ಲಂಚ, ಭ್ರಷ್ಟಾಚಾರ ಮುಕ್ತವಾಗುವತ್ತ ಗ್ರಾ.ಪಂ.ಗಳು-ನಾಯಕರ ಅಭಿಪ್ರಾಯಗಳು, ಪ್ರಯತ್ನಗಳು

0
  • ಕಬಕ ಗ್ರಾ.ಪಂ

 

ಮಧ್ಯವರ್ತಿಗಳಿಗೆ ಅವಕಾಶ ಇಲ್ಲ

ಕಚೇರಿ ಕೆಲಸಗಳಿಗೆ ಮಧ್ಯವರ್ತಿಗಳನ್ನು ಬಳಸಿಕೊಂಡರೆ ಅಲ್ಲಿ ಭ್ರಷ್ಠಾಚಾರ ಉಂಟಾಗುತ್ತದೆ. ಜನರೇ ನೇರವಾಗಿ ಕಚೇರಿಗೆ ಬಂದರೆ ಭ್ರಷ್ಟಾಚಾರ ರಹಿತವಾಗಿ ಸೇವೆ ದೊರೆಯಲು ಸಾಧ್ಯ. ಇದಕ್ಕಾಗಿ ಕಬಕ ಗ್ರಾಮ ಪಂಚಾಯತ್‌ನಲ್ಲಿ ನಾನು ಅಧ್ಯಕ್ಷನಾದ ಬಳಿಕ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ ಎಂದು ನಾಮಫಲಕ ಅಳವಡಿಸಲಾಗಿದೆ. ಜನರೇ ನೇರವಾಗಿ ಕಚೇರಿಗೆ ಬಂದು ಕೆಲಸ ಮಾಡಿಕೊಳ್ಳುವಂತೆ ಅರಿವು ಮೂಡಿಸಲಾಗಿದೆ. ಈಗ ಜನರೇ ಕಚೇರಿಗೆ ನೇರವಾಗಿ ಬಂದು ತಮ್ಮ ಆವಶ್ಯಕ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಪಂಚಾಯತ್‌ನಲ್ಲಿ ಆಡಳಿತ ಮಂಡಳಿ, ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ನಡೆಯುತ್ತಿದೆ. ಸುದ್ದಿ ಜನಾಂದೋಲನ ಬಹಳಷ್ಟು ಉತ್ತಮ ಹಾಗೂ ಪ್ರಯೋಜನಕಾರಿ ಆಂದೋಲವಾಗಿದೆ.                                                                                                  – ವಿನಯ ಕುಮಾರ್ ಕಲ್ಲೇಗ, ಅಧ್ಯಕ್ಷರು ಕಬಕ ಗ್ರಾ.ಪಂ

ಒಟ್ಟಾಗಿ ಕೆಲಸ ಮಾಡಿದಾಗ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ

ಭ್ರಷ್ಟಾಚಾರ ನಿರ್ಮೂಲನೆಯಾಗಬೇಕಾದರೆ ಜನರು ಪಕ್ಷ, ಸಂಘಟನೆ ಎಂಬ ಮನಸ್ಥಿತಿಯಿಂದ ಹೊರಬರಬೇಕು. ರಾಜಕೀಯ ನಾಯಕರೇ ಇದಕ್ಕೆ ನಾಯಕತ್ವ ನೀಡುತ್ತಿದ್ದಾರೆ. ಇದನ್ನು ಜನರು ವಿರೋಧಿಸದಂತೆ ರಾಜಕೀಯ ವ್ಯಕ್ತಿಗಳು ಮುಗ್ದ ಜನರ ದಾರಿತಪ್ಪಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭ್ರಷ್ಟಾಚಾರವನ್ನು ಕಿತ್ತೊಗೆಯಲು ಪಣತೊಡುವುದಿಲ್ಲವೋ ಅಲ್ಲಿಯವರೆಗೆ ನಿರ್ಮೂಲನೆ ಸಾಧ್ಯವಿಲ್ಲ. ಸುದ್ದಿಯು ಹಮ್ಮಿಕೊಂಡಿರುವ ಅಭಿಯಾನ ಜನರಿಗೆ ಬಹಳಷ್ಟು ಉತ್ತಮ ಅಭಿಯಾನವಾಗಿದೆ. ಇದನ್ನು ಎಲ್ಲಾ ಸಂಘ ಸಂಸ್ಥೆಗಳು ಮುಂದೆ ಬಂದು ಅಭಿಯಾನ ನಡೆಸಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಖಂಡಿತಾ ಸಾಧ್ಯವಿದೆ.
                                                                                                                                          -ಉಮ್ಮರ್ ಫಾರೂಕ್, ಸದಸ್ಯರು ಕಬಕ ಗ್ರಾ.ಪಂ

