ಶಿರಾಡಿ ಗ್ರಾ.ಪಂ.ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

0

ನೆಲ್ಯಾಡಿ: ಶಿರಾಡಿ ಗ್ರಾಮ ಪಂಚಾಯಿತಿನ 2022-23ನೇ ಸಾಲಿನ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮತ್ತು 14 ಹಾಗೂ 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಜೂ.22ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಪದಂಬಳ ನೀರಿನ ಟ್ಯಾಂಕ್ ಬಗ್ಗೆ ಅಸಮಾಧಾನ:

ಶಿರಾಡಿ ಗ್ರಾಮದ ಪದಂಬಳದಲ್ಲಿ ಕುಡಿಯುವ ನೀರಿನ ಟ್ಯಾಂಕ್ ರಚನೆಗೆ 72,895 ರೂ., ಖರ್ಚು ಮಾಡಲಾಗಿದೆ. ಇಲ್ಲಿ ಪೈಪು ಲೈನ್, ಟ್ಯಾಂಕ್ ಮೊದಲು ಮಾಡಲಾಗಿದೆ. ಆದರೆ ಅಲ್ಲಿ ನೀರು ಇಲ್ಲ. ಈಗ ಗ್ರಾಮಸ್ಥರಿಗೆ ನೀರಿನ ಸಂಪರ್ಕ ಕೊಡಬೇಕಾದಲ್ಲಿ ಮತ್ತೆ ಪೈಪು ಲೈನ್ ಮಾಡಬೇಕಾದಿತು. ಈ ರೀತಿ ಅನುದಾನ ಪೋಲು ಮಾಡುವುದು ಯಾಕೆ ಎಂದು ಗ್ರಾಮಸ್ಥರಾದ ಸಾಬು, ಅಬಿಲಾಷ್, ಶಾಜಿ, ಜೇಸಿ ನಾರಾಯಣ ಅಮ್ಮಾಜೆ ಮತ್ತಿತರರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಕಾರ್ತಿಕೇಯನ್‌ರವರು, ಇದು 75 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್. ಜಿ.ಪಂ.ಅನುದಾನದಲ್ಲಿ ಮಾಡಲಾಗಿತ್ತು. ಆದರೆ ಅನುದಾನ ಕೊರತೆ ಆದ ಹಿನ್ನೆಲೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಅನುದಾನ ನೀಡಿ ಪೂರ್ಣಗೊಳಿಸಲಾಗಿದೆ. ಇಲ್ಲಿ ಕುಡಿಯುವ ನೀರಿಗೆ ಸಂಬAಧಿಸಿ 30 ಮಂದಿಯಿAದ ಮನವಿ ಬಂದಿತ್ತು. ನೀರಿನ ಬಳಕೆದಾರರ ಸಭೆ ಕರೆದು ಠೇವಣಿ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಆದರೆ ಯಾರೂ ಹಣ ಪಾವತಿಸಿಲ್ಲ ಎಂದರು. ಈ ಟ್ಯಾಂಕ್ ಬಳಕೆ ಆಗದೇ ಇರುವ ಬಗ್ಗೆ ತನಿಖೆ ನಡೆಸಿ ಮುಂದಿನ ಗ್ರಾಮಸಭೆಯಲ್ಲಿ ಮಾಹಿತಿ ನೀಡಬೇಕೆಂದು ಗ್ರಾಮಸ್ಥರಾದ ಶಾಬು ಹಾಗೂ ಇತರರು ಹೇಳಿದರು. ಈ ಬಗ್ಗೆ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳುವುದಾಗಿ ಪಿಡಿಒ ಮಹೇಶ್ ಜಿ.ಎನ್.ಭರವಸೆ ನೀಡಿದರು. ಪೇರುಮಜಲುನಲ್ಲಿಯೂ ಟ್ಯಾಂಕ್ ಇದ್ದು ಏನೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಗುಂಡ್ಯ ಸಾರ್ವಜನಿಕ ಶೌಚಾಲಯ ಸೇರಿದಂತೆ ಗ್ರಾಮದಲ್ಲಿನ ಇತರೇ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿ ಮಾಹಿತಿ ಪಡೆದುಕೊಂಡರು. ಉದ್ಯೋಗ ಖಾತರಿ ಇಂಜಿನಿಯರ್ ಸಭೆಗೆ ಗೈರು ಹಾಜರಿಯಾಗಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ಸೂಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವಲಯ ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾರಾಣಿಯವರು ಯೋಜನೆಯ ಕುರಿತಂತೆ ಮಾತನಾಡಿದರು. ಕಡಬ ತಾ.ಪಂ.ನ ಭರತ್‌ರಾಜ್‌ರವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ವೈಯಕ್ತಿಕ ಕಾಮಗಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ. ಆದರೆ ಸಮುದಾಯದ ಕಾಮಗಾರಿಗಳು ಕಡಿಮೆಯಾಗುತ್ತಿದೆ. ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಅಮೃತ ಸರೋವರ, ಸಮಗ್ರ ಶಾಲಾಭಿವೃದ್ಧಿ, ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಸ್ವ ಉದ್ಯೋಗಕ್ಕೆ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ 1 ಲಕ್ಷ ರೂ.,ಅನುದಾನದಲ್ಲಿ 200 ಮೀ.ಉದ್ದದ ರಸ್ತೆ ಕಾಂಕ್ರಿಟೀಕರಣ ಮಾಡಲಾಗುತ್ತದೆ. 4 ಇಂಚು ಬೆಡ್, 6 ಇಂಚು ಕಾಂಕ್ರಿಟ್ ಹಾಕಬೇಕು. 3 ರಿಂದ 3.5 ಮೀ.ಅಗಲ ಇರಬೇಕೆಂದು ಭರತ್‌ರಾಜ್ ಮಾಹಿತಿ ನೀಡಿದರು.

