ಸವಣೂರು ಸಿ.ಎ, ಬ್ಯಾಂಕ್‌ನಿಂದ ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈಯವರಿಗೆ ಸನ್ಮಾನ

0

  • ಸೀತಾರಾಮ ರೈಯವರಿಗೆ ರಾಷ್ಟ್ರ ಮಟ್ಟದ ಕೃಷಿರತ್ನ ಪ್ರಶಸ್ತಿ ದೊರೆಯಲಿ- ಗಣೇಶ್ ನಿಡ್ವಣ್ಣಾಯ
  • ಸವಣೂರಿನಲ್ಲಿ 9ಲಕ್ಷ ರೂ, ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ, ಸ್ಥಾನಗೃಹ ನಿರ್ಮಾಣ- ಸೀತಾರಾಮ ರೈ
  • ಸೀತಾರಾಮ ರೈಯವರಿಗೆ ಸಹಕಾರಿ ರತ್ನ ಆರ್ಹವಾಗಿ ದೊರೆತಿದೆ-ಉದಯ ರೈ
  • ಸೀತಾರಾಮ ರೈ ಸವಣೂರಿನ ಅಭಿವೃದ್ಧಿ ರೂವರಿ- ಮಹಾಬಲ ಶೆಟ್ಟಿ
  • ಪದ್ಮಶ್ರೀ ಪ್ರಶಸ್ತಿ ದೊರೆಯಲಿ- ಗಿರಿಶಂಕರ್ ಸುಲಾಯ
  • ಸವಣೂರಿಗೆ ಬಹುದೊಡ್ಡ ಕೊಡುಗೆ- ರಾಜೀವಿ ಶೆಟ್ಟಿ
  • ಸೀತಾರಾಮ ರೈಯವರಿಂದ ಸವಣೂರಿಗೆ ಹೆಸರು- ಚಂದ್ರಶೇಖರ್ ಪಿ. 

ಚಿತ್ರ- ಸಿಂಧೂರ್ ಸವಣೂರು

ಪುತ್ತೂರು: ಸವಣೂರು ಸಿ.ಎ,ಬ್ಯಾಂಕ್ ವತಿಯಿಂದ ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಹಕಾರಿ ಸವಣೂರು ಕೆ. ಸೀತಾರಾಮ ರೈಯವರನ್ನು ಸನ್ಮಾನಿಸುವ ಸಮಾರಂಭವು ಮೇ. 30ರಂದು ಬ್ಯಾಂಕಿನ ಸಭಾಭವನದಲ್ಲಿ ಜರಗಿತು.

ಸೀತಾರಾಮ ರೈಯವರಿಗೆ ರಾಷ್ಟ್ರ ಮಟ್ಟದ ಕೃಷಿರತ್ನ ಪ್ರಶಸ್ತಿ ದೊರೆಯಲಿ- ಗಣೇಶ್ ನಿಡ್ವಣ್ಣಾಯ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸವಣೂರು ಸಿ.ಎ, ಬ್ಯಾಂಕಿನ ಅಧ್ಯಕ್ಷ ಗಣೇಶ್ ನಿಡ್ವಣ್ಣಯರವರು ಮಾತನಾಡಿ ಸವಣೂರು ಕೆ.ಸೀತಾರಾಮ ರೈಯವರು ಸವಣೂರು ಸಿ, ಎ, ಬ್ಯಾಂಕಿನಲ್ಲಿ ಆಡಳಿತಾಧಿಕಾರಿಯಾಗಿ, ಆಬಳಿಕ 25 ವರ್ಷಗಳ ಕಾಲ ಅಧ್ಯಕ್ಷರಾಗಿ ಅಮೂಲ್ಯವಾದ ಸೇವೆ ಸಲ್ಲಿಸಿರುವುದರ ಜೊತೆಗೆ ತಾಲೂಕಿನಾದ್ಯಾಂತ ಹತ್ತು ಹಲವು ಸಂಸ್ಥೆಗಳನ್ನು ಬೆಳೆಸಿದ್ದಾರೆ. ರೈಯವರು ಕೃಷಿ ಕ್ಷೇತ್ರದಲ್ಲೂ ಬಹಳಷ್ಟು ಹೆಸರುಗಳಿಸಿದ್ದಾರೆ. ಅವರಿಗೆ ಮುಂಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದ ಕೃಷಿರತ್ನ ಪ್ರಶಸ್ತಿ ದೋರೆಯಲಿ ಎಂದು ಶುಭಹಾರೈಸಿದರು.

