ಎಸ್ಸೆಸ್ಸೆಫ್ ವತಿಯಿಂದ ಪುತ್ತೂರಿನಲ್ಲಿ ವಿಶ್ವ ಪರಿಸರ ದಿನಾಚರಣೆ-ಕ್ಯಾಂಪಸ್ ಅಸೆಂಬ್ಲಿ ಕಾರ್ಯಕ್ರಮದ ಸಮಾಲೋಚನಾ ಸಭೆ

0

ಪುತ್ತೂರು: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ (ಈಸ್ಟ್) ವತಿಯಿಂದ ಪರಿಸರ ದಿನಾಚರಣೆ ಭಾಗವಾಗಿ ಸಸಿ ವಿತರಣಾ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ನಡೆಯಿತು. ನಡೆಸಲಾಯಿತು.

 


ರೇಂಜ್ ಫಾರೆಸ್ಟ್ ವಿಭಾಗ ಪುತ್ತೂರು ಮತ್ತು ಸೋಶಿಯಲ್ ಫಾರೆಸ್ಟ್ ರೇಂಜ್ ಬಂಟ್ವಾಳ ಇವರ ಸಹಕಾರದಿಂದ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ೪೦೦ಕ್ಕೂ ಅಧಿಕ ಸಸಿಗಳನ್ನು ವಿತರಿಸಲಾಯಿತು.

ನಂತರ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಕ್ಯಾಂಪಸ್ ಅಸೆಂಬ್ಲಿ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿ ನಾಯಕರೊಂದಿಗೆ ಸಮಾಲೋಚಿಸಲಾಯಿತು. ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ರಶೀದ್ ಮಡಂತ್ಯಾರ್ ಕ್ಯಾಂಪಸ್ ಅಸೆಂಬ್ಲಿ ಕುರಿತು ವಿವರಿಸಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಫೈಝಲ್ ಝುಹ್ರಿ ಕಲ್ಲುಗುಂಡಿಯವರು ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

ಜಿಲ್ಲಾಧ್ಯಕ್ಷರಾದ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರ.ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು. ಸಭೆಯಲ್ಲಿ ಜಿಲ್ಲಾ ನಾಯಕರಾದ ಹಕೀಮ್ ಮುಸ್ಲಿಯಾರ್ ನೆಲ್ಲಿಗುಡ್ಡೆ, ಜಹಾಝ್ ಅಳಿಕೆ, ಡಿವಿಷನ್ ಕ್ಯಾಂಪಸ್ ನಾಯಕರಾದ ಅಬ್ದುರ್ರಹ್ಮಾನ್ ಪದ್ಮುಂಜ, ಹಾರಿಸ್ ಅಡ್ಕ, ಸ್ವಾದಿಕ್ ಮಾಸ್ಟರ್ ಸುಳ್ಯ, ನವಾಝ್ ಜಾರಿಗೆಬೈಲು, ಇಬ್ರಾಹಿಂ ಕೋಡಪದವು ಹಾಗೂ ಪುತ್ತೂರು ಡಿವಿಷನ್ ಕಾರ್ಯದರ್ಶಿ ಮುಹ್ಸಿನ್ ಕಟ್ಟತ್ತಾರ್ ಉಪಸ್ಥಿತರಿದ್ದರು. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಶ್ಫಾಕ್ ಕೊಡಂಗಾಯಿ ಸ್ವಾಗತಿಸಿದರು. ಕ್ಯಾಂಪಸ್ ಕನ್ವೀನರ್ ಶಿಹಾಬ್ ರೆಹಮಾನ್ ಹಸನ್‌ನಗರ ವಂದಿಸಿದರು.

LEAVE A REPLY

Please enter your comment!
Please enter your name here