ಅಕ್ಷಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ‘ಮಾಸ್ 2022’ ಸಮಾರೋಪ

0

ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ‘ಮಾಸ್ ೨೦೨೨’ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರ ಮಾರ್ಗದರ್ಶನದಲ್ಲಿ, ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್‌ರವರ ಮುಂದಾಳತ್ವದಲ್ಲಿ, ಕಾಲೇಜಿನ ಉಪನ್ಯಾಸಕರ ಸಹಕಾರದಲ್ಲಿ ಮೇ ೩೧ ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ್ದು, ಇದರ ಸಮಾರೋಪ ಕಾರ್ಯಕ್ರಮವು ಸಂಜೆ ಜರುಗಿತು.

ಈ ಕ್ರೀಡಾಕೂಟದಲ್ಲಿ ಹಲವಾರು ವೈಯಕ್ತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ೧೦೦ಮೀ. ಓಟ ಹುಡುಗರ ವಿಭಾಗದಲ್ಲಿ ಮಹಮ್ಮದ್ ರಿಝ ಎ.ಆರ್‌ರವರು ಪ್ರಥಮ(ಪ್ರಥಮ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್), ರಿಝ್ವಾನ್ ಎಸ್.ಇ.ರವರು ದ್ವಿತೀಯ(ಪ್ರಥಮ ಬಿ.ಕಾಂ ಏವೀಯೇಷನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್), ಹಾಗೂ ಗಗನ್‌ದೀಪ್(ದ್ವಿತೀಯ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ಮತ್ತು ಹೃತಿಕ್ ಲೋಬೊ(ದ್ವಿತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನ್)ರವರು ಜಂಟಿಯಾಗಿ ತೃತೀಯ ಸ್ಥಾನವನ್ನು ಪಡೆದರು. ೧೦೦ಮೀ. ಓಟ ಹುಡುಗಿಯರ ವಿಭಾಗದಲ್ಲಿ ಪ್ರಣಮ್ಯ ಸಿ.ಎ(ದ್ವಿತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನ್)ರವರು ಪ್ರಥಮ, ಸೃಷ್ಠಿ ಎಸ್.ಜಿ.(ದ್ವಿತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನ್)ರವರು ದ್ವಿತೀಯ ಹಾಗೂ ಶೈಲಶ್ರೀ(ಪ್ರಥಮ ಬಿ.ಎಸ್ಸಿ ಫ್ಯಾಶನ್ ಆಂಡ್ ಅಪ್ಯಾರೆಲ್ ಡಿಸೈನ್)ರವರು ತೃತೀಯ ಸ್ಥಾನವನ್ನು ಗಳಿಸಿದರು.

೪೦೦ಮೀ. ಓಟ ಹುಡುಗರ ವಿಭಾಗದಲ್ಲಿ ಗಗನ್‌ದೀಪ್ (ದ್ವಿತೀಯ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ಪ್ರಥಮ, ರಕ್ಷಿತ್(ಪ್ರಥಮ ಬಿ.ಎಸ್ಸಿ ಫ್ಯಾಶನ್ ಆಂಡ್ ಅಪ್ಯಾರೆಲ್ ಡಿಸೈನ್) ದ್ವಿತೀಯ ಹಾಗೂ ರಾಝೀನ್(ದ್ವಿತೀಯ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ತೃತೀಯ ಸ್ಥಾನವನ್ನು ಪಡೆದುಕೊಂಡರು. ೪೦೦ಮೀ ಓಟ ಹುಡುಗಿಯರ ವಿಭಾಗದಲ್ಲಿ ಶಾಲಿನಿ(ತೃತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನ್) ಪ್ರಥಮ, ಪ್ರಣಮ್ಯ ಸಿ.ಎ(ದ್ವಿತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನ್) ದ್ವಿತೀಯ ಹಾಗೂ ಶ್ವೇತ(ಅಂತಿಮ ಬಿ.ಎಸ್ಸಿ ಫ್ಯಾಶನ್ ಡಿಸೈನ್) ತೃತೀಯ ಸ್ಥಾನವನ್ನು ಗಳಿಸಿದರು. ೮೦೦ಮೀ. ಓಟ ಹುಡುಗರ ವಿಭಾಗದಲ್ಲಿ ರಕ್ಷಿತ್(ಪ್ರಥಮ ಬಿ.ಎಸ್ಸಿ ಫ್ಯಾಶನ್ ಆಂಡ್ ಅಪ್ಯಾರೆಲ್ ಡಿಸೈನ್) ಪ್ರಥಮ, ಕಾರ್ತಿಕ್(ಪ್ರಥಮ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ದ್ವಿತೀಯ ಹಾಗೂ ನವೀನ್(ಪ್ರಥಮ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ತೃತೀಯ ಸ್ಥಾನವನ್ನು ಪಡೆದುಕೊಂಡರೆ ಹುಡುಗಿಯರ ವಿಭಾಗದಲ್ಲಿ ಶಾಲಿನಿ(ಅಂತಿಮ ಬಿ.ಎಸ್ಸಿ ಫ್ಯಾಶನ್ ಡಿಸೈನ್) ಪ್ರಥಮ, ಸೃಷ್ಠಿ ಎಸ್.ಜಿ.(ದ್ವಿತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನ್) ದ್ವಿತೀಯ ಹಾಗೂ ಶ್ವೇತ(ಅಂತಿಮ ಬಿ.ಎಸ್ಸಿ ಫ್ಯಾಶನ್ ಡಿಸೈನ್) ತೃತೀಯ ಸ್ಥಾನವನ್ನು ಗಳಿಸಿದರು.

