ನಿವೃತ್ತ ದೈ.ಶಿ.ಶಿಕ್ಷಕ ಜೆರೋಮಿಯಸ್ ಪಾಸ್‌ರವರಿಗೆ 70ರ ಹುಟ್ಟುಹಬ್ಬದ ಸಂಭ್ರಮ, ಬ್ಯಾಂಕ್ ಆಫ್ ಬರೋಡದ ನಿವೃತ್ತ ಡಿಜಿಎಂ ಬ್ಯಾಪ್ಟಿಸ್ಟ್ ಲೋಬೋರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದರ್ಬೆ ಕಾವೇರಿಕಟ್ಟೆ ನಿವಾಸಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷರಾಗಿರುವ ಜೆರೋಮಿಯಸ್ ಪಾಸ್‌ರವರ 70ರ ಹುಟ್ಟುಹಬ್ಬದ ಸಂಭ್ರಮ ಹಾಗೂ ಜೆರೋಮಿಯಸ್ ಪಾಸ್‌ರವರ ಪತ್ನಿ ನಿವೃತ್ತ ಶಿಕ್ಷಕಿ ಪ್ರೆಸ್ಸಿ ಲೋಬೋರವರ ಕಿರಿಯ ಸಹೋದರ, ಇತ್ತೀಚೆಗೆ ಮುಂಬೈಯ ಬ್ಯಾಂಕ್ ಆಫ್ ಬರೋಡ(ಈ ಹಿಂದೆ ವಿಜಯಾ ಬ್ಯಾಂಕ್)ದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಡಿಜಿಎಂ ಬ್ಯಾಪ್ಟಿಸ್ಟ್ ಲೋಬೋರವರಿಗೆ ದಿ ಕೆಟೆನಿಯನ್ ಅಸೋಸಿಯೇಶನ್ ಪುತ್ತೂರು ಸರ್ಕಲ್-280 ಇದರ ವತಿಯಿಂದ ಅಭಿನಂದನಾ ಸನ್ಮಾನ ಕಾರ್ಯಕ್ರಮವು ಮಿನಿ ವಿಧಾನಸೌಧದ ಬಳಿಯ ಮಾಜಿ ಸೈನಿಕರ ಭವನದ ಸಭಾಂಗಣದಲ್ಲಿ ಜೂ.8 ರಂದು ಸಂಜೆ ಜರಗಿತು.


ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಸ್‌ರವರ ಶಿಷ್ಯರಾಗಿದ್ದು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಪಾಲೋಟಾಯ್ನ್ ಸಂಸ್ಥೆಯ ಧಮಗುರು ವಂ|ವಿಕ್ಟರ್ ಮಾರ್ಟಿಸ್‌ರವರು ಮಾತನಾಡಿ, ಜೆರೋಮಿಯಸ್ ಪಾಸ್ ಹಾಗೂ ನನ್ನ ಗುರು-ಶಿಷ್ಯ ಸಂಬಂಧ ಫಿಲೋಮಿನಾ ಪ್ರೌಢಶಾಲೆಯಲ್ಲಿ ತಾನು ಮೂರು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದ್ದಾಗಿತ್ತು. ಸಾವಿರಾರು ವಿದ್ಯಾರ್ಥಿಗಳಿಗೆ ಅವರು ಗುರುಗಳಾಗಿದ್ದು, ಅನೇಕ ವಿದ್ಯಾರ್ಥಿಗಳು ಇಂದು ಧರ್ಮಗುರುಗಳಾಗಿದ್ದಾರೆ ಅಥವಾ ಬೇರೆ ಬೇರೆ ಕ್ಷೇತ್ರಗಳಲ್ಲಿ ಬದುಕನ್ನು ಕಂಡುಕೊಂಡಿದ್ದಾರೆ. ಜೆರೋಮಿಯಸ್ ಪಾಸ್‌ರವರು ಎಲ್ಲರಿಗೂ ಒಳ್ಳೆಯದಾಗಲಿ ಮತ್ತು ಯಾರನ್ನೂ ನೋಯಿಸದಂತಹ ಗುಣ ಅವರದಾಗಿತ್ತು. ಯಾವುದೇ ಕಾರ್ಯಕ್ರಮವಿರಲಿ, ಜೆರೋಮಿಯಸ್ ದಂಪತಿ ಜೊತೆಯಾಗಿ ಹೋಗುವ ಮೂಲಕ ಅವರು ಆದರ್ಶ ದಂಪತಿ ಎನಿಸಿಕೊಂಡಿದ್ದಾರೆ ಮಾತ್ರವಲ್ಲದೆ ಅವರಲ್ಲಿನ ಆದರ್ಶಗಳನ್ನು ನಾವು ಕಲಿಯಬೇಕಾಗಿದೆ ಎಂದು ಹೇಳಿ ಜೆರೋಮಿಯಸ್ ಪಾಸ್‌ರವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.

ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್‌ರವರು ಮಾತನಾಡಿ, ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಕೆಟೆನಿಯನ್ ಅಸೋಸಿಯೇಶನ್‌ನ ಸ್ಥಾಪನೆಯ ಉದ್ಧೇಶವಾಗಿದೆ. ಸಾಧನೆ ಮಾಡಲು ದೇವರ ಆಶೀರ್ವಾದ, ಕಠಿಣ ಪರಿಶ್ರಮ ಮತ್ತು ಕುಟುಂಬದ ಸಹಕಾರ ಮುಖ್ಯ ಪಾತ್ರ ವಹಿಸುತ್ತದೆ. ಮತ್ತೊಬ್ಬರನ್ನು ಗೌರವಿಸುವುದು ಹಾಗೂ ತಾನೇ ಖುದ್ದಾಗಿ ಪರಿಚಯಿಸಿಕೊಳ್ಳುವುದು ಜೆರೋಮಿಯಸ್ ಪಾಸ್‌ರವರ ಹುಟ್ಟುಗುಣವಾಗಿದೆ. ಜೆರೋಮಿಯಸ್ ಪಾಸ್‌ರವರು ತನ್ನ ಶಿಕ್ಷಕ ವೃತ್ತಿ ಸಂದರ್ಭದಲ್ಲಿ ಬೋಧಿಸಿದ ವಿದ್ಯಾರ್ಥಿಗಳು ಇಂದು ಸಮಾಜದ ಉನ್ನತ ಸ್ತರದಲ್ಲಿದ್ದಾರೆ. ಆದರೆ ಜೆರೋಮಿಯಸ್‌ರವರು ಮಾತ್ರ ಇಲ್ಲೇ ಇದ್ದಾರೆ ಎಂದು ಹೇಳಿ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಸ್‌ರವರ ಶಿಷ್ಯರಾಗಿದ್ದು, ಪ್ರಸ್ತುತ ಗುಲ್ಬರ್ಗ ಕಥೋಲಿಕ್ ಧರ್ಮಪ್ರಾಂತ್ಯದ ಬೀದರ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿರುವ ವಂ|ವಿಲ್ಸನ್ ತೋರಸ್(ಮೂಲತಃ ಮರೀಲು ನಿವಾಸಿ)ರವರು ಮಾತನಾಡಿ, ಬಡತನದ ಕುಟುಂಬದಿಂದ ಬಂದವನಾದ ತನಗೆ ಕ್ರೀಡೆಯಲ್ಲಿ ಅಷ್ಟೊಂದು ಆಸಕ್ತಿಯಿರಲಿಲ್ಲ. ಕ್ರೀಡಾ ಸಮಯದಲ್ಲಿ ದೂರದಲ್ಲಿ ತಾನು ಕುಳಿತಿರುವ ಸಂದರ್ಭದಲ್ಲಿ ಜೆರೋಮಿಯಸ್ ಪಾಸ್‌ರವರು ತನ್ನತ್ರ ಬಂದು ಕ್ರೀಡೆಯಲ್ಲಿ ಪಾಲ್ಗೊಳ್ಳು ಎಂದಾಗ ತಾನು ತನ್ನ ಬಡತನದ ವಿಷಯವನ್ನು ಅವರಲ್ಲಿ ಪ್ರಸ್ತಾಪಿಸಿದ್ದೆ. ಕೂಡಲೇ ಅವರು ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ಮುಖಾಂತರ ತನ್ನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವು ಸಿಕ್ಕಿರುವಂತೆ ಮಾಡಿರುವುದು ಮರೆಯಲು ಸಾಧ್ಯವಿಲ್ಲ. ಜೆರೋಮಿಯಸ್ ದಂಪತಿಗೆ ಹಲವಾರು ಮಕ್ಕಳಲ್ಲಿ ತಾನು ಓರ್ವ ಎಂದು ಹೇಳಿ ಅವರ ಮುಂದಿನ ಜೀವನಕ್ಕೆ ಯಶಸ್ಸನ್ನು ಹಾರೈಸಿದರು.

