ಸುದ್ದಿ ವರದಿಗೆ ಸ್ಪಂದಿಸಿದ ಮೆಸ್ಕಾಂ ಇಲಾಖೆ-ಕುಂಬ್ರ ಕೆಪಿಎಸ್ ಸ್ಕೂಲ್ ಬಳಿ ಮರದ ಗೆಲ್ಲು ತೆರವು

0

 

ಪುತ್ತೂರು: ಕುಂಬ್ರ ಕೆಪಿಎಸ್ ಸ್ಕೂಲ್ ದ್ವಾರದ ಬಳಿ ಮರದ ಗೆಲ್ಲುಗಳು ಗಾಳಿಬರುವಾಗ ವಿದ್ಯುತ್ ತಂತಿಗೆ ತಾಗುತ್ತಿದ್ದು ಇದರ ಅಪಾಯದ ಬಗ್ಗೆ ಸುದ್ದಿಬಿಡುಗಡೆ ಪತ್ರಿಕೆ ಜೂ. 24 ರಂದು ವರದಿ ಮಾಡಿದ್ದು, ವರದಿಗೆ ಸ್ಪಂದಿಸಿದ ಕುಂಬ್ರ ಮೆಸ್ಕಾಂ ಇಲಾಖೆ ಮರದ ಗೆಲ್ಲುಗಳನ್ನು ತೆರವು ಮಾಡಿದೆ.


ಸ್ಕೂಲ್ ದ್ವಾರದ ಬಳಿ ಇರುವ ಬೇಲಿಯಲ್ಲಿರುವ ಮರಗಳ ಗೆಲ್ಲುಗಳು ಗಾಳಿಬರುವ ವೇಳೆ ವಿದ್ಯುತ್ ತಂತಿಗೆ ತಾಗಿ ಅಗ್ನಿ ಸ್ಪರ್ಶವಾಗುತ್ತಿತ್ತು. ಬೆಳಿಗ್ಗೆಯಿಂದ ಸಂಜೆ ತನಕ ಇಲ್ಲಿನ ರಸ್ತೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಿದ್ದು ಗಾಳಿ ಬರುವಾಗ ಭಾರೀ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇತ್ತು. ಮರದ ಗೆಲ್ಲುಗಳನ್ನು ಕತ್ತರಿಸುವ ಮೂಲಕ ಅಪಾಯವನ್ನು ತೆರವು ಮಾಡಲಾಗಿದೆ. ಉಳಿದ ಕಡೆಗಳಲ್ಲಿ ರಸ್ತೆಗೆ ವಾಲಿಕೊಂಡು ಅನೇಕ ಮರಗಳಿದ್ದು ಗಾಳಿ ಬರುವಾಗ ಮರಗಳು ಉರುಳಿ ಬಿದ್ದರೆ ಜೀವ ಹಾನಿ ಸಂಭವಿಸಬಹುದಾಗಿದ್ದು ಅರಣ್ಯ ಇಲಾಖೆ ತಕ್ಷಣ ಅಪಾಯಕಾರಿ ಮರದ ಗೆಲ್ಲುಗಳನ್ನು ತೆರವು ಮಾಡಬೇಕಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here