ಜೂ. 30: ಹಂಟ್ಯಾರು ಶಾಲಾ ಮುಖ್ಯಶಿಕ್ಷಕಿ ಜಾನಕಿ ಎಂ. ಸೇವಾ ನಿವೃತ್ತಿ

0

ಪುತ್ತೂರು: ಹಂಟ್ಯಾರು ಸ.ಉ.ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಜಾನಕಿ ಎಂ. ಜೂನ್ 30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. 39 ವರ್ಷ 7 ತಿಂಗಳು ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿರುವ ಇವರು ಮೂಲತಃ ಪುತ್ತೂರು ತಾಲೂಕಿನ ಮುಂಡೋವು ಮೂಲೆ ನಿವಾಸಿ. 1962ರ ಜೂನ್ 22ರಂದು ಜನಿಸಿದ್ದು, ರಶ್ಮಿಶ್ರೀಯಾನ್ ಹಾಗೂ ರಕ್ಷಾ ಇವರ ಪುತ್ರಿಯರು. 1982 ನವೆಂಬರ್ 2ರಂದು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡರು. ಬಳಿಕ ಶಿರಾಡಿ, ಮುಂಡೂರು-1, ಮಾಡನ್ನೂರು, ಪರ್ಪುಂಜ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2001ರಿಂದ ಮಿತ್ತಡ್ಕ ಶಾಲೆಯಲ್ಲಿ ಪೂರ್ಣಕಾಲಿಕ ಮುಖ್ಯಗುರುಗಳಾಗಿ ನೇಮಕಗೊಂಡರು. ಅಲ್ಲಿಂದ 2016ರಲ್ಲಿ ಹಂಟ್ಯಾರು ಶಾಲೆಗೆ ವರ್ಗಾವಣೆಗೊಂಡಿದ್ದು, ಇದೀಗ ನಿವೃತ್ತರಾಗುತ್ತಿದ್ದಾರೆ.

ಇಂದು ಸನ್ಮಾನ, ವಿದಾಯ ಸಮಾರಂಭ:

ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಜಾನಕಿ ಎಂರವರಿಗೆ ಶಾಲಾ ಎಸ್‌ಡಿಎಂಸಿ , ಹಳೆ ವಿದ್ಯಾರ್ಥಿ ಸಂಘ ಹಾಗೂ ಶಿಕ್ಷಕರಿಂದ ವಿದಾಯ ಹಾಗೂ ಸನ್ಮಾನ ಸಮಾರಂಭ ಜೂ. 30 ರಂದು ಶಾಲಾ ವಠಾರದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಸಿ, ಲೋಕೇಶ್ ಎಸ್ ಆರ್, ಬಿರ‍್ಸಿ ಶೋಭಾ, ಇಸಿಒ ಅಮೃತಕಲಾ, ಹರಿಪ್ರಸಾದ್, ಇಆರ್‌ಟಿ ತನುಜಾ, ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ, ಆರ್ಯಾಪು ಗ್ರಾಪಂ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಪೂರ್ಣಿಮಾ, ಪಿಡಿಒ ನಾಗೇಶ್, ಗ್ರಾಪಂ ಸದಸ್ಯರುಗಳಾದ ಹರೀಶ್ ನಾಯಕ್, ಗಿರೀಶ್ ಗೌಡ, ಪವಿತ್ರ ಬಾಳಿಲ, ಚೇತನ್, ತಾಪಂ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ತಾಪಂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಾಬು ಮರಿಕೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ಪಾಪೆತ್ತಡ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here