ಲಂಚ, ಭ್ರಷ್ಟಾಚಾರದಲ್ಲಿ ನಮ್ಮ ದೇಶಕ್ಕೆ ಜಗತ್ತಿನಲ್ಲಿ 85ನೇ ಸ್ಥಾನ-ಫಿನ್ಲ್ಯಾಂಡ್, ಡೆನ್ಮಾರ್ಕ್, ನ್ಯೂಝಿಲ್ಯಾಂಡ್‌ಗೆ ಅತ್ಯಂತ ಕಡಿಮೆ 1,2,3 ಸ್ಥಾನ

0

  • ಜಗತ್ತಿನ ಬಡ ದೇಶಗಳೆಲ್ಲವೂ ಭ್ರಷ್ಟಾಚಾರದಲ್ಲಿ ದೊಡ್ಡ ಸ್ಥಾನದ ಪೈಪೋಟಿಯಲ್ಲಿವೆ!
  • ಭಾರತ ಲಂಚ, ಭ್ರಷ್ಟಾಚಾರದ ನಿರ್ಮೂಲನೆಯಲ್ಲಿ, ಅಭಿವೃದ್ಧಿಯಲ್ಲಿ ವಿಶ್ವಗುರುವಾಗಲಿ. ಅದು ಸುಳ್ಯ, ಪುತ್ತೂರು, ಬೆಳ್ತಂಗಡಿ, ದ.ಕ ಜಿಲ್ಲೆಯಿಂದ ಪ್ರಾರಂಭವಾಗಲಿ