ಸವಣೂರಿನಲ್ಲಿ 9ರೂ, ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ, ಸ್ಥಾನಗೃಹ ನಿರ್ಮಾಣ-ಕೆ. ಸೀತಾರಾಮ ರೈ ಸವಣೂರು

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸವಣೂರು ಸೀತಾರಾಮರೈಯವರು ಸವಣೂರಿನ ಸಿ.ಎ,ಬ್ಯಾಂಕಿಗೆ 1982ರಲ್ಲಿ ನಾನು ಆಡಳಿತಾಧಿಕಾರಿಯಾಗಿ ಬಂದೆ, ಆಬಳಿಕ ಸಂಸ್ಥೆಯ ಪುನಶ್ಚೇತನಕ್ಕಾಗಿ ಕೆಲಸ ಮಾಡಿ, ಇದೇ ಸಂಸ್ಥೆಯಲ್ಲಿ 25 ವರ್ಷಗಳ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆಯಿತು. ಸಹಕಾರಿ ಸಂಸ್ಥೆಯು ಜನರ ಜೀವನಾಡಿ, ಇಲ್ಲಿ ನೇರವಾಗಿ ಶ್ರೀಸಾಮನ್ಯರು ವ್ಯವಹಾರಕ್ಕೆ ಬರುತ್ತಾರೆ. ಇಂದಿಗೂ ಸಹಕಾರಿ ಸಂಸ್ಥೆಗಳು ಜನರೊಂದಿಗೆ ಬೆರೆಯುವ ಸಂಸ್ಥೆಯಾಗಿ ಉಳಿದಿದೆ. ಸವಣೂರು ಸಿ. ಎ, ಬ್ಯಾಂಕ್‌ನವರು ನೀಡಿರುವ ಸನ್ಮಾನವನ್ನು ಕೃತಜ್ಞತಪೂರ್ವಕವಾಗಿ ಸ್ವೀಕಾರ ಮಾಡಿದ್ದೇನೆ ಎಂದು ಹೇಳಿ, ನನ್ನ ಹುಟ್ಟು ಹಬ್ಬದ ನೆನೆಪಿಗಾಗಿ ಸವಣೂರಿನಲ್ಲಿ ಸುಮಾರು 9 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತವಾದ ಶೌಚಾಲಯ, ಸ್ಥಾನಗೃಹವನ್ನು ನಿರ್ಮಿಸಲಾಗುತ್ತಿದ್ದು, ಇಲ್ಲಿ ಸೋಲಾರ್‌ನಿಂದ ಬಿಸಿನೀರಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದರ ಉದ್ಘಾಟನೆಯು ಜೂ. 9 ರಂದು ನೇರವೇರಲಿದೆ ಎಂದು ಹೇಳಿ, ಸವಣೂರಿನ ಸರ್ವೋತಮುಖ ಅಭಿವೃದ್ಧಿಯೇ ನನ್ನ ಉಸಿರಾಗಿದ್ದು, ನನ್ನ ಎಲ್ಲಾ ಸೇವಾ ಕಾರ್‍ಯಗಳಿಗೆ ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ಹೇಳಿದರು.

