ಕೂಡುರಸ್ತೆ ರಿಫಾಯಿಯ್ಯ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

0

  • ತ್ಯಾಗ, ಸಹನೆ ಬಲಿದಾನದ ಸಂದೇಶವೇ ಬಕ್ರೀದ್- ಇಬ್ರಾಹಿಂ ಫೈಝಿ

ಕೂಡುರಸ್ತೆ: ಸಾವಿರಾರು ವರ್ಷಗಳ ಹಿಂದೆ ಅಲ್ಲಾಹನ ಆಜ್ಞೆ ಪ್ರಕಾರ ಇಬ್ರಾಹಿಂ ನಬಿಯವರು ತನ್ನ ಸ್ವಂತ ಮಗನಾದ ಇಸ್ಮಾಯಿಲ್ ನಬಿಯವರನ್ನು ಬಲಿಯರ್ಪಿಸಲು ಅನುವಾದಾಗ ಅವನ ಆಜ್ಞೆಯಂತೆ ಆಡನ್ನು ಬಲಿ ನೀಡಿದ ತ್ಯಾಗದ ಸ್ಮರಣೆಯಾಗಿದೆ ಬಕ್ರೀದ್ , ಪರಸ್ಪರ ಸ್ನೇಹ, ಮಾನವೀಯ ಅನುಕಂಪ, ತ್ಯಾಗದ ಸ್ಮರಣೆಯಾಗಿದೆ ಬಕ್ರೀದ್ ಸಂದೇಶ ಎಂದು ಕೂಡುರಸ್ತೆ ಖತೀಬರಾದ ಇಬ್ರಾಹಿಂ ಫೈಝಿ ಅವರು ಹೇಳಿದರು. ಅವರು ಕೂಡುರಸ್ತೆ ರಿಫಾಯಿಯ್ಯ ಮಸೀದಿಯಲ್ಲಿ ಈದ್ ವಿಶೇಷ ನಮಾಝಿನ ಬಳಿಕ ಸಂದೇಶ ನೀಡಿದರು. ನಮ್ಮ ಧರ್ಮವನ್ನು ನಾವು ಪಾಲಿಸಿ, ಪರಧರ್ಮವನ್ನು ಪ್ರೀತಿಸಿ ಬಾಳಿದರೆ ಸುಂದರ ಸಮಾಜದ ನಿರ್ಮಾಣ ಸಾಧ್ಯ ಇದೆ ಎಂದ ಅವರು ಪರಸ್ಪರ ಅರಿತು ಬಾಳುವುದರಿಂದ ಮಾತ್ರ ನಮ್ಮ ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಿಸಲು ಸಾಧ್ಯ ಇದೆ ಎಂದು ಹೇಳಿದರು. ಮಸೀದಿಯಲ್ಲಿ ಜಮಾಅತ್ ಗೌರವಾದ್ಯಕ್ಷರಾದ ಮಾಹಿನ್ ಹಾಜಿ ಬಾಳಾಯ, ಅದ್ಯಕ್ಷರಾದ ಉಮ್ಮರ್ ಅಝರಿ, ಉಪಾದ್ಯಕ್ಷರಾದ ಉಮರ್ ಬಾಳಾಯ, ಪ್ರಧಾನ ಕಾರ್ಯದರ್ಶಿ

 

ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಕೋಶಾದಿಕಾರಿ ಹನೀಫ್ ಕೂಡುರಸ್ತೆ, ಇಬ್ರಾಹಿಂ ಮುಸ್ಲಿಯಾರ್, ಆರ್.ವೈ .ಎಫ್.ಅದ್ಯಕ್ಷರಾದ ಮಜೀದ್ ಬಾಳಾಯ, ಹಾರಿಸ್ ದರ್ಬೆ, ಹಮೀದ್ ಕೂಡುರಸ್ತೆ, ಇಬ್ರಾಹಿಂ ಅಜ್ಜಿಕಲ್ಲು, ಹಾಗು ಜಮಾಅತಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here