ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನಲ್ಲಿ ಶಾಲಾ ಚುನಾವಣೆ

0

ಕೆಯ್ಯೂರು:  ಕೆಪಿಎಸ್ ಕೆಯ್ಯೂರಿನ ಪ್ರೌಢಶಾಲಾ ವಿಭಾಗದ ಶಾಲಾ ನಾಯಕ ಹಾಗೂ ಉಪನಾಯಕ ಆಯ್ಕೆಗಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಲಾಯಿತು. ನಿಗದಿತ ನಮೂನೆಯಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರವನ್ನು ಚುನಾವಣಾಧಿಕಾರಿಗಳು ಪರಿಶೀಲಿಸಿ ಸ್ವೀಕರಿಸಿದರು. ದೋಷಪೂರ್ಣ ನಾಮಪತ್ರಗಳನ್ನು ತಿರಸ್ಕರಿಸಿದರು. ಶಾಲಾ ಧ್ವನಿವರ್ಧಕದ ಮೂಲಕ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಭಾಷಣ ಮಾಡಿ ತಮ್ಮ ಪ್ರಣಾಳಿಕೆಯನ್ನು ಮುಂದಿಟ್ಟರು. ಬಹಿರಂಗ ಪ್ರಚಾರ ಅಂತ್ಯಗೊಂಡ ಮರುದಿನ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಮತಪತ್ರಗಳು, ಮತಪೆಟ್ಟಿಗೆ, ಅಳಿಸಲಾರದ ಶಾಯಿ ಇತ್ಯಾದಿಗಳನ್ನು ಬಳಸಿ ಗುಪ್ತ ಮತದಾನ ನಡೆಸಲಾಯಿತು. ಶಾಲಾ ನಾಯಕನ ಸ್ಥಾನಕ್ಕೆ ಆರು, ಉಪನಾಯಕನ ಸ್ಥಾನಕ್ಕೆ ಆರು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ಎಣಿಕೆಯ ಬಳಿಕ ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ. ಎಸ್,  ಗೆದ್ದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು. ಶಾಲಾನಾಯಕನಾಗಿ ಸೆಬೀಲ್, ಉಪನಾಯಕನಾಗಿ ಮಹಮ್ಮದ್ ಮಿಕ್ ದಾದ್ ಆಯ್ಕೆಯಾದರು.
ಆ ಬಳಿಕ ಶಿಕ್ಷಕರು ಇತರ ಮಂತ್ರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಆಯಿಷತುಲ್ ಸಾಹಿಫ ಸಭಾಪತಿಯಾಗಿ  ಆಯ್ಕೆ  ಮಾಡಲಾಯಿತು. ಇಬ್ರಾಹಿಂ ಶಾಹಿದ್, ರೆದೀಶ್ ವಿ. ಆರ್ (ಗೃಹ ಮಂತ್ರಿ), ಸ್ಪಂದನಾ, ದೀಪ್ತಿ ಕೆ ಸಿ (ಶಿಕ್ಷಣ ಮತ್ತು ವಾರ್ತಾ ಮಂತ್ರಿ), ಮನ್ವಿತ್, ಪ್ರಫುಲ್ ಪಿ.ಟಿ (ಕ್ರೀಡಾ ಮಂತ್ರಿ), ಕೌಶಿಕ್ ರೈ, ನಿಶಾಂತ್ (ಕೃಷಿ ಮತ್ತು ನೀರಾವರಿ ಮಂತ್ರಿ), ವಿಶ್ಮಿತಾ, ಸೌಜನ್ಯ (ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ), ದೀಪ್ತಿ, ಪಿ.ಆರ್ ಮಿಥುನ್ (ಆಹಾರ ಮಂತ್ರಿ), ಪ್ರೀತಿಕಾ ಬಿ, ದೀಕ್ಷಾ ಎಂ.ಡಿ (ಸಾಂಸ್ಕೃತಿಕ ಮಂತ್ರಿ), ಸಿಂಚನಾ ಎಸ್, ಫಾತಿಮತ್ ಅಫೀಫ( ಪ್ರತಿಪಕ್ಷ ನಾಯಕರು) ಇದಲ್ಲದೇ ಪ್ರತೀ ತರಗತಿಯಿಂದ  ಪ್ರತಿ ಪಕ್ಷದ ಪ್ರತಿನಿಧಿಗಳನ್ನು ನೇಮಿಸಲಾಯಿತು. ಶಾಲಾ ಕೆಲಸಕಾರ್ಯಗಳು ಸುಗಮವಾಗಿ ನಡೆಯುವಂತೆ ವಿವಿಧ ತಂಡಗಳನ್ನು ರಚಿಸಲಾಯಿತು. ಮಹಮ್ಮದ್ ಉನೈಸ್ ಮತ್ತು ಬಳಗ (ತಾಂತ್ರಿಕ ತಂಡ), ಚರಿತ ಮತ್ತು ಬಳಗ (ಸ್ವಚ್ಛತಾ ತಂಡ), ಹರ್ಷ ಮತ್ತು ಬಳಗ (ಸಾಂಸ್ಕೃತಿಕ ತಂಡ), ಫಾತಿಮತ್ ತಸ್ಲೀಮ ಮತ್ತು ಬಳಗ ( ಕಾರ್ಯಕ್ರಮ ಸಿದ್ಧತಾ ತಂಡ), ಪ್ರೀತಿಕಾ ಮತ್ತು ಬಳಗ ( ಕಾರ್ಯಕ್ರಮ ವ್ಯವಸ್ಥೆ ನಿರ್ವಹಣಾ ತಂಡ) ಎಂದು ನೇಮಕಗೊಂಡರು.

LEAVE A REPLY

Please enter your comment!
Please enter your name here