ವಿಕಲಚೇತನರ, ಮಾನಸಿಕ ಬುದ್ದಿಮಾಂದ್ಯರ ವಿಶೇಷ ವೈದ್ಯಕೀಯ ಪ್ರಮಾಣಪತ್ರ ಶಿಬಿರ

0

  • ಪ್ರತಿ ವಾರ ಶಿಬಿರ ಮಾಡಲು ಪ್ರಯತ್ನ – ಗಿರೀಶ್ ನಂದನ್

ಪುತ್ತೂರು:ವಿಕಲಚೇತನರ, ಮಾನಸಿಕ ಬುದ್ದಿಮಾಂದ್ಯ ವ್ಯಕ್ತಿಗಳ ವೈದ್ಯಕೀಯ ಪ್ರಮಾಣಪತ್ರ ನೀಡುವ ಕಾರ್ಯ ಆದಷ್ಟು ಬೇಗ ಮುಗಿಯಬೇಕು.ಮುಂದಿನ ದಿನ ಪ್ರತಿ ವಾರದಲ್ಲೊಂದು ದಿನ ಶಿಬಿರ ನಡೆಸುವ ಮೂಲಕ ಎಲ್ಲರಿಗೂ ಆದಷ್ಟು ಶೀಘ್ರವಾಗಿ ವೈದ್ಯಕೀಯ ಪ್ರಮಾಣ ಪತ್ರ ನೀಡುವಂತೆ ಪ್ರಯತ್ನ ಮಾಡಲಾಗುವುದು ಎಂದು ಸಹಾಯಕ ಕಮಿಷನರ್ ಗಿರೀಶ್‌ನಂದನ್ ಅವರು ಹೇಳಿದರು.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೇ 31ರಂದು ನಡೆದ ವಿಕಲಚೇತನರ, ಮಾನಸಿಕ ಬುದ್ದಿಮಾಂದ್ಯ ವ್ಯಕ್ತಿಗಳ ವಿಶೇಷ ವೈದ್ಯಕೀಯ ಪ್ರಮಾಣಪತ್ರ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.ವಿಕಲಚೇತನರಿಗೆ ಏನೇ ಸಮಸ್ಯೆ ಇದ್ದರೂ ಅವರು ನೇರವಾಗಿ ನನ್ನ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.ಅಥವಾ ಸೂಕ್ತ ವೈದ್ಯರಿಗೆ, ಮೇಲ್ವಿಚಾರಕರಿಗೆ ಕಾಲ್ ಮಾಡಬಹುದು ಎಂದ ಅವರು, ಚಿಕಿತ್ಸೆಗೆ ಬಾರದವರಿಗೆ ಅವರ ಮನೆಗೆ ಹೋಗಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.


ಯುಡಿಐಡಿ ಕಾರ್ಡ್ ಸಮಸ್ಯೆಯಿಲ್ಲ: 

ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಜ್ಯೋತಿ ಪುತ್ತೂರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿಕಲಚೇತನರ ತಪಾಸಣಾ ಶಿಬಿರವು ಪ್ರತಿ ತಿಂಗಳ 2ನೇ ಶುಕ್ರವಾರ ಮತ್ತು ೪ನೇ ಶುಕ್ರವಾರ ನಡೆಯುತ್ತಿದೆ.ಅದೇ ರೀತಿ ಮಾನಸಿಕ ರೋಗಿಗಳಿಗೆ ತಿಂಗಳ ೨ನೇ ಮಂಗಳವಾರ ತಪಾಸಣೆ ನಡೆಯುತ್ತಿದೆ.ಇತ್ತೀಚೆಗಿನ ಕೆಲವು ದಿನಗಳಲ್ಲಿ ಮನೋರೋಗದ ತಜ್ಞ ವೈದ್ಯರ ಕೊರತೆಯಿಂದ ಶಿಬಿರ ನಡೆದಿಲ್ಲ.ಆದರೆ ಇದೀಗ ಪೂರ್ಣಾವಧಿ ವೈದ್ಯರು ಇದ್ದಾರೆ.ಯುಡಿಐಡಿ ಕಾರ್ಡ್ ಬಹುತೇಕ ಮಂದಿಗೆ ಸಿಕ್ಕಿದೆ.ಕೆಲವು ತಾಂತ್ರಿಕ ತೊಂದರೆಯಿಂದ ಪೆಂಡಿಂಗ್ ಇದೆ.ಶಿಬಿರ ನಡೆದಂತೆ ಯಡಿಐಡಿ ಕಾರ್ಡ್ ಲಭ್ಯವಾಗಲಿದೆ.ಕೆಲವರು ಮೃತಪಟ್ಟವರಿದ್ದರೆ ಅವರ ನಿಧನ ಪ್ರಮಾಣ ಪತ್ರ ನಮಗೆ ಒಪ್ಪಿಸಿದರೆ ಉತ್ತಮ.ಪುನರ್ವಸತಿ ಕಾರ್ಯಕರ್ತರು ಈ ಕುರಿತು ಆದಷ್ಟು ಫಾಲೋ ಅಪ್ ಮಾಡಿ ಎಂದರು.ವಿಕಲಚೇತನ ಪುನರ್ವಸತಿ ನೋಡೆಲ್ ಅಧಿಕಾರಿ ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪುನರ್ವಸತಿ ಕಾರ್ಯಕರ್ತ ನವೀನ್ ಸ್ವಾಗತಿಸಿ, ವಂದಿಸಿದರು. ಸುಮಾರು 50ಕ್ಕೂ ಅಧಿಕ ಮಂದಿ ವಿಕಲಚೇತನ, ಮಾನಸಿಕ ಬುದ್ದಿಮಾಂದ್ಯ ವ್ಯಕ್ತಿಗಳನ್ನು ತಪಾಸಣೆ ಮಾಡಲಾಯಿತು.


ಸಮಸ್ಯೆಗಳಿದ್ದರೆ ನನಗೆ ತಿಳಿಸಿ
ವಿಶೇಷ ವೈದ್ಯಕೀಯ ಪ್ರಮಾಣಪತ್ರ ಶಿಬಿರ ಕಾರ್ಯಕ್ರಮದ ಬಳಿಕ ಸಹಾಯಕ ಕಮಿಷನರ್ ಗಿರೀಶ್‌ನಂದನ್ ಅವರು ವಿಕಲಚೇತನರು ಮತ್ತು ಬುದ್ದಿಮಾಂದ್ಯ ವ್ಯಕ್ತಿಗಳ ಜೊತೆ ಅವರ ಸಮಸ್ಯೆಗಳ ಮಾಹಿತಿಯನ್ನು ಪೋಷಕರ ಮೂಲಕ ಕೇಳಿ ಪಡೆದುಕೊಂಡರು.ಬುದ್ದಿಮಾಂದ್ಯ ಮಕ್ಕಳನ್ನು ತಾನೇ ಮಾತನಾಡಿಸಿ ಅವರ ಅಭಿರುಚಿಯನ್ನು ಕೇಳಿಕೊಂಡರು.ಸೂಕ್ತ ಚಿಕಿತ್ಸಾ ಸೌಲಭ್ಯ ದೊರೆಯುವಲ್ಲಿ ಸಮಸ್ಯೆ ಇದ್ದಲ್ಲಿ ನನಗೆ ಮಾಹಿತಿ ನೀಡಿ ಎಂದು ಸಹಾಯಕ ಕಮಿಷನರ್ ಅವರಿಗೆ ತಿಳಿಸಿದರು.

LEAVE A REPLY

Please enter your comment!
Please enter your name here