ಕಡಬ:ವಿದ್ಯಾನಗರ ಬಳಿ ಶಾಲೆಯ ತಡೆಗೋಡೆ ಕುಸಿತ

0

ಕಡಬ: ಎಡಬಿಡದೆ ಸುರಿದ ಅಬ್ಬರದ ಮಳೆಗೆ ಕಡಬ-ಪಂಜ ರಸ್ತೆಯ ವಿದ್ಯಾನಗರದಲ್ಲಿ ಶಾಲೆಯೊಂದರ ತಡೆಗೊಡೆ ಕುಸಿದು ಬಿದ್ದಿದೆ. 

ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಯು ತಮ್ಮ ಶಾಲಾ ವಠಾರದಲ್ಲಿದ್ದ ಶಿಶು ಮಂದಿರದ ಬಳಿ ತಡೆಗೋಡೆ ನಿರ್ಮಿಸಿತ್ತು. ಇದೀಗ ನಿರಂತ ಮಳೆಗೆ ರಸ್ತೆ ಸಮೀಪವಿದ್ದ ತಡೆಗೋಡೆ ಮಣ್ಣು ಸಡಿಲಗೊಂಡು ಪೂರ್ತಿಯಾಗಿ ವಾಲಿಕೊಂಡಿದೆ.

ಪಿಲ್ಲರ್ ಅಳವಡಿಸದೆ ತಡೆಗೋಡೆ ನಿರ್ಮಾಣ ಮಾಡಿರುವುದೇ ಈ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಳೆ ಮತ್ತೆ ಮುಂದುವರಿದಲ್ಲಿ ತಡೆಗೋಡೆ ಮಾರ್ಗಕ್ಕೆ ಬೀಳಲಿದ್ದು ಸರಿಪಡಿಸುವ ಕಾರ್ಯಕ್ಕೆ ಸಂಬಂಧಿಸಿದವರು ಮುಂದಾಗಬೇಕಿದೆ.

LEAVE A REPLY

Please enter your comment!
Please enter your name here