ಪುತ್ತೂರು ಬಂಟರ ಭವನದಲ್ಲಿ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಯುವ ಬಂಟೆರೆ ಆಯನ -2022

0

  • ಸಮಾಜ ಭಾಂದವರು ಯುವ ಬಂಟರಿಗೆ ಪ್ರೋತ್ಸಾಹವನ್ನು ನೀಡಬೇಕು- ಕಾವು ಹೇಮನಾಥ ಶೆಟ್ಟಿ
  • ಸಮಾಜದ ಮುಖ್ಯ ವಾಹಿನಿಯಲ್ಲಿ ಕೈಜೋಡಿಸಬೇಕು- ಶಶಿರಾಜ್ ರೈ
  • ಬಂಟರಿಗೆ ನಾಯಕತ್ವ ಗುಣ ರಕ್ತದಲ್ಲಿ ಬಂದಿದೆ-ಡಾ.ಬೆಳ್ಳಿಪ್ಪಾಡಿ ಶ್ಯಾಮ್ ಪ್ರಸಾದ್ ಶೆಟ್ಟಿ
  • ಉತ್ತಮವಾದ ಕಾರ್‍ಯಕ್ರಮ- ದಯಾನಂದ ರೈ ಮನವಳಿಕೆಗುತ್ತು
  • ಪ್ರೇರಣೆ ಆಗುವ ಕಾರ್‍ಯಕ್ರಮ- ಕುಂಬ್ರ ದುರ್ಗಾಪ್ರಸಾದ್ ರೈ

 

ಪುತ್ತೂರು: ಬಂಟ ಸಮಾಜದ ಯುವ ಪ್ರತಿಭೆಗಳು ಸಾದನೆಯ ಮೂಲಕ ಜಗತ್ತಿಗೆ ಪರಿಚಯವಾಗುವ ನಿಟ್ಟಿನಲ್ಲಿ ಸಮಾಜ ಭಾಂದವರು ಯುವ ಬಂಟರಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಹೇಳಿದರು.

 


ಅವರು ಮೇ. 28 ರಂದು ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇವರ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಮತ್ತು ಮಹಿಳಾ ಹಾಗೂ ವಿದ್ಯಾರ್ಥಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಸಹಕಾರದೊಂದಿಗೆ ಮೇ. 28 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ ಯುವ ಬಂಟೆರೆ ಆಯನ- ೨೦೨೨ರ ಸಭಾ ಕಾರ್‍ಯಕ್ರಮವನ್ನು ಉದ್ಘಾಟಸಿ. ಮಾತನಾಡಿ ಬಲಿಷ್ಠ ನಾಯಕತ್ವವನ್ನು ಹೊಂದಿರುವ ಬಂಟ ಸಮಾಜದ ಹಿರಿಯರ ಸಾಧನೆಗಳನ್ನು ನೆನಪಿಸುವ ಕಾರ್‍ಯಕ್ರಮವನ್ನು ಯುವ ಬಂಟರ ಸಂಘವು ಆಯೋಜಿಸುವ ಮೂಲಕ ಮಾದರಿ ಕಾರ್‍ಯಕ್ರಮವಾಗಿದೆ. ಬಂಟ ಸಮಾಜದ ಯುವ ಪ್ರತಿಭೆಗಳು ಸಮಾಜದಲ್ಲಿ ಬೆಳಕಿಗೆ ಬರಬೇಕು, ಗ್ರಾಮ ಗ್ರಾಮದಲ್ಲಿ ಯುವ ಬಂಟರು ಒಗ್ಗೂಡಿ, ಸಮಾಜ ಮುಖಿ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

 