ಹುಡುಗಿಯರ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ ಹವ್ಯ(ಪ್ರಥಮ ಬಿ.ಎಸ್ಸಿ ಫ್ಯಾಶನ್ ಆಂಡ್ ಅಪ್ಯಾರೆಲ್ ಡಿಸೈನ್) ಪ್ರಥಮ, ರಶ(ಪ್ರಥಮ ಬಿ.ಎಸ್ಸಿ ಫ್ಯಾಶನ್ ಆಂಡ್ ಅಪ್ಯಾರೆಲ್ ಡಿಸೈನ್) ದ್ವಿತೀಯ ಹಾಗೂ ಸ್ಮಿತಾ(ಪ್ರಥಮ ಬಿ.ಎಸ್ಸಿ ಫ್ಯಾಶನ್ ಆಂಡ್ ಅಪ್ಯಾರೆಲ್ ಡಿಸೈನ್) ತೃತೀಯ, ಹುಡುಗರ ವಿಭಾಗದಲ್ಲಿ ವಿನೋದ್ ಕೆ.ಸಿ.(ಪ್ರಥಮ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ಪ್ರಥಮ, ಅಶ್ವಿನ್ ಡಿ(ಪ್ರಥಮ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ದ್ವಿತೀಯ ಹಾಗೂ ಮಹಮ್ಮದ್ ಫಾಯಿಝ್(ಪ್ರಥಮ ಬಿ. ಕಾಂ ಏವೀಯೇಷನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್) ತೃತೀಯ, ಹುಡುಗಿಯರ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಣಮ್ಯ ಸಿ.ಎ(ದ್ವಿತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನ್) ಪ್ರಥಮ, ರೂಪ ಎಂ(ಪ್ರಥಮ ಬಿ.ಎಸ್ಸಿ ಫ್ಯಾಶನ್ ಆಂಡ್ ಅಪ್ಯಾರೆಲ್ ಡಿಸೈನ್) ದ್ವಿತೀಯ ಹಾಗೂ ಜಯಶ್ರೀ(ಅಂತಿಮ ಬಿ.ಎಸ್ಸಿ ಫ್ಯಾಶನ್ ಡಿಸೈನ್) ತೃತೀಯ, ಹುಡುಗರ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಮಹಮ್ಮದ್ ಮುಸ್ತಾಫ ಬಿ.ಎ.(ಪ್ರಥಮ ಬಿ.ಕಾಂ ಏವೀಯೇಷನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್) ಪ್ರಥಮ, ವಿದ್ಯಾಧರ(ಪ್ರಥಮ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ದ್ವಿತೀಯ ಹಾಗೂ ಗಗನ್‌ದೀಪ್(ದ್ವಿತೀಯ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ತೃತೀಯ ಸ್ಥಾನವನ್ನು ಪಡೆದುಕೊಂಡರು.

