ಮಂಗಳೂರಿನ ಬೋಂದೆಲ್‌ನಲ್ಲಿ `ಆರ್.ಇಬಿ ಗ್ರ್ಯಾಂಡ್ ವ್ಯೂ ವಸತಿ ಸಮುಚ್ಛಯದ ಶಿಲಾನ್ಯಾಸ

0

ಪುತ್ತೂರು: ಕಳೆದ 23 ವರ್ಷಗಳಿಂದ ವಸತಿ ಹಾಗೂ ವಾಣಿಜ್ಯ ಸಮುಚ್ಛಯಗಳ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯ ಸಂಸ್ಥೆಗಳಲ್ಲೊಂದಾಗಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಸಾರಥ್ಯದ ರೈ ಎಸ್ಟೇಟ್ಸ್ ಆಂಡ್ ಬಿಲ್ಡರ್‍ಸ್ ಪ್ರೈವೇಟ್ ಲಿಮಿಟೆಡ್ ಮಂಗಳೂರಿನ ಏರ್‌ಪೋರ್ಟ್ ರಸ್ತೆಯ ಬೋಂದೆಲ್‌ನಲ್ಲಿ ನಿರ್ಮಿಸಲಿರುವ `ಆರ್‌ಇಬಿ ಗ್ರ್ಯಾಂಡ್ ವ್ಯೂ ವಸತಿ’ ಸಮುಚ್ಛಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜೂ.30ರಂದು ನಡೆಯಿತು.

 


ಅರ್ಚಕ ರಾಮಭಟ್ ಮಂಗಳೂರುರವರು ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮೂಲಕ ಶಿಲಾನ್ಯಾಸಕ್ಕೆ ಚಾಲನೆ ನೀಡಲಾಯಿತು. ರೈ ಎಸ್ಟೇಟ್ಸ್ ಆಂಡ್ ಬಿಲ್ಡರ್‍ಸ್ ಪ್ರೈವೆಟ್ ಲಿಮಿಟೆಡ್‌ನ ಮುಖ್ಯಸ್ಥ ಅಶೋಕ್ ಕುಮಾರ್ ರೈಯವರು ಬ್ರೋಚರ್‌ಗಳನ್ನು ಬಿಡುಗಡೆಗೊಳಿಸಿದರು. ಇಂಜಿನಿಯರ್‌ಗಳಾದ ಅನಿಲ್ ಹೆಗ್ಡೆ, ಸುರೇಶ್, ಗುತ್ತಿಗೆದಾರ ಮಹಾಬಲ ರೈ, ಸುಮಾ ಅಶೋಕ್ ರೈ, ರಿಧಿ ರೈ, ಪ್ರದಿಲ್ ರೈ, ಶೃಧಿ ರೈ, ನಳಿನಿ ಪಿ ಶೆಟ್ಟಿ ಕಲ್ಲಾರೆ, ನಿಹಾಲ್ ಶೆಟ್ಟಿ ಕಲ್ಲಾರೆ ಮತ್ತಿತರರು ಉಪಸ್ಥಿತರಿದ್ದರು.