ಸಮಾಜದ ಮುಖ್ಯ ವಾಹಿನಿಯಲ್ಲಿ ಕೈಜೋಡಿಸಬೇಕು- ಶಶಿರಾಜ್ ರೈ
ಅಧ್ಯಕ್ಷತೆ, ವಹಿಸಿದ್ದ ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಲಗುತ್ತು ಮಾತನಾಡಿ ತಾಲೂಕಿನಾದ್ಯಾಂತ ಯುವ ಬಂಟರನ್ನು ಒಟ್ಟು ಸೇರಿಸಿ ಕಾರ್‍ಯಕ್ರಮವನ್ನು ಆಯೋಜಿಸಲಾಗಿದೆ. ಸಮಾಜದಲ್ಲಿ ಯುವ ಬಂಟರು ತಮ್ಮದೇ ಆದ ನಾಯಕತ್ವ ಗುಣವನ್ನು ಹೊಂದಿದ್ದು, ಸಮಾಜದಲ್ಲಿ ಯುವ ಬಂಟರು ಸಮಾಜದ ಮುಖ್ಯವಾಹಿನಿಯಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.


ಬಂಟರಿಗೆ ನಾಯಕತ್ವ ಗುಣ ರಕ್ತದಲ್ಲಿ ಬಂದಿದೆ-ಡಾ.ಬೆಳ್ಳಿಪ್ಪಾಡಿ ಶ್ಯಾಮ್ ಪ್ರಸಾದ್ ಶೆಟ್ಟಿ
ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯ ಡೆಪ್ಯೂಟಿ ಡೈರೆಕ್ಟರ್ ಕ್ಲಿನಿಕಲ್‌ನ ಡಾ.ಬೆಳ್ಳಿಪ್ಪಾಡಿ ಶ್ಯಾಮ್ ಪ್ರಸಾದ್ ಶೆಟ್ಟಿರವರು ಮಾತನಾಡಿ ಬಂಟರಿಗೆ ನಾಯಕತ್ವ ಗುಣ ರಕ್ತದಲ್ಲಿ ಬಂದಿದ್ದು, ಯುವಕರು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಂಡು, ಸ್ವಯಂಶಕ್ತಿಯಿಂದ ಅಭಿವೃದ್ಧಿಯನ್ನು ಸಾಧಿಸಬೇಕು ಎಂದು ಹೇಳಿ, ನಮ್ಮ ಸಮಾಜದಲ್ಲಿ ಇರುವ ಹಿಂದುಳಿದವರನ್ನು ಪ್ರೋತ್ಸಾಹಿಸುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು, ಯುವ ಬಂಟರ ಸಂಘದವರು ಹಮ್ಮಿಕೊಂಡ ಇಂಥ ಉತ್ತಮ ಕಾರ್‍ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

 