ನಮ್ಮ ದೇಶ ಪುರಾತನವಾಗಿದ್ದು, ಆಧುನಿಕ ಜಗತ್ತಿಗೆ ಸಂಸ್ಕೃತಿಯನ್ನು, ಸೊನ್ನೆಯನ್ನು, ಯೋಗವನ್ನು ನೀಡಿದ ದೇಶ ನಮ್ಮದು. ಚಂದ್ರಲೋಕಕ್ಕೆ ನಾವು ಪ್ರಯಾಣಿಸಿzವೆ. ಆಟಂಬಾಂಬ್ ನಮ್ಮಲ್ಲಿದೆ. ರಾಕೆಟ್ ಸೈನ್ಸ್ ಆಧುನಿಕ ಎಲ್ಲಾ ತಂತ್ರಜ್ಞಾನಗಳು ನಮ್ಮಲ್ಲಿವೆ. ಆದರೆ ಯಾಕೆ ನಮ್ಮಲ್ಲಿ ಬಡತನ, ನಿರುದ್ಯೋಗ, ಅಸಹನೆ, ಅಸಮಾನತೆ. ನೀರು, ರಸ್ತೆ, ವಿದ್ಯುತ್, ಆಸ್ಪತ್ರೆ, ಶಾಲೆ, ಮೂಲಭೂತ ಸೌಕರ್ಯದ ಕೊರತೆ. ಕಟ್ಟಡ, ಕಾಮಗಾರಿಗಳು ಕಳಪೆ, ಗುಣಮಟ್ಟವಿಲ್ಲದ ಕೆಲಸಗಳು. ನಮ್ಮ ಊರು ಸುಳ್ಯಕ್ಕೆ ಬರೋಣ. ಊರಿನ ರಸ್ತೆ ಸುಧಾರಿಸಲು ಸುಳ್ಯದ 110 ಕೆ.ವಿ. ವಿದ್ಯುತ್ ಸಮಸ್ಯೆ ಪರಿಹರಿಸಲು, ಶುದ್ಧ ಕುಡಿಯುವ ನೀರು ಒದಗಿಸಲು, ಕಸ ನಿರ್ವಹಣೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. 30 ವರ್ಷಗಳಿಂದ ಅಕ್ರಮ ಸಕ್ರಮ ಭೂಮಿಗಾಗಿ ಕಛೇರಿಯಿಂದ ಕಛೇರಿಗೆ ಅಲೆದಾಡುತ್ತಿದ್ದರೂ ಐವರ್ನಾಡಿನ ಆದಂ ರಂತವರ ಸಮಸ್ಯೆಗೆ, ಮಳೆಯಿಂದ ಹಾನಿಯಾದವರಿಗೆ ಪರಿಹಾರ ಸಿಗುತ್ತಿಲ್ಲ. ಫೈಲ್‌ಗಳು ಹಣ ಕೊಡದೇ ಮುಂದೆ ಹೋಗುತ್ತಿಲ್ಲ ಯಾಕೆ?. ಮಂಗಳೂರು ಬೆಂಗಳೂರಿನ ಮಧ್ಯದ ಶಿರಾಡಿ ಘಾಟ್‌ಗೆ ಸುರಿದ ಹಣವೆಷ್ಟು?. ಅದೆಷ್ಟೋ ವರ್ಷಗಳಿಂದ ಅದರ ದುರಸ್ಥಿ ನಡೆಯುತ್ತಿದೆ. ಅದನ್ನು ಸರಿಪಡಿಸಲು ವಿದೇಶಿಗರು ಬರಬೇಕೇ?. ಬೆಂಗಳೂರಿನ ಬಿಬಿಎಂಪಿ ರಸ್ತೆಯಲ್ಲಿ ಗುಂಡಿಗೆ ಬಿದ್ದು ಸತ್ತವರು ಇದ್ದಾರೆ. ಕೈಕಾಲು ಮುರಿದುಕೊಂಡವರು ಇದ್ದಾರೆ. ಮಳೆ ಬಂದರೆ ಆ ಏರಿಯಾದ ಜನರ, ವಾಹನ ಸವಾರರ ಪಜೀತಿ ಹೇಳತೀರದು. ಯಾವುದೇ ಹಣದ ಕೊರತೆ ಇಲ್ಲದಿದ್ದರೂ ಜಗತ್ತಿನ ಸಿಲಿಕಾನ್ ಸಿಟಿ ಎಂದು ಹೆಸರಿದ್ದರೂ, ಬುದ್ದಿವಂತ ಶ್ರೀಮಂತರು ಇದ್ದರೂ ಬೆಂಗಳೂರಿಗರು ರಸ್ತೆಯಲ್ಲಿ ಕಳೆಯುವ ಸಮಯವೇ ಜಾಸ್ತಿ ಎಂದು ಹೇಳಲಾಗುತ್ತಿದೆ ಯಾಕೆ?. ನಮ್ಮಲ್ಲಿರುವ ಲಂಚ, ಭ್ರಷ್ಟಾಚಾರವೇ ಅದಕ್ಕೆ ಮುಖ್ಯ ಕಾರಣ. ಲಂಚ, ಭ್ರಷ್ಟಾಚಾರ ಹೆಚ್ಚಿರುವ ದೇಶಗಳೆಲ್ಲಾ ಬಡತನದ ಪಟ್ಟಿಯಲ್ಲಿವೆ. ನಮ್ಮ ದೇಶ ೮೫ರ ಸ್ಥಾನದಲ್ಲಿದೆ. ಫಿನ್‌ಲ್ಯಾಂಡ್, ಡೆನ್ಮಾರ್ಕ್, ನ್ಯೂಜಿಲ್ಯಾಂಡ್ ಭ್ರಷ್ಟಾಚಾರದಲ್ಲಿ ಅತ್ಯಂತ ಕಡಿಮೆ 1, 2, 3ನೇ ಸ್ಥಾನದಲ್ಲಿವೆ. ಭ್ರಷ್ಟಾಚಾರ ಕಡಿಮೆ ಇರುವ ದೇಶಗಳೆಲ್ಲಾ ಅಭಿವೃದ್ಧಿ ಹೊಂದಿವೆ.

