ಅಂತರ್ ಜಿಲ್ಲಾ ಮಟ್ಟದ ಭಜನ್ ಸ್ಪರ್ಧೆಯಲ್ಲಿ ಗಾನಸಿರಿ ಕಲಾ ಕೇಂದ್ರಕ್ಕೆ ಪ್ರಥಮ ಸ್ಥಾನ

0

ಪುತ್ತೂರು:  ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಪೆರ್ಡೂರು , ಉಡುಪಿ ಇದರ ದಶಮಾನೋತ್ಸವದ ಪ್ರಯುಕ್ತ ನಡೆಸಿದ ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆಯಲ್ಲಿ ಖ್ಯಾತ ಗಾಯಕರು ಡಾ.ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾ ಕೇಂದ್ರ ದ ಭಜನಾ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ.

ದ್ವಿತೀಯ ಸ್ಥಾನವನ್ನು ಶ್ರೀ ವಿಠ್ಠಲ ರುಕುಮಾಯಿ ಭಜನಾ ಮಂಡಳಿ, ಕೋಡಿಬೆಂಗ್ರೆ, ಉಡುಪಿ ತೃತೀಯ ಸ್ಥಾನವನ್ನು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ, ನೀರುಮಾರ್ಗ, ಮಂಗಳೂರು ಇವರು ಪಡೆದುಕೊಂಡರು. ಗಾನಸಿರಿಯ ಸಹಶಿಕ್ಷಕಿ ಕು.ಶ್ರೀ ಲಕ್ಷ್ಮಿ ಎಸ್ ರವರು ಅತ್ಯುತ್ತಮ ಗಾಯಕಿ ಪ್ರಶಸ್ತಿ ಪಡೆದುಕೊಂಡರು.

ಡಾ. ಕಿರಣ್ ಕುಮಾರ್ ಹಾಡಿದ ಜೈ ರಾಧಾ ಮಾಧವ್, ಶ್ರೀ ಲಕ್ಷ್ಮಿಯವರ ಡೀಡೀ ಆಡ್ಯಾನೆ ರಂಗ, ಅಖಿಲಾ ನೆಕ್ರಜೆಯವರ ಭಾರವೇ ನಿನಗೆ ಭಾರತೀ ರಮಣ ಮತ್ತು ಸೃಜನಾರವರ ಗಣಪತಿ ಎನ್ನ ಪಾಲಿಸೋ ಪ್ರಸ್ತುತಿ ತೀರ್ಪುಗಾರರ ಮತ್ತು ಸಭಾಂಗಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ವೀಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಹಾರ್ಮೋನಿಯಂನಲ್ಲಿ ಲಿಖಿತ್ ರಾಜ್ ಪೊಳಲಿ, ತಬಲಾದಲ್ಲಿ ವೀಕ್ಷಿತ್ ಕೊಡಂಚ ಉಡುಪಿ ಸಹಕರಿಸಿದರು. ತಂಡದಲ್ಲಿ ಗಾಯನ ಸಾಥಿಗಳಾಗಿ ಕು.ದಿವ್ಯಜ್ಯೋತಿ, ಕು.ಶ್ರೇಯ ಕುಪ್ಪೆಟ್ಟಿ, ಮಾ.ಯಶಸ್ ಬಿ ಜೆ ಭಾಗವಹಿಸಿದ್ದರು‌.

LEAVE A REPLY

Please enter your comment!
Please enter your name here