ಬಡಗನ್ನೂರುಃ ಪಟ್ಟೆ ಬಡಗನ್ನೂರು ಪ್ರಗತಿ ಬಂಧು – ಸ್ವಸಹಾಯ ಸಂಘಗಳ ಎ ಒಕ್ಕೂಟದ ಪದಗ್ರಹಣ ಸಮಾರಂಭ

0

ಚಿತ್ರ ಪಟ್ಟೆ ಬಡಗನ್ನೂರು ಎ ಒಕ್ಕೂಟದ ಪದಗ್ರಹಣ

ಬಡಗನ್ನೂರುಃ ಪಟ್ಟೆ ಬಡಗನ್ನೂರು ಪ್ರಗತಿ ಬಂಧು – ಸ್ವಸಹಾಯ ಸಂಘಗಳ ಎ ಒಕ್ಕೂಟದ ಪದಗ್ರಹಣ ಸಮಾರಂಭವು ಪರಪುಜ್ಯ ರಾಜರ್ಷಿ ಡಾ ಡಿ.ವಿ ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಕೃಪಾಶೀರ್ವಾದಗಳೊಂದಿಗೆ ಪಟ್ಟೆ ಶ್ರೀ ಕೃಷ್ಣ ಹಿ ಪ್ರಾ.ಶಾಲಾ ಸಭಾಂಗಣದಲ್ಲಿ ಮೇ.29 ರಂದು ನಡೆಯಿತು.

ಕಾರ್ಯಕ್ರಮವನ್ನು ಪಟ್ಟೆ ಶ್ರೀ ಕೃಷ್ಣ ಹಿ ಪ್ರಾ.ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಧ.ಗ್ರಾ ಯೋಜನೆ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಡಕುಟುಂಬದವರನ್ನು ಅರ್ಥಿಕ, ಸಮಾಜಿಕ ಹಾಗೂ ಶೈಕ್ಷಣಿಕವಾಗಿ ಬಲಿಷ್ಠ ಗೊಳಿಸಿದೆ. ಮಧ್ಯೆ ವರ್ಜನ ಶಿಭಿರದ ಮೂಲಕ ದಾರಿ ತಪ್ಪಿದವರನ್ನು ಸಮಾಜದ ಮುಖ್ಯವಾಹಿನಿ. ತಂದು ಅವರ ಜೀವನ ಸುಭದ್ರಗೊಳಿಸುವ ಕಾರ್ಯ ಗ್ರಾಮಾಭಿವೃದ್ದಿ ಯೋಜನೆಯಿಂದ ಅಗಿದೆ ಎಂದು ಹೇಳಿ ಶುಭ ಹಾರಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಪುತ್ತೂರು ಬಿಸಿ ಟ್ರಸ್ಟ್ ನ ಯೋಜನಾಧಿಕಾರಿ ಅನಂದ ಎ, ಮಾತನಾಡಿ ಯೋಜನೆಯ ಕಾರ್ಯವೈಖರಿ 1982 ಆರಂಭಗೊಂಡು ಪುತ್ತೂರು ತಾಲೂಕಿಗೆ ೨೦೦೨ ಪದಾರ್ಪಣೆ ಗೊಂಡಿತು. ಗ್ರಾಮಾಭಿವೃದ್ದಿ ಯೋಜನೆ ಸೇವಾ ಕ್ಷೇತ್ರ ಯಾವುದೇ ಯೋಜನೆಯ ಕೆಲಸ ಕಾರ್ಯಗಳು ಸಮರ್ಪಕ ನಡೆಸುವ ಉದ್ದೇಶ.
ಮನುಷ್ಯನ ಹುಟ್ಟಿನಿಂದ ಸಾವಿನ ವರೆಗಿಗನ ಕಾರ್ಯಕ್ರಮವನ್ನು ಪೂಜ್ಯರು ಅಂಭಿಕೊಂಡಿದ್ದಾರೆ.

