ಹಿಜಾಬ್ ವಿವಾದ ; ನಿಯಮ ಪಾಲನೆ ಬಗ್ಗೆ ಮುಚ್ಚಳಿಕೆ: ಆರು ವಿದ್ಯಾರ್ಥಿನಿಯರ ನಿರ್ಬಂಧ ವಾಪಸ್

0

ಉಪ್ಪಿನಂಗಡಿ: ಹಿಜಾಬ್ ವಿಚಾರವಾಗಿ ವಾರಗಳ ಹಿಂದೆ ತರಗತಿ ಪ್ರವೇಶಕ್ಕೆ ನಿರ್ಬಂಧಕ್ಕೊಳಪಟ್ಟ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಬುಧವಾರ ಕಾಲೇಜಿನ ಸಮವಸ ನಿಯಮಾಳಿಯನ್ನು ಉಲ್ಲಂಸುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟಿದ್ದು, ಕಾಲೇಜು ಸಮವಸ ನಿಯಮಾವಳಿಯಂತೆ ಬಂದ ಇವರಿಗೆ ತರಗತಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು.

ಕಾಲೇಜಿನ ಸಮವಸ ನಿಯಮಾವಳಿಯನ್ನು ಉಲ್ಲಂಸಿದ ಇನ್ನೂ ಒಟ್ಟು 25 ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ನಿರ್ಬಂಧವಿದೆ. ಅವರ ನಿರ್ಬಂಧದ ಗಡುವು ಮುಗಿದ ಬಳಿಕ ಕಾಲೇಜಿಗೆ ಮುಚ್ಚಳಿಕೆ ಬರೆದು ಕಾಲೇಜು ಸಮವಸ ನಿಯಮಾವಳಿಗೆ ಅನುಗುಣವಾಗಿ ನಡೆದುಕೊಂಡರೆ, ಅವರಿಗೂ ತರಗತಿ ಪ್ರವೇಶಕ್ಕೆ ಅವಕಾಶ ದೊರೆಯಲಿದೆ.

ಅಮಾನತುಗೊಂಡವರು ಸೇರಿ ಪ್ರತಿಭಟನೆಯಿಂದ ದೂರ ಸರಿದು ಮೊದಲ ಅವಽಯಲ್ಲಿ 35 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದರೆ, ಹಿಜಾಬ್ ಪ್ರತಿಭಟನೆಗಳು ಪ್ರಾರಂಭವಾದ ದಿನದಿಂದ, ವಿವಾದದಿಂದ ದೂರವಾಗಿ ಒಂದೆಡೆ ಕಾಲೇಜಿಗೂ ಬಾರದೇ ಇನ್ನೊಂದೆಡೆ ಪ್ರತಿಭಟನೆಯಲ್ಲೂ ಪಾಲ್ಗೊಳ್ಳದೇ ಅಂತರ ಕಾಯ್ದುಕೊಂಡ 11 ಮಂದಿ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಸಹಜ ಸ್ಥಿತಿಯ ಮಾಹಿತಿ ಪಡೆದು ಕಾಲೇಜಿಗೆ ಆಗಮಿಸಿ ತರಗತಿಗಳಿಗೆ ಹಾಜರಾಗಿದ್ದಾರೆ. ಇದರಿಂದಾಗಿ, ಒಟ್ಟು 101 ಮುಸ್ಲಿಮ್ ವಿದ್ಯಾರ್ಥಿಯರನ್ನು  ಹೊಂದಿರುವ ಕಾಲೇಜಿನಲ್ಲಿ  ಬುಧವಾರದಂದು ಸಮವಸ ನಿಯಮ ಪಾಲನೆಯೊಂದಿಗೆ  ತರಗತಿ ಪ್ರವೇಶಿಸಿದ ವಿದ್ಯಾರ್ಥಿನಿಯರ ಸಂಖ್ಯೆ 46 ಆಗಿದೆ.

LEAVE A REPLY

Please enter your comment!
Please enter your name here