ಡಿಸ್ಕಸ್ ತ್ರೋ ಹುಡುಗರ ವಿಭಾಗದ ಸ್ಪರ್ಧೆಯಲ್ಲಿ ವಿನೋದ್ ಕೆ.ಸಿ.(ಪ್ರಥಮ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ಪ್ರಥಮ, ಅಭೀಕ್ಷ್(ಪ್ರಥಮ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ದ್ವಿತೀಯ ಹಾಗೂ ಮಹಮ್ಮದ್ ಫಾಶೀನ್(ಪ್ರಥಮ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ತೃತೀಯ, ಹುಡುಗಿಯರ ವಿಭಾಗದ ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ ರೂಪ ಎಂ(ಪ್ರಥಮ ಬಿ.ಎಸ್ಸಿ ಫ್ಯಾಶನ್ ಆಂಡ್ ಅಪ್ಯಾರೆಲ್ ಡಿಸೈನ್) ಪ್ರಥಮ, ಶಾಹಿದ(ದ್ವಿತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನ್) ದ್ವಿತೀಯ ಹಾಗೂ ಶಾಜಿಹ(ದ್ವಿತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನ್) ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಚೆಸ್ ಪಂದ್ಯದಲ್ಲಿ ಜುನೈದ್(ಪ್ರಥಮ ಬಿ.ಎಸ್ಸಿ ಫ್ಯಾಶನ್ ಆಂಡ್ ಅಪ್ಯಾರೆಲ್ ಡಿಸೈನ್) ಪ್ರಥಮ, ಅಪ್ರಝ್(ಪ್ರಥಮ ಬಿ.ಎಸ್ಸಿ ಫ್ಯಾಶನ್ ಆಂಡ್ ಅಪ್ಯಾರೆಲ್ ಡಿಸೈನ್) ದ್ವಿತೀಯ ಹಾಗೂ ಗಗನ್‌ದೀಪ್(ದ್ವಿತೀಯ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.

ಗುಂಪು ಸ್ಪರ್ಧೆಗಳಾದ ತ್ರೋಬಾಲ್ ಸ್ಪರ್ಧೆಯಲ್ಲಿ ಆಸ್ಟ್ರಲ್ ಆರೋ ಅಟ್ಟೇಕರ‍್ಸ್ ತಂಡವು ಪ್ರಥಮ ಹಾಗೂ ಮಾಹೀಷ್ಮತಿ ತಂಡವು ದ್ವಿತೀಯ, ಹುಡುಗರ ವಿಭಾಗದ ವಾಲಿಬಾಲ್ ಪಂದ್ಯದಲ್ಲಿ ಆಸ್ಟ್ರಲ್ ಆರೋ ಅಟ್ಟೇಕರ‍್ಸ್ ತಂಡವು ಪ್ರಥಮ ಹಾಗೂ ಮಾಹೀಷ್ಮತಿ ತಂಡವು ದ್ವಿತೀಯ, ಕಬಡ್ಡಿ ಪಂದ್ಯಾಟದಲ್ಲಿ ಮಾಹೀಷ್ಮತಿ ತಂಡ ಪ್ರಥಮ ಹಾಗೂ ಆಸ್ಟ್ರಲ್ ಆರೋ ಅಟ್ಟೇಕರ‍್ಸ್ ತಂಡ ದ್ವಿತೀಯ, ಹಗ್ಗಜಗ್ಗಾಟ ಹುಡುಗಿಯರ ವಿಭಾಗದಲ್ಲಿ ಸ್ಕೋರ್ ಟ್ವಿಸ್ಟರ‍್ಸ್ ತಂಡ ಪ್ರಥಮ, ಆಸ್ಟ್ರಲ್ ಆರೋ ಅಟ್ಟೇಕರ‍್ಸ್ ತಂಡ ದ್ವಿತೀಯ, ಹಗ್ಗಜಗ್ಗಾಟ ಹುಡುಗರ ವಿಭಾಗದಲ್ಲಿ ಶಾರ್ಪ್ ಹಂಟರ‍್ಸ್ ಪ್ರಥಮ ಹಾಗೂ ಆಸ್ಟ್ರಲ್ ಆರೋ ಅಟ್ಟೇಕರ‍್ಸ್ ತಂಡ ದ್ವಿತೀಯ, ಕ್ಯಾರಂ ಸ್ಪರ್ಧೆಯಲ್ಲಿ ಮಾಹೀಷ್ಮತಿ ತಂಡ ಪ್ರಥಮ ಹಾಗೂ ಶಾರ್ಪ್ ಹಂಟರ‍್ಸ್ ತಂಡ ದ್ವಿತೀಯ, ಕ್ರಿಕೆಟ್ ಪಂದ್ಯಾಟದಲ್ಲಿ ಶಾರ್ಪ್ ಹಂಟರ‍್ಸ್ ತಂಡ ಪ್ರಥಮ ಹಾಗೂ ಆಸ್ಟ್ರಲ್ ಆರೋ ಅಟ್ಟೇಕರ‍್ಸ್ ತಂಡ ದ್ವಿತೀಯ, ಹುಡುಗಿಯರ ವಿಭಾಗದ ರಿಲೇ ಸ್ಪರ್ಧೆಯಲ್ಲಿ ಮಾಹೀಷ್ಮತಿ ತಂಡ ಪ್ರಥಮ, ಸ್ಕೋರ್ ಟ್ವಿಸ್ಟರ‍್ಸ್ ತಂಡ ದ್ವಿತೀಯ, ಆಸ್ಟ್ರಲ್ ಆರೋ ಅಟ್ಟೇಕರ‍್ಸ್ ತಂಡ ತೃತೀಯ, ಹುಡುಗರ ವಿಭಾಗದ ರಿಲೇ ಸ್ಪರ್ಧೆಯಲ್ಲಿ ಮಾಹೀಷ್ಮತಿ ತಂಡ ಪ್ರಥಮ, ಆಸ್ಟ್ರಲ್ ಆರೋ ಅಟ್ಟೇಕರ‍್ಸ್ ತಂಡ ದ್ವಿತೀಯ, ಸ್ಕೋರ್ ಟ್ವಿಸ್ಟರ‍್ಸ್ ತಂಡ ತೃತೀಯ ಸ್ಥಾನ ಗಳಿಸಿತು.