ಗ್ರಾ.ಪಂ.ಅಧ್ಯಕ್ಷೆ ವಿನೀತಾ ತಂಗಚ್ಚನ್ ಮಾತನಾಡಿ, ಶಿರಾಡಿ ಗ್ರಾಮವನ್ನು ಮಾದರಿ ಗ್ರಾಮವಾಗಿ ಮಾಡಬೇಕೆಂಬ ಧ್ಯೇಯ ಆಡಳಿತ ಮಂಡಳಿ ಹೊಂದಿದೆ. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕಳೆದ ವರ್ಷ ಶಿರಾಡಿ ಗ್ರಾ.ಪಂ.ಗೆ ರಾಜ್ಯ ಪ್ರಶಸ್ತಿ ಬಂದಿತ್ತು. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ ಎಂದು ಅವರು ತಿಳಿಸಿದರು.

ಉದ್ಯೋಗ ಖಾತರಿ ಯೋಜನೆಯ ಕಡಬ ತಾಲೂಕು ಸಂಯೋಜಕ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯಡಿ ನಡೆದ ಕಾಮಗಾರಿಗಳ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾಮಾಜಿಕ ಪರಿಶೋಧನೆ ನಡೆಸಲಾಗುತ್ತದೆ ಲೋಪದೋಷಗಳನ್ನು ಸರಿಪಡಿಸಲು ಅವಕಾಶ ಸಿಗುತ್ತದೆ ಎಂದು ತಿಳಿಸಿ ಕಳೆದ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿನ ಮಾರ್ಗಸೂಚಿ ಉಲ್ಲಂಘನೆ ಬಗ್ಗೆ ಮಾಹಿತಿ ನೀಡಿ, ಸರಿಪಡಿಸಿಕೊಳ್ಳುವಂತೆ ಹೇಳಿದರು. ಉಪಾಧ್ಯಕ್ಷ ಕಾರ್ತಿಕೇಯನ್, ಪಿಡಿಒ ಮಹೇಶ್ ಜಿ.ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ರಾಧಾ ತಂಗಪ್ಪನ್, ಲಕ್ಷö್ಮಣ ಕುದ್ಕೋಳಿ, ಯೋಜನೆಯ ಫಲಾನುಭವಿಗಳು, ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಕಾರ್ಯದರ್ಶಿ ಶಾರದ ಪಿ.ಎ.ಸ್ವಾಗತಿಸಿದರು. ಸಿಬ್ಬಂದಿ ತನಿಯಪ್ಪ ವಂದಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ರಮೇಶ್ ಪೂಜಾರಿ, ದೀಪಿಕಾ, ಚಂಚಲ, ರೋಹಿಣಿ, ಪೂರ್ಣಿಮಾ, ಪೂಜಾ, ಗ್ರಾ.ಪಂ.ಸಿಬ್ಬAದಿಗಳಾದ ಏಲಿಯಾಸ್, ಸ್ಮಿತಾ, ರಮ್ಯ, ತೋಮಸ್, ವಿಜಯಕುಮಾರಿ, ಸುನಿಲ್, ತೇಜಸ್ ಸಹಕರಿಸಿದರು.

[box type=”note” bg=”#” color=”#” border=”#” radius=”6″]54.55 ಲಕ್ಷ ರೂ.,ಖರ್ಚು:
ಶಿರಾಡಿ ಗ್ರಾಮ ಪಂಚಾಯಿತಿಯಲ್ಲಿ 1-10-2021 ರಿಂದ 31-3-2022ರ ತನಕದ ಅವಧಿಯಲ್ಲಿ 153 ಕಾಮಗಾರಿ ನಡೆದಿದೆ. ಇದಕ್ಕೆ 41,83,564 ರೂ.,ಕೂಲಿ ಹಾಗೂ 12,72,402 ರೂ.,ಸಾಮಾಗ್ರಿ ಮೊತ್ತ ಪಾವತಿಯಾಗಿದೆ. 6 ತಿಂಗಳ ಅವಧಿಯಲ್ಲಿ ಒಟ್ಟು 54,55,966 ರೂ.,ಖರ್ಚು ಆಗಿದೆ. 14ನೇ ಹಣಕಾಸು ಯೋಜನೆಯಡಿ 8 ಕಾಮಗಾರಿ ನಡೆದಿದ್ದು 8,55,814 ರೂ.,ಹಾಗೂ 15ನೇ ಹಣಕಾಸು ಯೋಜನೆಯಡಿ 24 ಕಾಮಗಾರಿ ನಡೆದಿದ್ದು 15,34,746 ರೂ.,ಖರ್ಚು ಆಗಿದೆ.
[/box]

LEAVE A REPLY

Please enter your comment!
Please enter your name here