ಸೀತಾರಾಮ ರೈಯವರಿಗೆ ಸಹಕಾರಿ ರತ್ನ ಆರ್ಹವಾಗಿ ದೊರೆತಿದೆ-ಉದಯ ರೈ ಮದೋಡಿ

ಸವಣೂರು ಸಿ.ಎ, ಬ್ಯಾಂಕ್ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಲ ಬೆಂಗಳೂರು ಇದರ ನಿರ್ದೇಶಕರಾದ ಉದಯ ರೈ ಮಾದೋಡಿರವರು ಮಾತನಾಡಿ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದೇ, ಎಲ್ಕರೊಂದಿಗೆ ಅತ್ಮೀಯವಾಗಿ ಬೆರೆಯುವ, ಹಿರಿಯ ಸಹಕಾರಿ ಸವಣೂರು ಕೆ.ಸೀತಾರಾಮ ರೈರವರಿಗೆ ಅರ್ಹವಾಗಿ ಪ್ರಶಸ್ತಿ ಬಂದಿದೆ. ಸವಣೂರಿನಿಂದ ಹಿಡಿದು ಬೆಂಗಳೂರು ತನಕ ಸಹಕಾರ ಕ್ಷೇತ್ರದಲ್ಲಿ ಹೆಸರನ್ನು ಪಡೆದಿದ್ದಾರೆ. ರೈಯವರು ಉತ್ತಮ ಸಹಕಾರಿ ಮಾತ್ರವಲ್ಲದೇ, ಸತತ ಪರಿಶ್ರಮ ಜೀವಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೀತಾರಾಮ ರೈ ಸವಣೂರಿನ ಅಭಿವೃದ್ಧಿ ರೂವರಿ- ಮಹಾಬಲ ಶೆಟ್ಟಿ ಕೊಮ್ಮಂಡ

ಸವಣೂರು ಸಿ. ಎ, ಬ್ಯಾಂಕಿನ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡರವರು ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿ ಸೀತಾರಾಮ ರೈಯವರು ಸವಣೂರಿಗೆ ಬಂದ ಬಳಿಕ, ಇಲ್ಲಿ ಅಭಿವೃದ್ಧಿಯ ಅಧ್ಯಾಯವನ್ನು ಪ್ರಾರಂಭಿಸಿದರು, ಎಲ್ಲರೊಂದಿಗೆ ಬೆರೆಯುವ , ಎಲ್ಲರನ್ನು ಪ್ರೋತ್ಸಾಹಿಸುವ ಸೀತಾರಾಮ ರೈಯವರು ಬಡತನದಲ್ಲಿ ಇದ್ದವರಿಗೆ ಉದ್ಯೋಗವನ್ನು ನೀಡಿ, ಬಾಳು ಬೆಳಗಿಸಿದ ಮಹಾನ್ ವ್ಯಕ್ತಿ ಎಂದು ಪ್ರಶಂಸಿದರು.

ಸೀತಾರಾಮ ರೈಯವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯಲಿ- ಗಿರಿಶಂಕರ್ ಸುಲಾಯ

ಸವಣೂರು ಗ್ರಾ.ಪಂ, ಸದಸ್ಯ ಹಾಗೂ ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯರವರು ಮಾತನಾಡಿ ಸೀತಾರಾಮ ರೈ ಸಾಧನೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಅವರು ನಿರಂತರವಾದ ಶ್ರಮ ಜೀವಿಯಾಗಿದ್ದು, ಅನೇಕ ದೇವಸ್ಥಾನಗಳ ಜೀಣೋದ್ಧಾರ ಕಾರ್‍ಯದಲ್ಲಿ ತೊಡಗಿಸಿಕೊಂಡು, ಧಾರ್ಮಿಕ ಕಾರ್‍ಯದ ಜೊತೆಗೆ ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೂ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ, ಅವರ ಸಾಧನೆಯು ಸಮಾಜಕ್ಕೆ ಮಾದರಿಯಾಗಿದ್ದು, ಮುಂಬರುವ ದಿನಗಳಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆಯಬೇಕೆಂದು ಆಶಯ ವ್ಯಕ್ತಪಡಿಸಿದರು.