ಮಾಹೀಷ್ಮತಿ ಪ್ರಥಮ, ಆಸ್ಟ್ರಲ್ ಆರೋ ಅಟ್ವೀಕರ‍್ಸ್ ದ್ವಿತೀಯ..
ವಾರ್ಷಿಕ ಕ್ರೀಡಾಕೂಟ ‘ಮಾಸ್ ೨೦೨೨’ ಇದರಲ್ಲಿ ಮಾಹೀಷ್ಮತಿ ತಂಡವು ಚಾಂಪಿಯನ್‌ಶಿಪ್ ಸ್ಥಾನವನ್ನು ಅಲಂಕರಿಸಿದರೆ, ಆಸ್ಟ್ರಲ್ ಆರೋ ಅಟ್ಟೇಕರ‍್ಸ್ ರನ್ನರ‍್ಸ್ ಸ್ಥಾನವನ್ನು ಅಲಂಕರಿಸಿತು. ಹುಡುಗಿಯರ ವಿಭಾಗದಲ್ಲಿ ಪ್ರಣಮ್ಯ ಸಿ.ಎ(ದ್ವಿತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನ್) ಇವರು ವೈಯಕ್ತಿಕ ಚಾಂಪಿಯನ್‌ಶಿಪ್ ಗಳಿಸಿದರೆ, ಹುಡುಗರ ವಿಭಾಗದಲ್ಲಿ ವಿನೋದ್ ಕೆ.ಸಿ (ಪ್ರಥಮ ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ಸ್) ವೈಯಕ್ತಿಕ ಚಾಂಪಿಯನ್‌ಶಿಪ್ ಗಳಿಸಿರುತ್ತಾರೆ. ಮಾಸ್ ೨೦೨೨ ಇದರಲ್ಲಿ ವಿದ್ಯಾರ್ಥಿಗಳನ್ನು ಮಾಹೀಷ್ಮತಿ, ಆಸ್ಟ್ರಲ್ ಆರೋ ಅಟ್ಟೇಕರ‍್ಸ್, ಸ್ಕೋರ್ ಟ್ವಿಸ್ಟರ‍್ಸ್, ಶಾರ್ಪ್ ಹಂಟರ‍್ಸ್ ಹೀಗೆ ೪ ತಂಡಗಳನ್ನಾಗಿ ವಿಭಾಗಿಸಲಾಗಿತ್ತು. ಕ್ರೀಡಾಕೂಟದಲ್ಲಿ ನಡೆದ ಪಥಸಂಚಲನದಲ್ಲಿ ಸ್ಕೋರ್ ಟ್ವಿಸ್ಟರ‍್ಸ್ ತಂಡ ಪ್ರಥಮ, ಶಾರ್ಪ್ ಹಂಟರ‍್ಸ್ ದ್ವಿತೀಯ ಹಾಗೂ ಮಾಹೀಷ್ಮತಿ ತಂಡವು ತೃತೀಯ ಸ್ಥಾನ ಗಳಿಸಿದ್ದರು.

LEAVE A REPLY

Please enter your comment!
Please enter your name here