ಇಷ್ಟೆಲ್ಲಾ ಲಂಚ, ಭ್ರಷ್ಟಾಚಾರ ಇದ್ದರೂ ಜನರನ್ನು ಸುಲಿಗೆ ಮಾಡುತ್ತಿದ್ದರೂ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ನಮ್ಮ ಜನಪ್ರತಿನಿಧಿಗಳು, ಶಾಸಕರು, ಮಂತ್ರಿಗಳಿಗೆ, ಪಕ್ಷದ ನಾಯಕರುಗಳಿಗೆ ಅದರ ಬಿಸಿ ಮುಟ್ಟಿದೆಯೇ?. ಅವರಿಗೆ ಲಂಚ, ಭ್ರಷ್ಟಾಚಾರದಿಂದ ಏನಾದರು ತೊಂದರೆಯಾಗುತ್ತಿದೆಯೇ? ಎಂದು ವಿಚಾರಿಸಿ ನೋಡಿ. ಅವರಿಗೆ ಏನೂ ತೊಂದರೆಯಾಗುತ್ತಿಲ್ಲ. ಅವರ ಕೆಲಸಗಳನ್ನೆಲ್ಲಾ ಅಧಿಕಾರಿಗಳು ಮಾಡಿಕೊಡುತ್ತಾರೆ. ಯಾಕೆಂದರೆ ಅಧಿಕಾರಿಗಳು ಅವರಿಗೆ ಹೆದರುತ್ತಾರೆ. ಅವರಿಗೆ ತಾವು ಜನರಿಂದ ವಸೂಲಿ ಮಾಡಿದ ಹಣವನ್ನು ಕಪ್ಪವಾಗಿ ಕೊಟ್ಟು ರಕ್ಷಣೆಯನ್ನೂ ಪಡೆಯುತ್ತಾರೆ. ಜನಪ್ರತಿನಿಧಿಗಳು ಮತ್ತು ಪಕ್ಷಗಳು ಮನಸ್ಸು ಮಾಡಿದರೆ ಲಂಚ, ಭ್ರಷ್ಟಾಚಾರ ನಿಲ್ಲಿಸಬಹುದು ಎಂದು ಹೇಳಲಾಗುತ್ತಿದೆ. ಅದು ಹೌದೋ ಅಲ್ಲವೋ ಎಂದು ವಿಚಾರಿಸಿ. ಅದಕ್ಕೆ ಪರಿಹಾರ ಇಷ್ಟೆ. ಜನರು ತಾವು ರಾಜರುಗಳೆಂದು ತಿಳಿದು ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಸೇವೆಗಾಗಿ ಇರುವವರೆಂದು ಅರ್ಥ ಮಾಡಿಕೊಳ್ಳಬೇಕು. ಲಂಚ, ಭ್ರಷ್ಟಾಚಾರಕ್ಕೆ ಪೂರಕವಾಗಿರುವ ಈಗಿನ ಕಾನೂನು ಮತ್ತು ವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಉತ್ತಮ ಸೇವೆ ಮಾಡುವಂತಹ ಕಾನೂನನ್ನು, ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸಬೇಕು.

ಈ ಹೋರಾಟಕ್ಕೆ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಈಗಾಗಲೇ ಅಪಾರ ಬೆಂಬಲ ದೊರಕಿದೆ. ಲಂಚ ರಹಿತ ಸೇವೆ ನೀಡಲು ಅಧಿಕಾರಿಗಳು ಮುಂದೆ ಬಂದಿದ್ದಾರೆ. ಅನೇಕ ಅಧಿಕಾರಿಗಳು, ಜನಪ್ರತಿನಿಧಿಗಳು, ಪಕ್ಷದ ನಾಯಕರುಗಳು, ನಮ್ಮ ಊರಿನ ಶಾಸಕರು ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ದೆಹಲಿ, ಬೆಂಗಳೂರಿನಲ್ಲಿ ಅಲ್ಲಿ ಇರುವ ನಮ್ಮ ಊರಿನವರು ಬೆಂಬಲ ಘೋಷಿಸಿದ್ದಾರೆ. ನಮ್ಮ ಊರು ಅಭಿವೃದ್ಧಿಯಾಗಬೇಕಾದರೆ ಲಂಚ, ಭ್ರಷ್ಟಾಚಾರ ಮುಕ್ತವಾಗಬೇಕು. ಎಂಬ ಅಭಿಪ್ರಾಯ ಎಲ್ಲರಲ್ಲಿದೆ. ಅದು ಕಾರ್ಯರೂಪಕ್ಕೆ ಬರಲು ನಮ್ಮ ಜನಪ್ರತಿನಿಧಿಗಳನ್ನು, ಪಕ್ಷದ ನಾಯಕರುಗಳನ್ನು, ಸಂಘಸಂಸ್ಥೆಯವರನ್ನು ಲಂಚ, ಭ್ರಷ್ಟಾಚಾರ ನಿರ್ಮೂಲನೆಯ ಹೋರಾಟದ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಬೇಕು. ಲಂಚವನ್ನಾಗಿ ಪಡೆದುಕೊಂಡ ಹಣವನ್ನು ಅಧಿಕಾರಿಗಳು ಹಿಂತಿರುಗಿಸುವಂತೆ ಮಾಡಿ ಲಂಚಕೋರರನ್ನು ಬಹಿಷ್ಕಾರ ಮಾಡಬೇಕು. ಉತ್ತಮ ಸೇವೆ ನೀಡುವವರನ್ನು ಪುರಸ್ಕರಿಸಬೇಕು. ಆ ಮೂಲಕ ಭಾರತವನ್ನು ಲಂಚ, ಭ್ರಷ್ಟಾಚಾರ ಮುಕ್ತ ದೇಶವನ್ನಾಗಿ ಮಾಡಿ ವಿಶ್ವಗುರುವನ್ನಾಗಿ ಮಾಡಬೇಕು. ಅದು ಸುಳ್ಯ, ಪುತ್ತೂರು, ಬೆಳ್ತಂಗಡಿ, ದ.ಕ ಜಿಲ್ಲೆಯಿಂದ ಪ್ರಾರಂಭವಾಗಲಿ ಎಂದು ಆಶಿಸುತ್ತೇನೆ.