ದಿವ್ಯ ಬಲಿಪೂಜೆ:
ಜೆರೋಮಿಯಸ್ ಪಾಸ್‌ರವರ ೭೦ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಸಂಜೆ ಕೃತಜ್ಞತಾ ದಿವ್ಯ ಬಲಿಪೂಜೆಯನ್ನು ಏರ್ಪಡಿಸಲಾಗಿದ್ದು, ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಧರ್ಮಗುರುಗಳಾದ ವಂ|ವಿಕ್ಟರ್ ಮಾರ್ಟಿಸ್ ಬೆಂಗಳೂರು, ವಂ|ವಿಲ್ಸನ್ ತೋರಸ್ ಬೀದರ್, ವಂ|ರಾಬರ್ಟ್ ಡಿ’ಸೋಜ ಮಂಗಳೂರು, ವಂ|ವಿನ್ಸೆಂಟ್ ಸಿಕ್ವೇರಾ ಮಂಗಳೂರು, ವಂ|ಬೊನಿಪಾಸ್ ಪಿಂಟೋ ಮಂಗಳೂರು, ವಂ|ಸೂರಜ್ ಲೋಬೋ ಮಂಗಳೂರುರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.

ಜೆರೋಮಿಯಸ್ ಪಾಸ್‌ರವರ ಹುಟ್ಟುಹಬ್ಬದ ಸಂಭ್ರಮಕ್ಕೆ ಹಾಗೂ ನಿವೃತ್ತಿಗೊಂಡ ಡಿಜಿಎಂ ಬ್ಯಾಪ್ಟಿಸ್ಟ್ ಲೋಬೋರವರಿಗೆ ದಿ ಕೆಟೆನಿಯನ್ ಅಸೋಸಿಯೇಶನ್ ಪುತ್ತೂರು ಸರ್ಕಲ್-೩೮೦, ಜೆರೋಮಿಯಸ್ ಪಾಸ್ ಹಾಗೂ ಅವರ ಪತ್ನಿ ಪ್ರೆಸ್ಸಿ ಲೋಬೋರವರ ಕುಟುಂಬಿಕರು, ಹಿತೈಷಿಗಳು ಹೂಗುಚ್ಛ ನೀಡುವ ಮೂಲಕ ಶುಭ ಹಾರೈಸಿದರು ಮಾತ್ರವಲ್ಲದೆ ಜೆರೋಮಿಯಸ್ ಪಾಸ್‌ರವರು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು. ಜೆರೋಮಿಯಸ್ ಪಾಸ್‌ರವರ ಸೊಸೆಯಂದಿರು ಹುಟ್ಟುಹಬ್ಬದ ಅಭಿನಂದನಾ ಗೀತೆಯನ್ನಾಡಿದರು. ದಿ ಕೆಟೆನಿಯನ್ ಅಸೋಸಿಯೇಶನ್ ಪುತ್ತೂರು ಸರ್ಕಲ್-೨೮೦ ಇದರ ಅಧ್ಯಕ್ಷ ಜೋನ್ ಕುಟಿನ್ಹಾ, ನಿರ್ಗಮಿತ ಅಧ್ಯಕ್ಷ ಝೇವಿಯರ್ ಡಿ’ಸೋಜ, ಜೆರೋಮಿಯಸ್ ಪಾಸ್‌ರವರ ಪತ್ನಿ ಶ್ರೀಮತಿ ಫ್ರೆಸ್ಸಿ ಲೋಬೋ ಹಾಗೂ ಸದಸ್ಯರು, ಜೆರೋಮಿಯಸ್ ಪಾಸ್‌ರವರ ಕುಟುಂಬಿಕರು, ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶೆರಿ ಮಸ್ಕರೇನ್ಹಸ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ದೇವರ ಬಲಿಷ್ಟವಾದ ಕೈಗಳು ನಮ್ಮ ಮೇಲಿರುವಾಗ ಸಾಧನೆಗೈಯಲು ಏನೂ ಅಡ್ಡಿಯಾಗದು. ಪ್ರತಿಯೋರ್ವ ಶಿಕ್ಷಕರಿಗೆ ಅವರದ್ದೇ ಆದ ಶಿಷ್ಯ ವೃಂದ ಇದೆ. ನನ್ನ ಶಿಷ್ಯವೃಂದದಲ್ಲಿ ಅನೇಕ ಮಂದಿ ಧರ್ಮಗುರುಗಳಾಗಿದ್ದಾರೆ ಮತ್ತು ಬೇರೆ ಬೇರೆ ಕ್ಷೇತ್ರದಲ್ಲಿ ಪ್ರಜ್ವಲಿಸುತ್ತಿದ್ದಾರೆ ಎನ್ನುವುದಕ್ಕೆ ಹೇಳಲು ನನಗೆ ಅಭಿಮಾನವಾಗುತ್ತದೆ. ನಮ್ಮ ಸಂತೋಷ ನಿಮಗೆ, ನಿಮ್ಮ ಸಂತೋಷ ನಮಗೆ ಎನ್ನಲು ಖುಶಿಯಾಗುತ್ತದೆ. ಜೆರೋಮಿಯಸ್ ಪಾಯಿಸ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು

ಉಪ್ಪಿನಂಗಡಿ ಬಿಳಿಯೂರಿನಿಂದ ಪುತ್ತೂರಿನ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಮೇಜರ್ ವೆಂಕಟ್ರಾಮಯ್ಯರವರ ಕೈಗೆ ಒಪ್ಪಿಸಿದ್ದು ಬಾವ ಜೆರೋಮಿಯಸ್ ಪಾಸ್‌ರವರು. ಕುಟುಂಬ ಜೀವನ, ಕೆಲಸದ ಸಂದರ್ಭದಲ್ಲಿ ಯಾರಿಂದಲೂ ಚಾ ಪಡೆಯಲ್ಲ, ಉಪಕಾರ ಮಾಡಿದವರನ್ನು ಮರೆಯೊಲ್ಲ ಎಂಬ ತತ್ವಗಳನ್ನು ತಾನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ವೈಟ್‌ಲಿಪ್ಟಿಂಗ್‌ನಲ್ಲಿ ವಿಶ್ವವಿದ್ಯಾನಿಲಯ ಚಾಂಪಿಯನ್ ಆದಾಗ ಡೊನ್ ಬೊಸ್ಕೊ ಕ್ಲಬ್, ನಿವೃತ್ತಿಯಾದಾಗ ಕೆಟೆನಿಯನ್ ಅಸೋಸಿಯೇಶನ್ ಸಂಸ್ಥೆ ನನ್ನನ್ನು ಗೌರವಿಸಿದೆ. ಬ್ಯಾಪ್ಟಿಸ್ಟ್ ಲೋಬೋ, ನಿವೃತ್ತ ಡಿಜಿಎಂ, ಬ್ಯಾಂಕ್ ಆಫ್ ಬರೋಡ, ಮುಂಬೈ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.