ಲಂಚ, ಭ್ರಷ್ಟಾಚಾರ ನಿಲ್ಲಲೇ ಬೇಕು

ಲಂಚ, ಭ್ರಷ್ಟಾಚಾರ ಎನ್ನುವುದು ಬಹುದೊಡ್ಡ ಸಾಮಾಜಿಕ ಪಿಡುಗು. ಇದು ನಿಲ್ಲಲೇ ಬೇಕು. ಲಂಚ, ಭ್ರಷ್ಟಾಚಾರದ ವಿರುದ್ಧ ಈ ತನಕ ಹೋರಾಟ ನಡೆಸಲು ಯಾರಿಂದಲೂ ಸಾಧ್ಯವಾಗಿಲ್ಲ. ಸುದ್ದಿಯು ಲಂಚ, ಭ್ರಷ್ಟಾಚಾರದ ನಿರ್ಮೂಲನೆಗಾಗಿ ಹೋರಾಟ ನಡೆಸುತ್ತಿದ್ದು, ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಇದು ಆವಶ್ಯಕವಾಗಿ ನಿಲ್ಲಲೇ ಬೇಕು.
                                                                                                                                                        -ಶಾಬಾ ಕೆ. ಸದಸ್ಯರು ಕಬಕ ಗ್ರಾ.ಪಂ

ಪ್ರತಿ ಗ್ರಾಮ, ಹಳ್ಳಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು

ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿಯು ಉತ್ತಮ ಆಂದೋಲನ ಹಮ್ಮಿಕೊಂಡಿದೆ. ಭ್ರಷ್ಟಾಚಾರ ನಿರ್ಮೂಲನೆಯು ಪ್ರತಿ ಗ್ರಾಮ, ಹಳ್ಳಿ ಹಳ್ಳಿಗಳಲ್ಲಿ ಆಗಬೇಕಿದೆ. ಹಳ್ಳಿಗಳಲ್ಲಿ ನಿರ್ಮೂಲನೆಯಾದಾಗ ದೇಶದಲ್ಲಿ ನಿರ್ಮೂಲನೆ ಸಾಧ್ಯ. ಭ್ರಷ್ಟಾಚಾರ ಈಗಲೇ ನಿರ್ಮೂಲನೆಯಾಗಬೇಕು. ಆಗಮಾತ್ರ ಭವಿಷ್ಯದಲ್ಲಿ ಉತ್ತಮ ಸಮಾಜ, ದೇಶ ನಿರ್ಮಾಣಗೊಳ್ಳಬಹುದು. ನಮ್ಮ ದೇಶ ನಂಬರ್ ವನ್ ದೇಶವಾಗಲು ಸಾಧ್ಯ.
                                                                                                                           -ಜಯರಾಮ ನೆಕ್ಕರೆ, ಅಧ್ಯಕ್ಷರು ಬಿಜೆಪಿ ಗ್ರಾಮ ಸಮಿತಿ ಕಬಕ

LEAVE A REPLY

Please enter your comment!
Please enter your name here