ರೋಟರಿ ಕ್ಲಬ್ ಪುತ್ತೂರು ಸಿಟಿ:ಅಧ್ಯಕ್ಷ:ಕೆ.ಪ್ರಶಾಂತ್ ಶೆಣೈ,ಕಾರ್ಯದರ್ಶಿ:ಜಯಗುರು ಆಚಾರ್,ಕೋಶಾಧಿಕಾರಿ:ಕಿರಣ್ ಬಿ.ವಿ

0

ಪುತ್ತೂರು: ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ 2022-13ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಪಡೀಲು ಪ್ರಶಾಂತ್ ಎಂಟರ್‌ಪ್ರೈಸಸ್ ಮಾಲಕ ಕೆ.ಪ್ರಶಾಂತ್ ಶೆಣೈ, ಕಾರ್ಯದರ್ಶಿಯಾಗಿ ಜಯಗುರು ಆಚಾರ್, ಕೋಶಾಧಿಕಾರಿಯಾಗಿ ಕಿರಣ್ ಬಿ.ವಿರವರು ಆಯ್ಕೆಯಾಗಿದ್ದಾರೆ.


ಉಳಿದಂತೆ ನಿಯೋಜಿತ ಅಧ್ಯಕ್ಷರಾಗಿ ಗ್ರೇಸಿ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷರಾಗಿ ಪ್ರಮೋದ್ ಮಲ್ಲಾರ, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಡೆನ್ನಿಸ್ ಮಸ್ಕರೇನ್ಹಸ್, ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್, ಸಹ ಕಾರ್ಯದರ್ಶಿಯಾಗಿ ಮೋಹನ್ ಎಂ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಆನಂದ ಗೌಡ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ರಾಮಚಂದ್ರ ಪುಚ್ಚೇರಿ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಪ್ರಕಾಶ್ ಕೆ.ವಿ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ದಯಾನಂದ ಕೆ.ಎಸ್, ಯೂತ್ ಸರ್ವಿಸ್ ನಿರ್ದೇಶಕರಾಗಿ ಇಜಾಝ್ ಅಹಮದ್, ಬುಲೆಟಿನ್ ಎಡಿಟರ್ ಆಗಿ ಗುರುರಾಜ್, ಚೇರ್‌ಮ್ಯಾಗಳಾಗಿ ಜಯಕುಮಾರ್ ರೈ(ಪೋಲಿಯೋ ಪ್ಲಸ್), ಡಾ.ಶಶಿಧರ್ ಕಜೆ(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ಡಾ.ಹರಿಕೃಷ್ಣ ಪಾಣಾಜೆ(ರೋಟರಿ ಫೌಂಡೇಶನ್), ಲಾರೆನ್ಸ್ ಗೊನ್ಸಾಲ್ವಿಸ್(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಶ್ಯಾಮಲಾ ಶೆಟ್ಟಿ(ಟೀಚ್), ಆನಂದ ಗೌಡ(ವಿನ್ಸ್), ಸ್ವಾತಿ ಮಲ್ಲಾರ(ವೆಬ್/ಐಟಿ), ಮನೋಹರ್ ಕೆ(ಸಿಎಲ್‌ಸಿಸಿ), ರಾಜೇಶ್ ಯು.