ಬಹುದೊಡ್ಡ ಕೊಡುಗೆ- ರಾಜೀವಿ ಶೆಟ್ಟಿ

ಸವಣೂರು ಗ್ರಾ.ಪಂ, ಅಧ್ಯಕ್ಷೆ ರಾಜೀವಿ ಶೆಟ್ಟಿ ಕೆಡೆಂಜಿರವರು ಮಾತನಾಡಿ ಸವಣೂರು ಸೀತಾರಾಮ ರೈಯವರಿಂದ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ದೊರೆತಿದೆ. ಇದೀಗ ಸವಣೂರಿಗೆ ಅಗತ್ಯವಾಗಿ ಬೇಕಾದ ಶೌಚಾಲಯ ಮತ್ತು ಸ್ಥಾನಗೃಹವನ್ನು ತಮ್ಮ ಹುಟ್ಟು ಹಬ್ಬದ ಕೊಡುಗೆಯಾಗಿ ನೀಡಿರುವ ರೈಯವರು ಸೇವಾ ಕಾರ್‍ಯ ಪ್ರಶಂಶನೀಯ ಎಂದು ಹೇಳಿದರು.

ಸೀತಾರಾಮ ರೈಯವರಿಂದ ಸವಣೂರಿಗೆ ಹೆಸರು- ಚಂದ್ರಶೇಖರ್ ಪಿ.

ಸವಣೂರು ಸಿ, ಎ, ಬ್ಯಾಂಕಿನ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ,ರವರು ಮಾತನಾಡಿ ಸೀತಾರಾಮ ರೈ ಶಿಸ್ತು ಮತ್ತು ಸಮಯಪಾಲನೆಗೆ ಮಹತ್ವವನ್ನು ನೀಡುವ ವ್ಯಕ್ತಿಯಾಗಿದ್ದು, ಅವರು ಪರಿಶ್ರಮಜೀವಿಯಾಗಿದ್ದು, ಉತ್ತಮ ಸಹಕಾರಿಯಾಗಿ, ಜೊತೆಗೆ ವಿವಿಧ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡಿದ್ದಾರೆ. ಸೀತಾರಾಮ ರೈಯವರಿಂದ ಸವಣೂರಿಗೆ ಹೆಸರು ಬಂತು ಜೊತೆಗೆ ಗ್ರಾಮೀಣ ಭಾಗವಾಗಿದ್ದ ಈ ಪ್ರದೇಶ ಅಭಿವೃದ್ಧಿಯ ಶಕೆಯನ್ನು ಕಂಡಿತು ಎಂದು ಮೆಚ್ಚುಗೆ ವ್ಯಕ್ತಡಿಸಿದರು.

