ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬಂದು ಸಮಸ್ಯೆ ಇತ್ಯರ್ಥ ಪಡಿಸುವ ಕುರಿತು ಭರವಸೆ ಹಿನ್ನಲೆ – ಬಿಇಒ ಕಚೇರಿ ಎದರು ಶಿವಪ್ಪ ರಾಥೋಡ್ ಧರಣಿ ಹಿಂತೆಗೆತ

0

ಪುತ್ತೂರು: ಸೇವಾ ವಿಚಾರದಲ್ಲಿ ತಾರತಮ್ಯ, ಸಮಾನತೆ ನೀಡದಿರುವುದು, ಕಡತ ವಿಲೇವಾರಿ ಮಾಡದೇ ಇರುವುದು ಸೇರಿದಂತೆ ಹಕ್ಕುಗಳ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಸರಕಾರಿ ಮತ್ತು ಅರೆ ಸರಕಾರಿ ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿರುವ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಶಿಕ್ಷಕ ಶಿವಪ್ಪ ರಾಥೋಡ್ ಅವರು ನ್ಯಾಯ ಕೊಡುವಂತೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಜೂ.17ರಂದು ಆರಂಭಿಸಿದ ಮೌನ ಧರಣಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮನವಿಯಂತೆ ಹಿಂಪಪಡೆದಿದ್ದಾರೆ.

ಜಿಲ್ಲಾ ಉಪನಿರ್ದೇಶಕರು ರಾಥೋಡ್ ಅವರಿಗೆ ಪೋನ್ ಕರೆ ಮಾಡಿ ಜೂ.18 ಕ್ಕೆ ಪುತ್ತೂರು ಬಿಇಒ ಕಚೇರಿಗೆ ಬಂದು ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ ಹಾಗಾಗಿ ಧರಣಿ ಹಿಂಪಡೆದಿದ್ದೇನೆ ಎಂದು ಶಿವಪ್ಪ ರಾಥೋಡ್ ತಿಳಿಸಿದ್ದಾರೆ. ಧರಣಿ ನಿರತ ಶಿವಪ್ಪ ರಾಥೋಡ್ ಬಳಿಗೆ ಕರ್ನಾಟಕ ಪ್ರಾಥಮಿಕ‌ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ನವೀನ್, ಮಾಮಚ್ಚನ್ ಅವರು ಭೇಟಿ ನೀಡಿ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

 

ಸರ್ಕಾರಿ, ಅರೆ ಸರ್ಕಾರಿ ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಪ್ಪ ರಾಥೋಡ್ ಅವರಿಂದ ಬಿಇಒ ಕಚೇರಿ ಮುಂದೆ ಧರಣಿ

LEAVE A REPLY

Please enter your comment!
Please enter your name here