ರಾಮಕುಂಜ ಪದವಿ ಕಾಲೇಜಿನಲ್ಲಿ ’ಯೋಗ ಭಾರತೀ’ ಉದ್ಘಾಟನೆ

0

ರಾಮಕುಂಜ: ಯೋಗವು ಮನಸ್ಸಿನ ಹತೋಟಿಯನ್ನು ಸಾಧಿಸಲು ಉಪಯುಕ್ತ. ಜೀವನಪೂರ್ತಿ ಯೋಗಾಭ್ಯಾಸ ಮಾಡಬಹುದು, ಯುವಜನತೆ ಯೋಗದಂತಹ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕು ಎಂದು ಭಾರತ ಸರಕಾರದ ಸಾಂಸ್ಕೃತಿಕ ರಾಯಭಾರಿ ಹರೀಶ್ ಭಟ್ ನವಕೇವಳ ಹೇಳಿದರು.


ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಯೋಗ ತರಬೇತಿ ಉದ್ಘಾಟಿಸಿ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯ ಕೆ.ಲಕ್ಷ್ಮೀನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಉದ್ಯಮಿ ಶಿವಪ್ರಸಾದ್ ಇಜ್ಜಾವು ಶುಭ ಹಾರೈಸಿದರು. ತರಬೇತುದಾರರಾಗಿದ್ದ ಸಂತೋಷ್ ಪೆರಿಯಡ್ಕ ಅವರು ಭಾರತೀಯ ಯೋಗದ ಮಹತ್ವ ವಿವರಿಸಿದರು. ಪ್ರಾಂಶುಪಾಲ ಗಣರಾಜ ಕುಂಬ್ಳೆ ಸ್ವಾಗತಿಸಿದರು. ಉಪನ್ಯಾಸಕಿ ಸುರಕ್ಷಿತ ಶೆಟ್ಟಿ ವಂದಿಸಿದರು. ಉಪನ್ಯಾಸಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here