ಕೊಳ್ತಿಗೆ: ದುಗ್ಗಳದ ಮದುರ ಸಂಘಟನೆಯಿಂದ ‘ಕೆಸರ್ ಡೊಂಜಿ ದಿನ’ ಆಟೋಟ ಸ್ಪರ್ಧೆ

0

ಪುತ್ತೂರು: ಕೊಳ್ತಿಗೆ ಗ್ರಾಮದ ದುಗ್ಗಳದ ಮದುರ ಯುವ ಫ್ರೆಂಡ್ಸ್ ಸಂಘಟನೆಯ ವತಿಯಿಂದ ಸ್ಥಳೀಯರಿಗೆ 3ನೇ ವರ್ಷದ ಕೆಸರ್ ಡೊಂಜಿ ದಿನ ಆಟೋಟ ಸ್ಪರ್ಧೆಯು ಮೂಲೆಮಜಲು ತಿಮ್ಮಪ್ಪ ಗೌಡರ ಗದ್ದೆಯಲ್ಲಿ ನಡೆಯಿತು.

ಬಾಯಂಬಾಡಿ ಶ್ರೀಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಿರಾಜ್ ಪಾಂಬಾರು ದೀಪ ಬೆಳಗಿಸಿ ಉದ್ಘಾಟಿಸಿದರು. ಗದ್ದೆಯ ಯಜಮಾನರಾದ ತಿಮ್ಮಪ್ಪ ಗೌಡ ಮೂಲೆಮಜಲು, ಮದುರ ಸಂಘಟನೆಯ ಹಿರಿಯ ಸದಸ್ಯರು, ಪದಾಧಿಕಾರಿಗಳು, ಸದಸ್ಯರುಗಳು ಪಾಲ್ಗೊಂಡಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಪುರುಷರು, ಮಕ್ಕಳು ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಪುರುಷರಿಗೆ ಮಡಿಕೆ ಒಡೆಯುವುದು, ಓಟ, ಹಿಮ್ಮುಖ ಓಟ, ರಿಲೇ, ಒಂಟಿ ಕಾಲಿನ ಓಟ, ಬೆನ್ನಲ್ಲಿ ಕೂರಿಸಿ ಓಟ, ಗದ್ದೆಯಲ್ಲಿ ತೆಂಗಿನ ಕಾಯಿ ಹುಡುಕುವುದು, ತೆಂಗಿನ ಕಾಯಿ ಒಡೆಯುವುದು, ಬಕೆಟಿಗೆ ಬಾಲ್ ಹಾಕುವುದು, ಹಗ್ಗ ಜಗ್ಗಾಟ, ಕಬಡ್ಡಿ ಹಾಗೂ ಮಕ್ಕಳಿಗೆ ಓಟ, ಬಕೆಟಿಗೆ ಬಾಲ್ ಹಾಕುವುದು ಆಟೋಟ ಸ್ಪರ್ಧೆಗಳು ನಡೆಯಿತು.

ಕೆಸರು ಗದ್ದೆಯಲ್ಲಿ ಮಕ್ಕಳ ಸಂಭ್ರಮ: ಮಕ್ಕಳು, ಪುರುಷರು ಕೆಸರು ತುಂಬಿದ ಗದ್ದೆಯಲ್ಲಿ ಎದ್ದು-ಬಿದ್ದು ಸಂಭ್ರಮ ಪಟ್ಟು ವಯಸ್ಸಿನ ಮಿತಿಯನ್ನೂ ಲೆಕ್ಕಿಸದೇ ಪ್ರತಿಯೊಬ್ಬರೂ ಕೆಸರಿನಲ್ಲಿ ಇಳಿದು ಖುಷಿಪಟ್ಟರು. ಮಕ್ಕಳಂತೂ ಸಿಕ್ಕಿದ್ದೇ ಲಾಭ ಎಂದುಕೊಂಡು ಕೆಸರಿನಲ್ಲಿ ಪಲ್ಟಿ ಹೊಡೆದು ಮೈತುಂಬಾ ಕೆಸರು ಮೆತ್ತಿಕೊಂಡು ಸಂಭ್ರಮಿಸಿದರು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಆಟೋಟ ಸ್ಪರ್ಧೆಯ ತೀರ್ಪುಗಾರರಾಗಿ ಕೇಶವ ಪಾಂಬಾರು ಸಹಕರಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಎ.ಪಿ.ಎಂ.ಸಿ ಮಾಜಿ ನಿರ್ದೇಶಕರಾದ ತೀರ್ಥಾನಂದ ಗೌಡ ದುಗ್ಗಳ, ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಿರಾಜ್ ಪಾಂಬಾರು, ಮದುರ ಸಂಘಟನೆಯ ಹಿರಿಯ ಮಾರ್ಗದರ್ಶಕ ಸತ್ಯಾನಂದ ಗೌಡ ಬರಡಿಮಜಲು, ಶಿವರಾಮ ಗೌಡ ಬರಡಿಮಜಲು, ರಾಘವ ಗೌಡ ದುಗ್ಗಳ, ಮದುರ ಯುವ -ಂಡ್ಸ್ ಸಂಘದ ಸಲಹೆಗಾರರಾದ ಸತೀಶ್ ಪಾಂಬಾರು ಬಹುಮಾನ ವಿತರಣೆ ಮಾಡಿದರು.

ನಿವೃತ್ತ ಮುಖ್ಯ ಗುರು ವೀರಪ್ಪ ಗೌಡ ದುಗ್ಗಳ, ಗ್ರಾಮ ಪಂಚಾಯತ್ ಸದಸ್ಯರಾದ ಯತೀಂದ್ರ ಗೌಡ ಕೊಚ್ಚಿ, ಸಂಘದ ಕಾರ್ಯದರ್ಶಿ ಯಶವಂತ ದುಗ್ಗಳ, ಖಜಾಂಜಿ ಕಾರ್ತಿಕ್ ಬರಡಿಮಜಲು, ಸಂಘದ ಮಾಜಿ ಪದಾಽಕಾರಿಗಳು, ಸದಸ್ಯರುಗಳು, ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷರಾದ ಮಂಜುನಾಥ್ ದುಗ್ಗಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here