ಆರ್.ಇ.ಬಿ. ಗ್ರ್ಯಾಂಡ್ ವ್ಯೂನ ವಿಶೇಷತೆ;
ನುರಿತ ಆರ್ಕಿಟೆಕ್ಟ್‌ಗಳ ಕ್ರಿಯಾತ್ಮಕ ವಿನ್ಯಾಸಗಳ ಮೂಲಕ ವಿವಿಧ ರೀತಿಯ ಕಟ್ಟಡಗಳನ್ನು ಪರಿಚಯಿಸಿರುವ ರೈ ಎಸ್ಟೇಟ್ಸ್ ಆಂಡ್ ಬಿಲ್ಡರ್‍ಸ್ ಪ್ರೈವೇಟ್ ಲಿಮಿಟೆಡ್ ಇದೀಗ ವಿನೂತನ ಶೈಲಿಯ ವಸತಿ ಸಮುಚ್ಛಯವನ್ನು ನಿರ್ಮಿಸಲಿದೆ. `ಆರ್‌ಇಬಿ ಗ್ರ್ಯಾಂಡ್ ವ್ಯೂ’ ವಸತಿ ಸಮುಚ್ಛಯ 2 ಬ್ಲಾಕ್‌ಗಳಲ್ಲಿ ನೆಲ ಅಂತಸ್ತು ಸೇರಿ 9 ಮಹಡಿಗಳನ್ನು ಒಳಗೊಂಡಿರುತ್ತವೆ. ಈ ಸಮುಚ್ಚಯದಲ್ಲಿ 1BHKಯ -16, 2BHK ಯ -139,3BHKಯ-43, ಒಟ್ಟು198 ಪ್ಲ್ಯಾಟ್‌ಗಳು ಮತ್ತು 4 ಪೆಂಟ್‌ಹೌಸ್ ನಿರ್ಮಾಣಗೊಳ್ಳಲಿವೆ. ರೈ ಎಸ್ಟೇಟ್ಸ್ ಆಂಡ್ ಬಿಲ್ಡರ್‍ಸ್ ಪ್ರೈವೇಟ್ ಲಿಮಿಟೆಡ್‌ನವರು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೈಗೆಟಕುವ ದರದಲ್ಲಿ ಮನೆ ಖರೀದಿಸಲು ಹಲವು ರೀತಿಯ ರಿಯಾಯಿತಿಗಳನ್ನು ಕೊಡುತ್ತಿದ್ದಾರೆ. ಕೂಡಲೇ ಬುಕ್ಕಿಂಗ್ ಮಾಡಿದವರಿಗೆ 1BHK-555 Sft -Rs. 19 ಲಕ್ಷ,2BHK-1010 Sft – Rs. 35 ಲಕ್ಷ, 3BHK-1315 Sft -Rs. 46 ಲಕ್ಷಕ್ಕೆ ಕೊಡುವುದಾಗಿ ಪ್ರಕಟಣೆ ತಿಳಿಸಿದೆ. ಅದೇ ರೀತಿ ಬುಕ್ಕಿಂಗ್ ದರ ರೂ. 1,00,000/-ಆಗಿರುತ್ತದೆ. ಸಾಲದ ವ್ಯವಸ್ಥೆ ಎಸ್.ಬಿ.ಐ, ಫೆಡರಲ್, ಕೆನರಾ ಬ್ಯಾಂಕ್‌ಗಳಿಂದ ಆಯೋಜಿಸಲಾಗಿದೆ. ಎಲ್ಲಾ ಗ್ರಾಹಕರಿಗೆ 1% ಜಿಎಸ್‌ಟಿ ಅನ್ವಯಿಸಲಿದೆ. 250 ಕಾರುಗಳು ಹಾಗೂ ವಿಸಿಟರ್‍ಸ್ ಕಾರುಗಳಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಯೋಗ ಹಾಗೂ ಜಿಮ್‌ಗಾಗಿ4500 ಚದರ ಅಡಿ ಮೀಸಲು ಮತ್ತು ಸುಸಜ್ಜಿತ ವಾಕಿಂಗ್ ಟ್ರಾಕ್, 3 ಅಟೋಮ್ಯಾಟಿಕ್ ಬ್ರಾಂಡೆಡ್ ಲಿಫ್ಟ್ ಸೌಲಭ್ಯ, ಸುಂದರವಾದ ಪ್ರಕೃತಿಯ ನೋಟ, ಸೀವ್ಯೂ, ಮಕ್ಕಳಿಗಾಗಿ ಏರಿಯಾ ಮುಂತಾದ ಸೌಲಭ್ಯಗಳು ಇವೆ. ರೈ ಎಸ್ಟೇಟ್ಸ್ ಆಂಡ್ ಬಿಲ್ಡರ್‍ಸ್ ಪ್ರೈವೇಟ್ ಲಿಮಿಟೆಡ್‌ನವರು ಸಿ.ವಿ. ನಾಯಕ್ ಹಾಲ್‌ನ ಬಳಿ `ಆರ್‌ಇಬಿ ಕ್ರೌನ್, ಕದ್ರಿ ಕಂಬ್ಲ ರಸ್ತೆಯಲ್ಲಿರುವ `ಕಂಬ್ಲ ಹೈಟ್ಸ್’, ಕೊಟ್ಟಾರ ಚೌಕಿಯಲ್ಲಿ `ಆರ್‌ಇಬಿ ನೆಸ್ಟ್’, ಪುತ್ತೂರಿನಲ್ಲಿ `ಆರ್‌ಇಬಿ ಎನ್‌ಕ್ಲೇವ್’, ಸುರತ್ಕಲ್ ಸಮೀಪದ ಸೂರಿಂಜೆಯಲ್ಲಿ `ರಾಧಾಕೃಷ್ಣ ನಗರ ಲೇಔಟ್’, ಪುತ್ತೂರಿನ ಸಾಮೆತ್ತಡ್ಕದಲ್ಲಿ `ಅಶೋಕನಗರ ಲೇಔಟ್, ಪಡೀಲ್‌ನಲ್ಲಿರುವ ಆರ್.ಇ.ಬಿ. ಗ್ಲೋಬಲ್ ವೇರ್ ಹೌಸ್ ಯಾರ್ಡ್, ತೊಕ್ಕೊಟ್ಟು ಮತ್ತು ಸುರತ್ಕಲ್‌ನಲ್ಲಿರುವ `ಆರ್‌ಇಬಿ ಕಾಂಪ್ಲೆಕ್ಸ್’ ವಿಶೇಷ ವಿನ್ಯಾಸದ ವಾಣಿಜ್ಯ ಹಾಗೂ ವಸತಿ ಸಮುಚ್ಚಯಗಳನ್ನು ಈಗಾಗಲೇ ಗ್ರಾಹಕರಿಗಾಗಿ ಅರ್ಪಿಸಿದ್ದು, ಸುಮಾರು ೩ ಸಾವಿರಕ್ಕೂ ಮಿಕ್ಕಿ ತೃಪ್ತಿಕರ ಗ್ರಾಹಕರನ್ನು ಹೊಂದಿದ್ದಾರೆ.

