ಬನ್ನೂರು ದೇವಸ್ಯ ಈಶ್ವರ ಗೌಡ, ತಿಮ್ಮಕ್ಕ ದಂಪತಿ ದಾಂಪತ್ಯ ಜೀವನದ ಸುವರ್ಣ ಸಂಭ್ರಮ

0

  • ಈಶ್ವರ ಗೌಡರವರ ಹುಟ್ಟು ಹಬ್ಬದ ಅಮೃತಮಹೋತ್ಸವ

ಪುತ್ತೂರು: ಬನ್ನೂರು ಗ್ರಾಮದ ದೇವಸ್ಯ ಮನೆ ಈಶ್ವರ ಗೌಡ ಮತ್ತು ತಿಮ್ಮಕ್ಕ ದಂಪತಿಯ ದಾಂಪತ್ಯ ಜೀವನದ ಸುವರ್ಣ ಸಂಭ್ರಮ ಹಾಗೂ ಈಶ್ವರ ಗೌಡರವರ ಹುಟ್ಟು ಹಬ್ಬದ ಅಮೃತಮಹೋತ್ಸವವನ್ನು ಗಣಹೋಮ, ಸತ್ಯನಾರಾಯಣ ಪೂಜೆಯೊಂದಿಗೆ ಜೂ.೩ರಂದು ಬನ್ನೂರು ಈಶಕೃಪಾ ನಿವಾಸದಲ್ಲಿ ನಡೆಯಿತು.

ಈಶ್ವರ ಗೌಡ ಮಕ್ಕಳಾದ ಗೀತಾ, ವಸಂತ, ಚಂದ್ರಶೇಖರ, ಅನಿತಾ, ಸೊಸೆಯಂದಿರಾದ ಕವಿತಾ, ಸ್ಮಿತಾ, ಅಳಿಯಂದಿರಾದ ಉಮೇಶ್ ಬೆದ್ರಾಳ, ಗಂಗಾಧರ ಕಲ್ಲಾಜೆ, ಮೊಮ್ಮಕ್ಕಳಾದ ಕೃತಿ ಸಂಪ್ರೀತ್, ಅಮೃತ್, ಗಾನ್ವಿ, ಸಹೋದರಿಯರಾದ ಸೀತಮ್ಮ, ಪೂವಕ್ಕ, ಸಹೋದರರಾದ ವೆಂಕಪ್ಪ ಗೌಡ, ಪದ್ಮಯ್ಯ ಗೌಡ ಹಾಗೂ ದೇವಸ್ಯ ಕುಟುಂಬಸ್ಥರು ಉಪಸ್ಥಿತರಿದ್ದರು.

ಈಶ್ವರ ಗೌಡರವರು ನ್ಯಾಯಾಂಗ ಇಲಾಖೆಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ 2005ರಲ್ಲಿ ನಿವೃತ್ತಿಯ ಬಳಿಕ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here