‘ನಮ್ಮೂರು ನಮ್ಮ ಹೆಮ್ಮೆ’ ಯೋಜನೆಯನ್ನು ರಾಜ್ಯಕ್ಕೆ ವಿಸ್ತರಿಸಿ: ರಘುನಂದನ್

0

ಬೆಂಗಳೂರು: ಲಂಚ, ಭ್ರಷ್ಟಾಚಾರ ವಿರುದ್ಧ ಸುದ್ದಿ ನಡೆಸುತ್ತಿರುವ ಆಂದೋಲನದ ಭಾಗವಾದ ’ನಮ್ಮೂರು ನಮ್ಮ ಹೆಮ್ಮೆ’ ಉತ್ತಮವಾಗಿದ್ದು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಿ. ನಂತರ ರಾಜ್ಯವ್ಯಾಪಿ ವಿಸ್ತರಿಸಲು ಯೋಜನೆ ರೂಪಿಸಬೇಕು ಎಂದು ಕನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ನಿವೃತ್ತ ಕಾರ್ಯದರ್ಶಿ ರಘುನಂದನ್ ಹೇಳಿದರು.

ಬೆಂಗಳೂರಿನ ಅವರ ನಿವಾಸದಲ್ಲಿ ಸುದ್ದಿ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರ ವಿರುದ್ಧ ಜನ ಕೆಲಸ ಮಾಡಬೇಕಾದರೆ ನಮ್ಮ ಹಕ್ಕುಗಳ ಬಗ್ಗೆ ನಾವು ಚೆನ್ನಾಗಿ ಅರಿತಿರಬೇಕು. ನಮ್ಮ ಹಕ್ಕುಗಳ ಬಗ್ಗೆ ಸರಿಯಾಗಿ ತಿಳಿದಿದ್ದರೆ ಮಾತ್ರ ಪ್ರಶ್ನೆ ಕೇಳುವ ಸಾಮರ್ಥ್ಯ ಇರುತ್ತದೆ. ಸರಕಾರಿ ವ್ಯವಸ್ಥೆ ಹೇಗೆ ನಡೆಯುತ್ತದೆ? ಯಾರು ಯಾವ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎನ್ನುವುದು ತಿಳಿದಿದ್ದರೆ ಮಾತ್ರ ಹೇಗೆ ಪ್ರಶ್ನೆ ಕೇಳಬಹುದು ಎಂದು ಗೊತ್ತಾಗುತ್ತದೆ. ಪ್ರಶ್ನೆ ಕೇಳಿದರೆ ಮಾತ್ರ ಉತ್ತರ ಸಿಗುತ್ತದೆ. ಪ್ರಶ್ನೆ ಕೇಳಲು ಹೆದರಿದರೆ, ನಮಗೇ ಟೋಪಿ ಹಾಕುತ್ತಾರೆ. ಆತ್ಮವಿಶ್ವಾಸದಿಂದ ಸರಕಾರಿ ಕಚೇರಿಗಳಿಗೆ ಹೋಗಬೇಕು. ಅಧಿಕಾರಿಗಳು ಹೇಳಿದ್ದನ್ನು ಕಣ್ಣು ಮುಚ್ಚಿ ನಂಬಬೇಡಿ. ಕೆಲಸ ಆಗುವುದಿಲ್ಲ ಎಂದಾದರೆ, ಯಾವ ಕಾರಣಕ್ಕೆ ಆಗುವುದಿಲ್ಲ ಎಂದು ಮರುಪ್ರಶ್ನೆ ಹಾಕಬೇಕು. ಸರಕಾರಿ ಕಚೇರಿಗೆ ಹೋಗುವ ಮೊದಲು ಸಾಕಷ್ಟು ಹೋಂ ವರ್ಕ್ ಮಾಡಿಕೊಳ್ಳಿ. ಏಜೆಂಟ್ ಅಥವಾ ಮಧ್ಯವರ್ತಿಗಳ ಮೂಲಕ ಕೆಲಸ ಮಾಡಬೇಡಿ. ಸರಕಾರಿ ಕೆಲಸಗಳು ಲಂಚ ರಹಿತ ವ್ಯವಸ್ಥೆಯಲ್ಲಿ ಇದೆ. ಇದನ್ನು ಫಾಲೋಅಪ್ ಮಾಡಿಕೊಂಡು ಕೆಲಸ ಮಾಡಿಕೊಳ್ಳಿ. ನೀವು ಬಿಗಿಯಾದಷ್ಟು ಅಥವಾ ನಿಮ್ಮ ವಿಜಿಲೆನ್ಸ್ ಸರಿಯಾದಷ್ಟು ಭ್ರಷ್ಟಾಚಾರ ಕಡಿಮೆಯಾಗುತ್ತದೆ. ನಮ್ಮೂರು ನಮ್ಮ ಹೆಮ್ಮೆ ಉತ್ತಮ ಕಾರ್ಯಕ್ರಮ. ದೇಶದ 2,50,000 ಗ್ರಾಪಂಗಳಲ್ಲೂ ಇದು ನಡೆಯಬೇಕು. ದಕ್ಷಿಣ ಕನ್ನಡದಲ್ಲಿ ಶುರು ಮಾಡಿದ್ದೀರಿ. ಇದು ಸಂಪೂರ್ಣವಾದ ಬಳಿಕ ಅಪ್‌ಸ್ಕೇಲ್ ಮಾಡಿಕೊಂಡು, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯ ಮಾಡಿದರೆ ಉತ್ತಮ. ಕರ್ನಾಟಕದ ಬಗ್ಗೆ ಹೇಳುವುದಾದರೆ, ಜನರಿಗೆ ಉತ್ತಮ ವ್ಯವಸ್ಥೆ, ಐಡಿಯಾ ಕೊಟ್ಟರೆ ಜನರು ಅಂಗೀಕರಿಸುತ್ತಾರೆ ಎಂದರು.

