಿ ಸಾಜಿದಾ ರೋಯಲ್, ಪುತ್ರ ಮಹಮ್ಮದ್ ಶಹಲ್, ಪುತ್ರಿ ಆಯಿಷಾ ಶಿಝರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here