ಹೊಸಮಠ ಪ್ರಾ.ಕೃ.ಪ.ಸಂಘದಲ್ಲಿ ಪರಿಸರ ದಿನಾಚರಣೆ

0

  • ಅಕ್ಷಯ ಗೋಖಲೆಯವರ “ಪರಿಸರ” ಕೊಲಾಜ ಚಿತ್ರ ಬಿಡುಗಡೆ

ಕಡಬ: ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಪರಿಸರ ದಿನಾಚರಣೆ ಹಾಗೂ ಸಂಘದ ಮಾಜಿ ಅಧ್ಯಕ್ಷ ಶಶಾಂಕ ಗೋಖಲೆಯವರ ಪುತ್ರ ಅಕ್ಷಯ ಗೋಖಲೆಯವರು ನಿರ್ಮಿಸಿದ ಪರಿಸರಕ್ಕೆ ಸಂಬಂಧಪಟ್ಟ ಕೊಲಾಜ ಚಿತ್ರವನ್ನು ಜೂ.6ರಂದು ಬಿಡುಗಡೆಗೊಳಿಸಲಾಯಿತು.

ನಿವೃತ ಶಿಕ್ಷಕ ಡಾ. ಜಿ.ಜಿ ಮೆಹಂದಲೆರವರ ಮಾರ್ಗದರ್ಶನದಲ್ಲಿ ಅಕ್ಷಯ ಗೋಖಲೆಯವರು ರಚಿಸಿದ ಕೊಲಾಜ ಚಿತ್ರವನ್ನು ಸಹಕಾರಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲರವರು ಬಿಡುಗಡೆಗೊಳಿಸಿ, ಮಾತನಾಡಿ ಪರಿಸರದ ಗಿಡಗಳ ರಕ್ಷಣೆ ಅತ್ಯವಶ್ಯ, ಪರಿಸರದ ಗಿಡಗಳ ನಾಶದಿಂದ ಆಮ್ಲಜನಕದ ಕೊರತೆ ಉಂಟಾಗಿ ಬೇರೆ ಬೇರೆ ಕಾಯಿಲೆಗಳು ಬರುತ್ತದೆ ಎಂದರು.

ಕೋಲಾಜ ಚಿತ್ರ ರಚಿಸಲು ಮಾರ್ಗದರ್ಶನ ನೀಡಿದ ದ್ರೋಣಾಚಾರ್ಯ ಸನ್ಮಾನ ಪ್ರಶಸ್ತಿ ಪುರಸ್ಕ್ರತ ಡಾ. ಜಿ.ಜಿ.ಮೆಹಂದಳೆ ಮಾತನಾಡಿ, ಪರಿಸರ ಮಾನವನ ಉಸಿರು. ಮಾನವನ ಉಸಿರಿಗೆ ಹಸಿರು ಗಿಡ ಮರಗಳಿಂದಲೇ ಹೇರಳವಾಗಿ ಆಮ್ಲಜನಕ ಉತ್ಪತ್ತಿಯಾಗುವುದು. ಆಮ್ಲಜನಕವನ್ನು ಪ್ರಯೋಗಾಲಯದಲ್ಲಿ ಬೇರೆ ಬೇರೆ ದ್ರವಗಳಂತೆ ಕೃತಕವಾಗಿ ಉತ್ಪಾದಿಸಲು ಅಸಾಧ್ಯ. ಗಿಡಮರಗಳ ನಾಶ ಮಾನವನ ಸಂಕುಲಕ್ಕೆ ಮಾರಕ. ಮುಂದಿನ ದಿನಗಳಲ್ಲಿ ಆಮ್ಲಜನಕದ ಸಿಲಿಂಡರ್‌ಗಳನ್ನು ಪ್ರತಿಯೊಬ್ಬರು ಬೆನ್ನಿಗೆ ಹಾಕಿಕೊಂಡದನ್ನು ನೋಡಿ ಆಶ್ಚರ್ಯ ಪಡಬೇಕಾಗಿಲ್ಲ, ಈಗಾಗಲೇ ಕೋರೊನಾ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ತೊಂದರೆ ಅನುಭವಿಸಿದುದನ್ನು ಕಂಡಿದ್ದೇವೆ. ಈ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಮನೆ ಮನೆಗೆ ಬರದಂತೆ ತಡೆಯಲು ಆಮ್ಲಜನಕ ನೀಡುವ ಗಿಡಮರಗಳನ್ನು ನೆಟ್ಟು ಪೋಷಿಸಬೇಕಾದುದು ಎಲ್ಲರ ಕರ್ತವ್ಯ ಎಂದರು.

ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಚಿತ್ರ ಕಲಾವಿದ ಡಾ.ಮೆಹಂದಳೆಯವರನ್ನು ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರೊಡಗೂಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಶಶಾಂಕ ಗೋಖಲೆ, ಉಪಾಧ್ಯಕ್ಷ ಕೃಷ್ಣಪ್ಪ ದೇವಾಡಿಗ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ, ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಗೌಡ, ಸಂಘದ ನಿರ್ದೇಶಕರಾದ ಜಯಚಂದ್ರ ರೈ, ಪದ್ಮಯ್ಯ ಪೂಜಾರಿ, ನೀಲಯ್ಯ ಬನಾರಿ, ಸೀತಮ್ಮ, ಸೀತಾರಾಮ ಡಿ ಪಿ, ಕುಶಕುಮಾರ್, ಜಗನ್ನಾಥ ಜಿ, ಕುಕ್ಕ ಎನ್, ಸವಿತಾ ಸಿ ಜಿ, ಸಂಘದ ಸಿಬ್ಬಂದಿಗಳು ಹಾಗೂ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here