ಹಮ್, ಹಮಾರೆ ಸರ್ಕಾರ್

ಹಮ್, ಹಮಾರೆ ಸರ್ಕಾರ್ ಎಂಬ ಯೋಜನೆಯನ್ನು ನಾವು ಹಮ್ಮಿಕೊಂಡಿದ್ದೇವೆ. ಅಂದರೆ ಗ್ರಾಮ ಪಂಚಾಯತ್‌ನ ವ್ಯವಸ್ಥೆಯನ್ನು ಅಲ್ಲಿನ ಗ್ರಾಮಸ್ಥರು ತಿಳಿದುಕೊಳ್ಳುವುದೇ ಆಗಿದೆ. ಗ್ರಾಮ ಪಂಚಾಯತ್ ಗೆ ಬರುವ ಅನುದಾನ ಎಷ್ಟು? ಮತ್ತು ಆ ಅನುದಾನ ಎಲ್ಲಿಂದ ಬರುತ್ತದೆ ಹಾಗೂ ಹೇಗೆ ವಿನಿಯೋಗ ಆಗುತ್ತದೆ ಎಂಬುದನ್ನು ಮೊದಲಿಗೆ ನಾವು ತಿಳಿದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕೆಲ ಗ್ರಾಮ ಪಂಚಾಯತ್ ಗಳ ಗ್ರಾ- ಕೂಡ ಸಿದ್ಧಪಡಿಸಿಕೊಂಡೆವು. ಹೀಗೆ ಮಾಡುವುದರಿಂದ ಅನುದಾನದ ದುರುಪಯೋಗ ಆಗುವುದು ತಪ್ಪುತ್ತದೆ ಎಂದು ತಮ್ಮ ಯೋಜನೆಯ ಬಗ್ಗೆ ವಿವರಿಸಿದರು.

LEAVE A REPLY

Please enter your comment!
Please enter your name here