ಉತ್ತಮವಾದ ಕಾರ್‍ಯಕ್ರಮ- ದಯಾನಂದ ರೈ ಮನವಳಿಕೆಗುತ್ತು
ಬಂಟ ಕಲಾ ವೈಭವವನ್ನು ಉದ್ಘಾಟನೆಗೈದ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಯುವ ಬಂಟರು ಉತ್ತಮವಾದ ಕಾರ್‍ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೇರಣೆ ಆಗುವ ಕಾರ್‍ಯಕ್ರಮ- ಕುಂಬ್ರ ದುರ್ಗಾಪ್ರಸಾದ್ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಕುಂಬ್ರ ದುರ್ಗಾಪ್ರಸಾದ್ ರೈರವರು ಬಂಟ ಸ್ಮೃತಿಯ ಬಗ್ಗೆ ಮಾತನಾಡಿ ಸಮಾಜದ ಹಿರಿಯರ ನೆನಪ ಕಿರಿಯರಿಗೆ ಪ್ರೇರಣೆಯಾಗುವ ಕಾರ್‍ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಲನ ಚಿತ್ರ ನಿರ್ದೇಶಕ ವಿರೇಂದ್ರ ಶೆಟ್ಟಿರವರು ಶುಭಹಾರೈಸಿದರು. ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ, ಪುತ್ತೂರು ತಾಲೂಕು ಯುವ ಬಂಟರ ಸಂಘದ ನಿಕಟಪೂರ್ವಧ್ಯಕ್ಷ ಪ್ರಕಾಶ್ ರೈ ಸಾರಕರೆ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ಪ್ರಜ್ವಲ್ ರೈ ಸಣ್ಣತ್ತಡ್ಕ, ಜತೆ ಕಾರ್‍ಯದರ್ಶಿ ರಂಜಿನಿ ಶೆಟ್ಟಿ, ಯುವ ಬಂಟೆರೆ ಅಯನ ಕಾರ್‍ಯಕ್ರಮದ ಪ್ರಧಾನ ಸಂಚಾಲಕರುಗಳಾದ ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಬನ್ನೂರು ಹಾಗೂ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಕೆ.ಸಿ..ಅಶೋಕ್ ಶೆಟ್ಟಿ ವಂದಿಸಿದರು. ಯುವ ಬಂಟರ ಸಂಘದ ಕ್ರೀಡಾ ವಿಭಾಗದ ಸಂಯೋಜಕ ನವೀನ್ ರೈ ಪಂಜಳ ಕಾರ್‍ಯಕ್ರಮ ನಿರೂಪಿಸಿದರು. ಧಾರ್ಮಿಕ ವಿಭಾಗದ ಸಂಯೋಜಕ ಮನ್ಮಥ ಶೆಟ್ಟಿ ಸಹಕರಿಸಿದರು. ಪ್ರಾಪ್ತಿ ಟಿ.ಶೆಟ್ಟಿ ಕುದ್ಕಾಡಿ ಪ್ರಾರ್ಥನೆಗೈದರು.

ಬಾಲ್ಯೊಟ್ಟು ಶುಭಹಾರೈಕೆ
ಪೂರ್ವಹ್ನ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಕಾರ್‍ಯಕ್ರಮಕ್ಕೆ ಆಗಮಿಸಿ, ಶುಭಹಾರೈಸಿದರು.
ಪೂರ್ವಹ್ನ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಬಂಟ ಕಲಾ ವೈಭವ ಸ್ವರ್ಧೆಯಲ್ಲಿ ವಿಜೇತರು
1ನೇ ಪ್ರಶಸ್ತಿ-ಪುತ್ತೂರ್ದ ಮುತ್ತು (ಪುತ್ತೂರು ನಗರ), 2ನೇ ಪ್ರಶಸ್ತಿ ಸತ್ಯದ ಸಿರಿ(ನೆಟ್ಟಣಿಗೆ ಮುಡ್ನೂರು) 3ನೇ ಪ್ರಶಸ್ತಿ ಕುಮಾರಧಾರ(ಪಾಣಾಜೆ) ಸಮಧಾನಕರ ಪ್ರಶಸ್ತಿ – ನೇತ್ರಾವತಿ (ಉಪ್ಪಿನಂಗಡಿ) ಹಾಗೂ ಕದಂಬ(ಸವಣೂರು) ತಂಡಗಳು ಪಡೆದುಕೊಂಡರು. ಸ್ವರ್ಧೆಯ ತೀರ್ಪುಗಾರರಾದ ಮಲ್ಲಿಕಾ ಶೆಟ್ಟಿ ಹಾಗೂ ತೃಷಾ ಶೆಟ್ಟಿರವರನ್ನು ಗೌರವಿಸಲಾಯಿತು.

ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗೌರವ
2019-20, 2020-21, 2021-22ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ಕಾರ್‍ಯಕ್ರಮದಲ್ಲಿ ಗೌರವಿಸಲಾಯಿತು.

ಸನ್ಮಾನ
ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ್ ರೈ ಹಾಗೂ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯ ಡೆಪ್ಯೂಟಿ ಡೈರೆಕ್ಟರ್ ಕ್ಲಿನಿಕಲ್‌ನ ಡಾ.ಬೆಳ್ಳಿಪ್ಪಾಡಿ ಶ್ಯಾಮ್ ಪ್ರಸಾದ್ ಶೆಟ್ಟಿರವರನ್ನು ಸನ್ಮಾನಿಸಲಾಯಿತು.