ಸಿ.ಎಸ್ ಸಿ ಕಾರ್ಯಕ್ರಮದಡಿ ಗ್ರಾಮ ಮಟ್ಟದಲ್ಲಿ ಸಿ.ಎಸ್.ಸಿ ಕೇಂದ್ರ ರಚಿಸುವುದು. ಹಾಗೂ ಪ್ರತಿ ಸದಸ್ಯರಿಗೂ ಸಿಸಿ ಖಾತೆ ರಚಿಸಿ ತಮ್ಮ ವ್ಯವಹಾರ ಹೆಚ್ಚಿಸುವ ಬಗ್ಗೆ ಪೂಜ್ಯ ಕಾವೊಂದರ ಮಹತ್ವದ ಕಾರ್ಯಕ್ರಮವಾಗಿದೆ .ಎಂದ ಅವರು ಕಳೆದ ಎರಡು ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿದ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.ನೂತನ ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಹೂ ಕೊಟ್ಟು ಅಭಿನಂದಿಸಿದರು.

ಪಟ್ಟೆ ಶ್ರೀ ಕೃಷ್ಣ ಹಿ ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶಂಕರಿ ಧಾರ್ಮಿಕ ಭಾವನೆಯಿಂದ ಪ್ರಾರಂಭವಾದ ಈ ಯೋಜನೆ ಕಾರ್ಯಗಳು ಬಳಿಕ ಶೈಕ್ಷಣಿಕ ಸಾಮಾಜಿಕ ಆರ್ಥಿಕ ಕ್ಷೇತ್ರದಲ್ಲಿ ಪಸರಿಸಿ ಇಡೀ ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.. ಶ್ರೀ ಕ್ಷೇತ್ರದ ಹಾಗೂ ಪೂಜ್ಯರ ಮತ್ತು ಮಾತೃಶ್ರೀ ಅಮ್ಮನ ಆಶೀರ್ವಾದದಿಂದ. ಗಾಂದಿಜೀ ಗ್ರಾಮರಾಜ್ಯದ ಕನಸು ನನಸಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಅರಿಯಡ್ಕ ವಲಯ ವಲಯಾಧ್ಯಕ್ಷ ನವೀನ ಬಿ.ಡಿ,,ಬೆಟ್ಟಂಪಾಡಿ ವಲಯ ವಲಯಾಧ್ಯಕ್ಷ ನವೀನ ಕುಮಾರ್ ಯಂ ಸಂದರ್ಭೋಚಿತ ಮಾತನಾಡಿದರು. ಸಬೆಯು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕನ್ನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನವಜೀವನ ಸಮಿತಿ ವಲಯಾಧ್ಯಕ್ಷ ಸೀತಾರಾಮ ಮುಂಡೋಳೆ, ಮಾಜಿ ಗ್ರಾ.ಪಂ ಸದಸ್ಯ ಬಾಲಕೃಷ್ಣ ಮೂಂಡೋಳೆ, ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷ ಚನಿಯಪ್ಪ ನಾಯ್ಕ, ಕಾರ್ಯದರ್ಶಿ ಸರ್ವಾಣಿ ಶೆಟ್ಟಿ, ಜೊತೆ ಕಾರ್ಯದರ್ಶಿ ವೀಣಾ, ಕೋಶಾಧಿಕಾರಿ ಸುಂದರ ನಾಯ್ಕ. ನೂತನ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಉಪಾಧ್ಯಕ್ಷ ಸವಿತಾ ಕಾರ್ಯದರ್ಶಿ ದಿವ್ಯ, ಜೊತೆ ಕಾರ್ಯದರ್ಶಿ ಚಂದ್ರಾವತಿ ಕೋಶಾಧಿಕಾರಿ ನಾರಾಯಣ ನಾಯ್ಕ ಹಾಗೂ ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದರು.

ಸೇವಾ ಪ್ರತಿನಿಧಿಗಳಾದ ಜಯಲಕ್ಷ್ಮಿ ಪಟ್ಟೆ ಸ್ವಾಗತಿಸಿದರು. ಸಾವಿತ್ರಿ ಪೊನ್ನೆತ್ತಡ್ಕ ವಂದಿಸಿದರು. ಧನಲಕ್ಷಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ವಾಚಿಸಿದರು.ಅರಿಯಡ್ಕ ವಲಯ ಮೇಲ್ವಿಚಾರಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here