ಪಿ(ವಾಟರ್ ಆಂಡ್ ಸ್ಯಾನಿಟೇಶನ್), ವಿಕ್ಟರ್ ಮಾರ್ಟಿಸ್(ಫೆಲೋಶಿಪ್), ಸುಧಾಕರ್ ಶೆಟ್ಟಿ(ಫಂಡ್ ರೈಸಿಂಗ್), ಕೃಷ್ಣವೇಣಿ ಪ್ರಸಾದ್ ಮುಳಿಯ(ಸಾಂಸ್ಕೃತಿಕ), ಕೃಷ್ಣಮೋಹನ್(ಕೆರಿಯರ್ ಗೈಡೆನ್ಸ್), ಮಹಾಬಲ(ಕ್ರೀಡೆ), ಪದ್ಮನಾಭ ಶೆಟ್ಟಿ(ರೋಟರ್‍ಯಾಕ್ಟ್), ಧರ್ಣಪ್ಪ ಗೌಡ( ಇಂಟರ್‍ಯಾಕ್ಟ್), ನಟೇಶ್ ಉಡುಪ(ಪಿಕ್ನಿಕ್ ಸಂಯೋಜಕರು)ರವರು ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಪ್ರಶಾಂತ್ ಶೆಣೈಯವರು ಪುತ್ತೂರಿನ ರೋಟರಿ ಭೀಷ್ಮ ಕೆ.ಆರ್ ಶೆಣೈ ಹಾಗೂ ರತಿ ಶೆಣೈ ದಂಪತಿ ಪುತ್ರರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ, ಪ್ರೌಢಶಿಕ್ಷಣವನ್ನು ಸಂತ ಫಿಲೋಮಿನಾ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಇವರು ಲಾಂಗ್‌ಜಂಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿದ್ದು, ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ದಾಖಲೆಯನ್ನು ಮುರಿದಿರುತ್ತಾರೆ. ಅವರ ವೃತ್ತಿ ಜೀವನದ ಆರಂಭಿಕ ಹಂತದಲ್ಲಿ ತಮ್ಮ ಪೂರ್ವಜರ ವ್ಯವಹಾರಕ್ಕೆ ಸೇರಿದ್ದು ಮತ್ತು ೧೭ ವರ್ಷಗಳ ಅನುಭವದ ನಂತರ ೨೦೧೦ರಲ್ಲಿ ಪಡೀಲು ಎಂಬಲ್ಲಿ ಪ್ರಶಾಂತ್ ಎಂಟರ್‌ಪ್ರೈಸಸ್ ಎಂಬ ಏಶ್ಯನ್ ಪೇಂಯ್ಟ್ ಉತ್ಪನ್ನಗಳ ಉದ್ಯಮವನ್ನು ಆರಂಭಿಸಿದ್ದರು. ಪ್ರಸ್ತುತ ಸುಮಾರು ಆರು ಕಂಪೆನಿಗಳೊಂದಿಗೆ ಅವರು ವ್ಯವಹರಿಸುತ್ತಿದ್ದು, ೨೦೧೬-೧೭ನೇ ಸಾಲಿನ ಉದ್ಯಮದಲ್ಲಿನ ಸಾಧನೆಗಾಗಿ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ೨೦೧೭-೧೮ರಲ್ಲಿ ಗೋಲ್ಡ್‌ಸ್ಟಾರ್ ಸಾಧಕ ಪ್ರಶಸ್ತಿಯನ್ನು ಪಡೆದಿರುವುದು ಉಲ್ಲೇಖನೀಯ. ಸಾಮಾಜಿಕ ಜೀವನದಲ್ಲಿ ಏಳು ವರ್ಷಗಳ ಕಾಲ ಸಾಮೆತ್ತಡ್ಕ ಸುದಾನಾ ಸ್ಪೋರ್ಟ್ಸ್ ಕ್ಲಬ್ ಇದರ ಪುತ್ತೂರಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಅನೇಕ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಯೋಜಿಸಿರುತ್ತಾರೆ. ಪ್ರಸ್ತುತ ಅವರು ಪುತ್ತೂರಿನ ಶ್ರೀ ವೆಂಕಟ್ರಮಣ ದೇವಸ್ಥಾನದ ಟ್ರಸ್ಟಿಯಾಗಿ ಮತ್ತು ಮರೀಲು ದಿ ಪುತ್ತೂರು ಕ್ಲಬ್ ಇದರ ಚಾರ್ಟರ್ ಸದಸ್ಯರೂ, ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ.

ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸಾಂದೀಪನಿ ಶಾಲೆಯ ಭಾಸ್ಕರ್ ಆಚಾರ್ ಹಿಂದಾರು ಹಾಗೂ ಸುಜಾತಾ ಆಚಾರ್‌ರವರ ಪುತ್ರ ಜಯಗುರು ಆಚಾರ್ ಹಿಂದಾರುರವರು ತಮ್ಮ ಸಂಸ್ಥೆಯಾದ ಸಾಂದೀಪನಿ ಗ್ರಾಮೀಣ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುತ್ತಾರೆ. ಬಳಿಕ ಅವರು ದಾವಣಗೆರೆಯಲ್ಲಿ ಒಂದು ವರ್ಷಗಳ ಕಾಲ ಭೋಪಾಲ್ ಮೂಲದ ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್ ಕಂಪೆನಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. ಪ್ರಸ್ತುತ ಅವರು ಡೈರಿ ಉತ್ಪನ್ನಗಳು, ನಿರ್ಮಾಣಗಳು ಮತ್ತು ಸಾಯಿ ಭಗವಾನ್ ಇಂಧನಗಳ ಪೆಟ್ರೋಲ್ ಪಂಪ್ ಸೇರಿದಂತೆ ಡೈರಿ ಫಾರ್ಮ್‌ನಂತಹ ವ್ಯವಹಾರಗಳೊಂದಿಗೆ ವ್ಯವಹರಿಸುತ್ತಿದ್ದಾರೆ. ಅಲ್ಲದೆ ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವಿಸ್ತರಣಾ ಶೈಕ್ಷಣಿಕ ಪರಿಷತ್ತಿನ ಆಡಳಿತ ಮಂಡಳಿಯ ಸದಸ್ಯರೂ, ಪುತ್ತೂರು ಸಿವಿಲ್ ಇಂಜಿನಿಯರ್‌ಗಳ ಸಂಘದ ನಿರ್ದೇಶಕರೂ ಮತ್ತು ಪುತ್ತೂರು ಶಿವಳ್ಳಿ ಯುವ ಸಂಪದದ ಅಧ್ಯಕ್ಷರು ಆಗಿದ್ದಾರೆ.

ನೂತನ ಕೋಶಾಧಿಕಾರಿ ಪರಿಚಯ:
ಬಿ.ವಿಠಲಾಚಾರಿ ಹಾಗೂ ರೂಪ ವಿಠಲಾಚಾರಿ ಪುತ್ರರಾದ ಬನ್ನೂರು ಮೇಲ್ಮಜಲು ನಿವಾಸಿ ಕಿರಣ್ ಬಿ.ವಿರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಿರಾಜಪೇಟೆಯ ಎಸ್.ಎ ಆನ್ಸ್‌ನಲ್ಲಿ, ಪ್ರೌಢಶಿಕ್ಷಣವನ್ನು ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ, ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜ್‌ನಲ್ಲಿ, ಡಿಪ್ಲೋಮಾ ಇನ್ ಎಲೆಕ್ಟ್ರೋನಿಕ್ಸ್ ಆಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ಪದವಿಯನ್ನು ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪೂರೈಸಿದ್ದರು. ಎಸ್.ಕೆ.ಜಿ ಕೋ-ಆಪರೇಟಿವ್ ಸೊಸೈಟಿಯ ಮಂಗಳೂರು ಶಾಖೆಯಲ್ಲಿ ೨೨ ವರ್ಷ ಸೇವೆ, ಪ್ರಸ್ತುತ ಪುತ್ತೂರು ಶಾಖೆಯಲ್ಲಿ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್ ಹವ್ಯಾಸ ಹೊಂದಿರುವ ಕಿರಣ್ ಬಿ.ವಿರವರು ಪತ್ನಿ ಸಹನಾ ಕಿರಣ್, ಮಕ್ಕಳಾದ ಶ್ರೀಯ ಬಿ.ಕೆ, ಸೋಹನ್ ಬಿ.ಕೆರವರನ್ನು ಹೊಂದಿರುತ್ತಾರೆ.

ನಾಳೆ ಪದಪ್ರದಾನ…
ಜು.5 ರಂದು ಪಡೀಲು ಎಂಡಿಎಸ್ ಟ್ರಿನಿಟಿ ಸಭಾಂಗಣದಲ್ಲಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಜರಗಲಿದ್ದು, ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಸಲಹೆಗಾರ ಪಿಡಿಜಿ ಸುರೇಶ್ ಚೆಂಗಪ್ಪರವರು ಪದಾದಿಕಾರಿಗಳಿಗೆ ಪದ ಪ್ರದಾನವನ್ನು ಮಾಡಲಿದ್ದಾರೆ. ಗೌರವ ಅತಿಥಿಗಳಾಗಿ ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಕಾರ್ಯದರ್ಶಿ(ಇವೆಂಟ್ಸ್) ಎಕೆಎಸ್ ಕೆ.ವಿಶ್ವಾಸ್ ಶೆಣೈ, ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಆಚಾರ್ಯ, ವಲಯ ಸೇನಾನಿ ಪ್ರಮೋದ್ ಮಲ್ಲಾರರವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here