ಸವಣೂರು ಸರಕಾರಿ ಪ.ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಶಾಲಾ ನಾಯಕ:ಪ್ರಸನ್ನ ಕುಮಾರ್, ಉಪ ನಾಯಕಿ:ಚಶ್ಮಿತಾ ಆಯ್ಕೆ

0

 

ಪುತ್ತೂರು: ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಸಂಸತ್ತು ಆಯ್ಕೆ ಪ್ರಕ್ರಿಯೆಯು ಮೊಬೈಲ್ ವಿದ್ಯುನ್ಮಾನ ಮತ ಯಂತ್ರದ ಮೂಲಕ ಚುನಾವಣೆ ನಡೆಯಲ್ಪಟ್ಟಿತು.

ಪ್ರಸಕ್ತ ಭಾರತ ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯ ಪ್ರಕಾರ ಚುನಾವಣೆಯನ್ನು ನಡೆಸಲಾಗಿದ್ದು, ಶಾಲಾ ನಾಯಕನಾಗಿ ಹತ್ತನೇ ತರಗತಿ ವಿದ್ಯಾರ್ಥಿ ಪ್ರಸನ್ನ ಕುಮಾರ್, ಶಾಲಾ ಉಪ ನಾಯಕನಾಗಿ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಚಿಶ್ಮಿತಾರವರು ಆಯ್ಕೆಯಾಗಿದ್ದಾರೆ. ಮುಖ್ಯ ಚುನಾವಣಾಧಿಕಾರಿಯಾಗಿ ಸಮಾಜ ವಿಜ್ಞಾನ ಶಿಕ್ಷಕಿ ರೀನಾ ಎಂ.ರವರು ಕರ್ತವ್ಯ ನಿರ್ವಹಿಸಿದರು. ಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ಚುನಾವಣಾ ಸಿಬ್ಬಂದಿಗಳಾಗಿ, ಪೊಲೀಸ್ ಬಂದೋಬಸ್ತ್‌ನೊಂದಿಗೆ ಚುನಾವಣೆಯು ಜರಗಿತು.

LEAVE A REPLY

Please enter your comment!
Please enter your name here