ಖಾಝಿ ಪದವಿ ಅತೀ ಜವಾಬ್ದಾರಿಯುತ ಸ್ಥಾನ: ಸಯ್ಯಿದುಲ್ ಉಲಮಾ ಜಿಫ್ರೀ ತಂಙಳ್

0

ಪುತ್ತೂರು: ಖಾಝಿ ಪದವಿಯು ಅತಿ ಜವಾಬ್ದಾರಿಯುತ ಸ್ಥಾನವಾಗಿದ್ದು ಅತ್ಯಂತ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕಾದ ವಿಚಾರವಾಗಿದೆ ಎಂದು ಸೈಯದ್ ಉಲಮಾ ಸೈಯದ್ ಜೀಫ್ರಿ ಮುತುಕೊಯ ತಂಙಲ್ ಹೇಳಿದರು.ಅವರು ಪರ್ಲಡ್ಕ ಮುಹಿಯುದ್ದೀನ್ ಜಮಾಅತ್ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡುತ್ತಾ ಪೂರ್ವಿಕ ಉಲಮಾಗಳು ಅತ್ಯಂತ ಭಯದಿಂದ ಖಾಝಿ ಸ್ಥಾನ ನನ್ನು ಕಂಡಿದ್ದು , ಸಾಧ್ಯವಾದಷ್ಟು ಆ ಪದವಿಯಿಂದ ಹಿಂಜರಿಯುತ್ತಿದ್ದರು.ನಾಳೆ ಪರಲೋಕದಲ್ಲಿ ಪ್ರಶ್ನಿಸಲ್ಪಡುವ ಜವಾಬ್ದಾರಿಯುತ ವಿಷಯವಾಗಿ ಅದನ್ನು ಅವರು ಕಂಡಿದ್ದರು ಎಂದು ಹೇಳಿದರು.

ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸಿದ ಸಮಾರಂಭವನ್ನು ಸಮಸ್ತ ದಕ್ಷಿಣ ಕರ್ನಾಟಕ ಮುಶಾವರ ಅಧ್ಯಕ್ಷರಾದ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಉದ್ಘಾಟಿಸಿದರು. ಪ್ರಾರಂಭದಲ್ಲಿ ಪುತ್ತೂರು ತಾಲೂಕು ಜಂ ಇಯ್ಯತುಲ್ ಉಲಮಾ ಅಧ್ಯಕ್ಷರಾದ ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ದುಆಶೀರ್ವಚನ ನೀಡಿದರು. ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸೈಯ್ಯಿದ್ ಜಿಫ್ರೀ ಮುತ್ತು ಕೋಯ ತಂಙಳ್ ರವರನ್ನು ಜಮಾಅತರ ಪರವಾಗಿ ಪರ್ಲಡ್ಕ ಜಮಾಅತ್ ಖಾಝಿಯಾಗಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ಬೈಅತ್ ನಿರ್ವಹಿಸಿದರು.ಸಮಸ್ತ ಉಪಾಧ್ಯಕ್ಷರಾದ ಯು.ಎಂ ಉಸ್ತಾದ್ ಮೊಗ್ರಾಲ್ ಶಿರೋವಸ್ತ್ರ ಧಾರಣೆಗೈದರು ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ, ಉಳ್ಳಾಲ ಸಯ್ಯದ್ ಮದನಿ ಕಾಲೇಜು ಪ್ರಾಂಶುಪಾಲರಾದ ಉಸ್ಮಾನ್ ಫೈಝಿ ತೋಡಾರು, ಪುತ್ತೂರು ಅನ್ಸಾರುದ್ದೀನ್ ಸಮಿತಿ ಅಧ್ಯಕ್ಷ ಎಲ್.ಟಿ.ಅಬ್ದುರ್ರಝಾಕ್ ಹಾಜಿ ಶುಭಹಾರೈಸಿದರು. ಸ್ಥಳೀಯ ಖತೀಬ್ ಅಬ್ದುಲ್ ರಶೀದ್ ರಹ್ಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಸುಲ್ ಉಲಮಾ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಅಬ್ಬಾಸ್ ಫೈಝಿ ಪುತ್ತಿಗೆ, ಫಾರೂಕ್ ಸಹದಿ ಬಪ್ಪಳಿಗೆ, ಅಬ್ದುಲ್ ಹಮೀದ್ ಹನೀಫಿ ದರ್ಬೆ,ಎ.ಎಸ್ ಕೌಸರಿ ವಳತ್ತಡ್ಕ ಅತಿಥಿಗಳಾಗಿ ಭಾಗವಹಿಸಿದರು.



ಶಂಸುಲ್ ಉಲಮಾ ಮೆಮೋರಿಯಲ್ ಕಾಲೇಜು, ಇಎಸ್ಎಸ್ ವೈ ಎಸ್ ಯಂಗ್ ಮೆನ್ಸ್ ಪರ್ಲಡ್ಕ, ಎಸ್ ಕೆ ಎಸ್ ಎಸ್ ಎಫ್ ಪರ್ಲಡ್ಕ ಶಾಖೆ ಗಳ ವತಿಯಿಂದ ಸಯ್ಯಿದುಲ್ ಉಲಮಾ ರನ್ನು ಗೌರವಿಸಲಾಯಿತು. ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ಯವರನ್ನು ಜಮಾಅತ್ ಕಮಿಟಿಯ ಪದಾಧಿಕಾರಿಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಉಮರ್ ದಾರಿಮಿ ಸಾಲ್ಮರ ಸ್ವಾಗತಿಸಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಫಾರೂಕ್ ನಿಶ್ಮಾ ಧನ್ಯವಾದಗೈದರು. ಮುಸ್ತಫಾ ಫೈಝಿ ಮಲಪ್ಪುರಂ ಕಾರ್ಯಕ್ರಮ ನಿರೂಪಿಸಿದರು.ಜಮಾಅತ್ ಸಮಿತಿ ಪದಾಧಿಕಾರಿಗಳು, ಕಾಲೇಜು ಸಮಿತಿ ಪದಾಧಿಕಾರಿಗಳು, ಎಸ್ ಕೆ ಎಸ್ ಎಸ್ ಎಫ್, ಯಂಗ್ ಮೆನ್ಸ್ ಪದಾಧಿಕಾರಿಗಳು, ಜಮಾಅತ್ ಸದಸ್ಯರು ಸಹಿತ ಹಲವಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here