ಹವಿಗನ್ನಡದಲ್ಲಿ ರಚಿತವಾದ ದೊಡ್ಡಜಾಲು, ಬದ್ಧ ಕನ್ನಡಾನುವಾದ ಬಿಡುಗಡೆ

0

ಪುತ್ತೂರು : ಕೆಲವು ವರ್ಷಗಳ ಹಿಂದೆ ಖ್ಯಾತ ವಿದ್ವಾಂಸರೂ, ಲೇಖಕರೂ ಆದ ಡಾ|ಹರಿಕೃಷ್ಣ ಭರಣ್ಯರವರವರು ಹವಿಗನ್ನಡದಲ್ಲಿ ರಚಿಸಿದ ದೊಡ್ಡಜಾಲು ಕಾದಂಬರಿ ಮತ್ತು ಬದ್ಧ ನಾಟಕ ಕೃತಿಗಳನ್ನುಸಾಹಿತಿ, ಅಂಕಣಕಾರ ಪ್ರೊ.ವಿ.ಬಿ.ಅರ್ತಿಕಜೆಯವರು ಕನ್ನಡಕ್ಕೆ ಅನುವಾದಿಸಿದ್ದು ಇದನ್ನು ಬೆಂಗಳೂರಿನ ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಪ್ರಕಟಿಸಿದೆ.


ಈ ಕೃತಿಯು ಕನ್ನಡ ಸಾಹಿತ್ಯಕ್ಕೆ ಒಂದು ಗಣನೀಯ ಕೊಡುಗೆಯಾಗಿದೆ ಎಂದು ಕುವೆಂಪು ಭಾಷಾ ಭಾರತಿಯ ಅಧ್ಯಕ್ಷ ಡಾ|ಅಜಕ್ಕಳ ಗಿರೀಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ. ಆಸಕ್ತರು ಪ್ರಾಧಿಕಾರದ 08023183311 ಸಂಖ್ಯೆಯ ದೂರವಾಣಿ ಮೂಲಕ ಸಂಸ್ಥೆಯ ರಿಜಿಸ್ಟ್ರಾರ್‌ರವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here