ಬಂಟ ಸ್ಮೃತಿ ಕಾರ್‍ಯಕ್ರಮ

ವಿಶೇಷ ಗೌರವ- ಕಡಮಜಲು ಸುಭಾಷ್ ರೈ
ಮೃಗಯ ಸಾಹಿತಿ ಕೆದಂಬಾಡಿ ಜತ್ತಪ್ಪ ರೈರವರ ಬಗ್ಗೆ ಹಿರಿಯ ಸಾಮಾಜಕ ಮುಂದಾಳು ಕಡಮಜಲು ಸುಭಾಷ್ ರೈ ಮಾತನಾಡಿ ಕೆದಂಬಾಡಿ ಜತ್ತಪ್ಪ ರೈಯವರು ಸಮಾಜದಲ್ಲಿ ತನ್ನದೇ ಆದ ವಿಶೇಷ ಗೌರವವನ್ನು ಪಡೆದು ನಾಡಿನ ಶ್ರೇಷ್ಠ ವ್ಯಕ್ತಿಯಾಗಿದ್ದರು. ಇವರು ಬಂಟ ಸಮಾಜದ ಪ್ರಮುಖ ವ್ಯಕ್ತಿಯಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ವಿಶೇಷವಾದ ಕೊಡುಗೆ- ದಂಬೆಕಾನ ಸದಾಶಿವ ರೈ
ಪುತ್ತೂರು ತಾಲೂಕು ಬಂಟರ ಸಂಘದ ಸ್ಥಾಪಕಾಧ್ಯಕ್ಷ ಮಿತ್ತಳಿಕೆ ಅಮ್ಮು ಶೆಟ್ಟಿರವರ ಬಗ್ಗೆ ಹಿರಿಯ ಸಾಮಾಜಿಕ ಮುಂದಾಳು ದಂಬೆಕಾನ ಸದಾಶಿವ ರೈರವರು ಮಾತನಾಡಿ ಮಿತ್ತಳಿಕೆ ಅಮ್ಮು ಶೆಟ್ಟಿರವರು ಬಂಟ ಸಮಾಜದ ಅಗ್ರಗಣ್ಯ ನಾಯಕರಾಗಿ, ಸಮಾಜಕ್ಕೆ ವಿಶೆಷವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಅಂತಪ್ಪ ಶೆಟ್ಟಿ ಧೀಮಂತ ವ್ಯಕ್ತಿ- ಶ್ಯಾಮ್‌ಸುಂದರ್ ರೈ
ರಾಜಕೀಯ ನೇತಾರ ಕಾವು ಅಂತಪ್ಪ ಶೆಟ್ಟರವರ ಬಗ್ಗೆ ಕೊಳ್ತಿಗೆ ಗ್ರಾ.ಪಂ, ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೊಳ್ತಿಗೆರವರು ಮಾತನಾಡಿ ಅಂತಪ್ಪ ಶೆಟ್ಟಿರವರು ರಾಜಕೀಯ ಕ್ಷೇತ್ರದ ಧಿಮಂತ ವ್ಯಕ್ತಿಯಾಗಿದ್ದರು. ಅಂತಪ್ಪ ಸೆಟ್ಟಿರವರು ಶೋಷಿತ ವರ್ಗದ ಏಳಿಗೆಗಾಗಿ ಬಹಳಷ್ಟು ಕೆಲಸವನ್ನು ಮಾಡಿ, ಸಮಾಜದಲ್ಲಿ ಹೆಸರನ್ನು ಪಡೆದಿದ್ದಾರೆ, ಅವರ ಜೀವನ ಸಮಾಜಕ್ಕೆ ,ಮಾದರಿಯಾಗಿತ್ತು. ಅಂತಪ್ಪ ಶೆಟ್ಟಿರವರ ಪುತ್ರ ಕಾವು ಹೇಮನಾಥ ಶೆಟ್ಟಿರವರು ತಂದೆಯವರ ಪ್ರೇರಣೆಯಂತೆ ಸಮಾಜದಲ್ಲಿ ಉತ್ತಮವಾದ ಕಾರ್‍ಯಗಳ ಮೂಲಕ ಹೆಸರುಗಳಿಸಿದ್ದಾರೆ ಎಂದು ಹೇಳಿದರು.