ಸವಣೂರು ಸಿ, ಎ. ಬ್ಯಾಂಕಿನ ನಿರ್ದೇಶಕರುಗಳಾದ ಡಿ.ಸೋಮನಾಥ ಕನ್ಯಾಮಂಗಲ, ಕರುಣಾಕರ ಪೂಜಾರಿ ಪಟ್ಟೆ, ತಿಮ್ಮಪ್ಪ ಗೌಡ ಮುಂಡಾಲ, ನಾರಾಯಣ ಗೌಡ ಪೂವ, ತನಿಯಪ್ಪ ನಾಯ್ಕ ಕಾರ್ಲಾಡಿ, ನಿರ್ಮಲ ಕೇಶವ ಗೌಡ ಅಮೈ, ವೇದಾವತಿ ಕೆಡೆಂಜಿ, ಚೇತನ್ ಕುಮಾರ್ ಕೋಡಿಬೈಲು, ಸವಣೂರಿನ ಹಿರಿಯ ಉದ್ಯಮಿ ಸವಣೂರು ಎನ್.ಸುಂದರ ರೈ, ಸವಣೂರು ಡಿಸಿಸಿ, ಬ್ಯಾಂಕ್ ಮೇನೇಜರ್ ವಿಶ್ವನಾಥ್, ಸವಣೂರು ಸಿ.ಎ, ಬ್ಯಾಂಕ್‌ನ ಸೂಪರ್ ವೈಸರ್ ವಸಂತ್ ಎಸ್, ಸವಣೂರು ಬೆನಸ ರಬ್ಬರ್ ಸೊಸೈಟಿಯ ಅಧ್ಯಕ್ಷ ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಕಾರ್‍ಯದರ್ಶಿ ಎ.ಅಚ್ಚುತ, ಸವಣೂರು ಸಿ, ಎ, ಬ್ಯಾಂಕಿನ ನಿವೃತ್ತ ಸಹಾಯಕ ಕಾರ್‍ಯನಿರ್ವಹಣಾದಿಕಾರಿ ಕುಸುಮಾ ಪಿ.ಶೆಟ್ಟಿ ಕೆರೆಕೋಡಿ, ನಿವೃತ್ತ ಶಾಖಾ ಮೇನೇಜರ್ ಬೇಬಿ ಜೆ.ರೈ, ನಿವೃತ್ತ ಗುಮಾಸ್ತ ಕೇಪು, ಬೆಳಂದೂರು ಶಾಖಾ ಮ್ಯಾನೇಜರ್ ಪಕೀರ ಹಾಗೂ ಸಿ, ಎ, ಬ್ಯಾಂಕಿನ ಹಾಗೂ ಶಾಖಾ ಕಚೇರಿಯ ಎಲ್ಲಾ ಸಿಬ್ಬಂದಿಗಳು, ಸವಣೂರು ಮಾಸ್ ಸಂಸ್ಥೆಯ ವ್ಯವಸ್ಥಾಪಕ ಯತೀಶ್, ಸಿ, ಎ, ಬ್ಯಾಂಕಿನ ಸರಪರರಾದ ಪದ್ಮನಾಭ ಆಚಾರ್ಯ ಹಾಗೂ ಪಿಗ್ಮಿ ಸಂಗ್ರಹಕಾರು ಉಪಸ್ಥಿತರಿದ್ದರು.

ಸವಣೂರು ಸಿ, ಎ, ಬ್ಯಾಂಕಿನ ಸಹಾಯಕ ಕಾರ್‍ಯನಿರ್ವಹಣಾದಿಕಾರಿ ಜಲಜಾ ಎಚ್.ರೈ ಮತ್ತು ನವೋದಯ ಪ್ರೇರಕಿ ಪ್ರೇಮರವರು ಪ್ರಾರ್ಥನೆಗೈದರು. ಸವಣೂರು ಸಿ, ಎ, ಬ್ಯಾಂಕಿನ ಉಪಾಧ್ಯಕ್ಷ ತಾರಾನಾಥ ಕಾಯರ್ಗ ವಂದಿಸಿದರು, ಬ್ಯಾಂಕಿನ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಕಾರ್‍ಯಕ್ರಮ ನಿರೂಪಿಸಿದರು.

ಸಂಭ್ರಮದಿಂದ ಕೂಡಿದ ಸನ್ಮಾನ ಸಮಾರಂಭ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಸವಣೂರು ಕೆ.ಸೀತಾರಾಮ ರೈರವರಿಗೆ ಸವಣೂರು ಸಿ, ಎ.ಬ್ಯಾಂಕ್ ವತಿಯಿಂದ ಸಂಭ್ರಮದಿಂದ ಕೂಡಿದ ಸನ್ಮಾನವನ್ನು ಮಾಡಲಾಯಿತು. ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರೂ ಸೀತಾರಾಮ ರೈ ಸಾಧನೆಯ ಬಗ್ಗೆ ಪ್ರಶಂಶಿಸಿದರು. ರೈಯವರ 75 ನೇ ಹುಟ್ಟು ಹಬ್ಬದ ಸಂಭ್ರಮದ ಕಾಲಘಟದಲ್ಲಿ ಸಹಕಾರಿ ರತ್ನ ಪ್ರಶಸ್ತಿಯು ದೊರೆತಿರುವುದು ಸವಣೂರಿಗೆ ಸಂತಸದ ಕ್ಷಣವಾಗಿದೆ.

LEAVE A REPLY

Please enter your comment!
Please enter your name here