ನಿಡ್ಪಳ್ಳಿ; ನೀರಿನಿಂದ ಸಂಪೂರ್ಣ ಮುಳುಗಡೆಯಾದ ಕೂಟೇಲು ಪರಿಸರ- ಆತಂಕದಲ್ಲಿ ಜನತೆ

0

ನಿಡ್ಪಳ್ಳಿ; ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಜೂ.30 ರಂದು ನಿಡ್ಪಳ್ಳಿ ಗ್ರಾಮದ ಕೂಟೇಲು ಪರಿಸರ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿದ್ದು ಜನರು ಆತಂಕಗೊಂಡಿದ್ದಾರೆ.
ಕೂಟೇಲು ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು ಸೇತುವೆಗೆ ಕಾಂಕ್ರೀಟ್ ಹಾಕಲು ಹಲಗೆ ಮತ್ತು ಕಬ್ಬಿಣ ಜೋಡಿಸಲು ಅಡಿಗೆ ಕಂಬ ಹಾಕಿದ್ದು ನೀರು ಹರಿಯಲು ಅವಕಾಶ ಇಲ್ಲದಿರುವುದರಿಂದ ಪಕ್ಕದ ತೋಟಗಳಿಗೆ ನೀರು ನುಗ್ಗಿ ಇಡೀ ಪರಿಸರ ನೀರಿನಿಂದ ಅವೃತವಾಗಿದೆ. ಅಲ್ಲದೆ ಅಲ್ಲಿ ರಾಶಿ ಹಾಕಿದ ಮಣ್ಣು ತೆಗೆಯದೆ ಇರುವುದರಿಂದಲೂ ತೋಟಗಳಿಗೆ ನೀರು ನುಗ್ಗಲು ಕಾರಣ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.
ಕೂಟೇಲು ಪರಿಸರದ ಸುಮಾರು ಆರು ಮಂದಿಗ ಸಂಬಂಧಪಟ್ಟ ತೋಟದಲ್ಲಿ ಕೆಂಪು ಮಣ್ಣು ಮಿಶ್ರಿತ ನೀರು ತುಂಬಿದ್ದು ಅಪಾರ ಹಾನಿಯಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಅಡಿಕೆ, ತೆಂಗು, ಕಾಳುಮೆಣಸು ಕೃಷಿ ನಾಶವಾಗುವ ಸಂಭವ ಇದೆ ಎಂದು ಅತಂಕದಲ್ಲಿದ್ದಾರೆ.

LEAVE A REPLY

Please enter your comment!
Please enter your name here