ಸಮಾಜಕ್ಕೆ ಮಾದರಿ- ಸುರೇಶ್ ಶೆಟ್ಟಿ
ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಆನಾಜೆ ಗಣೇಶ್ ರೈ ರವರ ಬಗ್ಗೆ ಶಿಕ್ಷಕ ಸುರೇಶ್ ಶೆಟ್ಟಿರವರು ಮಾತನಾಡಿ ಆನಾಜೆ ಗಣೇಶ್ ರೈ ಬದುಕು ಸಮಾಜಕ್ಕೆ ಮಾದರಿಯಾಗಿತ್ತು ಎಂದು ಹೇಳಿದರು.

ಬಹುದೊಡ್ಡ ಕೊಡುಗೆ- ಹರಿಣಾಕ್ಷಿ ಜೆ. ಶೆಟ್ಟಿ
ನೃತ್ಯ ಗುರು ಕುದ್ಕಾಡಿ ವಿಶ್ವನಾಥ ರೈರವರ ಬಗ್ಗೆ ಹರಿಣಾಕ್ಷಿ ಜೆ.ಶೆಟ್ಟಿರವರು ಮಾತನಾಡಿ ವಿಶ್ವನಾಥ ರೈಯವರ ಕಲಾ ಸೇವೆಯು ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.

ಹೇಮಾ ಜೆ.ರೈ, ಗೌತಮ್ ರೈ ಸಾಂತ್ಯ, ಹರ್ಷ ರೈ ಮಾಡಾವು, ಭಾಗ್ಯೇಶ್ ರೈ, ನವೀನ್ ರೈ ಪಂಜಳ,ಮನ್ಮಥ ಶೆಟ್ಟಿರವರುಗಳು ವಿವಿಧ ಕಾರ್‍ಯಕ್ರಮಗಳನ್ನು ನಿರ್ವಹಿಸಿದರು.

ವಿಶಿಷ್ಟವಾದ ಕಾರ್‍ಯಕ್ರಮವಾಗಿ ರೂಪುಗೊಂಡ ಯುವ ಬಂಟೆರೆ ಆಯನ
ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ನಡೆದ ಯುವ ಬಂಟೆರೆ ಆಯನ ಕಾರ್‍ಯಕ್ರಮ ವಿಶಿಷ್ಟವಾಗಿ ಮನಸೆಳೆಯಿತು. ಬಂಟ ಕಲಾ ವೈಭವ, ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗೌರವ, ಬಂಟ ಸ್ಮೃತಿ ಕಾರ್‍ಯಕ್ರಮ ಎಲ್ಲವೂ ಅಚ್ಚುಕಟ್ಟಾಗಿ ನಡೆಯಿತು. ಮಧ್ಯಾಹ್ನ ಭೋಜನ ನಡೆಯಿತು. ಯುವ ಬಂಟರ ಸಂಘದ ನೂತನ ಅಧ್ಯಕ್ಷ ಶಶಿರಾಜ್ ರೈ ಮತ್ತು ತಂಡದವರು ಉತ್ತಮವಾದ ಕಾರ್‍ಯಕ್ರಮವನ್ನು ಸಂಘಟಿಸುವಲ್ಲಿ ಯಶಸ್ಸಿಯಾದರು.

LEAVE A REPLY

Please enter your comment!
Please enter your name here