ಅಶೋಕ್ ಕುಮಾರ್ ರೈಯವರು ದೂರದೃಷ್ಠಿತ್ವ ಹಾಗೂ ಬzತೆಗೆ ಪೂರಕವಾಗಿ ಹಲವು ವಿಶೇಷತೆಗಳೊಂದಿಗೆ `ಆರ್‌ಇಬಿ ಗ್ರ್ಯಾಂಡ್ ವ್ಯೂ’ ವಸತಿ ಸಮುಚ್ಛಯ ನಿರ್ಮಾಣಗೊಳ್ಳಲಿದೆ. ೨೦೧೭ರಲ್ಲಿ ರೈ ಎಸ್ಟೇಟ್‌ನ ಕಂಬ್ಳ ಹೈಟ್ಸ್ `ಏಷಿಯನ್ ಪೈಂಟ್’ನ ಅತ್ಯುತ್ತಮ ವಿನ್ಯಾಸದ ಕಟ್ಟಡ ಎಂಬ ಪ್ರಶಸ್ತಿಯನ್ನು ತನ್ನದಾಗಿರಿಸಿಕೊಂಡಿದೆ. ಈ ಸಂಸ್ಥೆಯು ಗುಣಮಟ್ಟದ ನಿರ್ಮಾಣ, ಅತ್ಯಾಧುನಿಕ ಮತ್ತು ಆಕರ್ಷಕ ವಿನ್ಯಾಸ ಸರ್ವಸಜ್ಜಿತ ಸೌಲಭ್ಯಗಳೊಂದಿಗೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ರೈ ಎಸ್ಟೇಟ್ಸ್ ಆಂಡ್ ಬಿಲ್ಡರ್‍ಸ್‌ನವರು ಬೊಂದೇಲ್‌ನಲ್ಲಿರುವ ಸಮುಚ್ಚಯzಲಿ ಗ್ರಾಹಕರಿಗೆ ವೀಕ್ಷಣೆ ಮಾಡುವ ಮತ್ತು ಬುಕ್ಕಿಂಗ್ ಮಾಡುವ ವ್ಯವಸ್ಥೆ ಇರುತ್ತದೆ.

ಬುಕ್ಕಿಂಗ್‌ಗಾಗಿ:09449080969,9740512969, ವೆಬ್‌ಸೈಟ್ www.raiestatesandbuilders.comಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here