ಪ್ರಧಾನಿ ಮೋದಿಜಿಯವರನ್ನು ಅವರ ನಾ ಖಾವೂಂಗ, ನಾ ಖಾನೆದೂಂಗ (ನಾನು ಲಂಚ ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ) ಎಂಬ ವಿಷಯಕ್ಕೆ ಅಭಿನಂದಿಸುವುದು ಸಂತೋಷದ ವಿಷಯ. ಆದರೆ ಅವರ ಅಧೀನದಲ್ಲಿರುವ ಸರಕಾರಗಳು, ಮಂತ್ರಿಗಳು, ಶಾಸಕರು ಲಂಚ, ಭ್ರಷ್ಟಾಚಾರ ಮುಕ್ತವಾಗಿರಬೇಕಲ್ಲ. ಪ್ರಧಾನಿ ಮೋದಿಯವರ ಅಭಿಮಾನಿಗಳು ಇಲ್ಲಿಯ ಲಂಚ, ಭ್ರಷ್ಟಾಚಾರ ಅವರ ಗಮನಕ್ಕೆ ಬಾರದೇ ಇದ್ದರೆ ಅದನ್ನು ಅವರ ಗಮನಕ್ಕೆ ತರಲು ಪ್ರಯತ್ನಿಸಬೇಕು. ನಾನಂತು ಮೋದಿಜಿಯವರ, ರಾಹುಲ್ ಗಾಂಧಿಯವರ ಎದುರು ಚುನಾವಣೆಗೆ ನಿಂತು ಆ ವಿಚಾರವನ್ನು ಅವರ ಗಮನಕ್ಕೆ ತರಲು ನನ್ನ ಪ್ರಯತ್ನ ಮಾಡಿದ್ದೇನೆ. ನಮ್ಮ ಎಲ್ಲಾ ಜನರು ಲಂಚ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೆ ಅದು ಮೋದಿಜಿಯವರಿಗೆ ಮತ್ತು ಇತರ ಎಲ್ಲಾ ಪಕ್ಷದವರಿಗೆ ತಲುಪಿ ಚುನಾವಣಾ ವಿಚಾರವಾಗಿ ಮಾರ್ಪಟ್ಟು ಲಂಚ ಭ್ರಷ್ಟಾಚಾರ ಮುಕ್ತ ದೇಶ ನಮ್ಮದಾಗುವುದು ಮಾತ್ರವಲ್ಲ ಅಭಿವೃದ್ಧಿಯಾಗಿ ವಿಶ್ವನಾಯಕನಾಗುವುದು ಖಂಡಿತ ಎಂದು ನಾನು ನಂಬಿದ್ದೇ ನೆ.

LEAVE A REPLY

Please enter your comment!
Please enter your name here