ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವಕ್ಕೆ ವಿಗ್ರಹ ರಚನೆ ಮುಹೂರ್ತ

0
  • ವೈಭವದ ಶೋಭಾಯಾತ್ರೆ ಮತ್ತೆ ಮರುಕಳಿಸಲಿದೆ – ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಕೋವಿಡ್ ಬಳಿಕ ಸಾರ್ವಜನಿಕ ಗಣೇಶೋತ್ಸವಗಳು ಯಾವುದೆ ಅಡ್ಡಿಗಳಿಲ್ಲದೆ ನಡೆಸಲು ಎಲ್ಲಾ ಕಡೆ ಗಣೇಶೋತ್ಸವ ವಿಗ್ರಹ ರಚನೆ ಕಾರ್ಯಗಳು ನಡೆಯುತ್ತಿದ್ದು, ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ 56ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶ್ರೀ ಗಣೇಶನ ವಿಗ್ರಹ ರಚನೆಗೆ ಜು. ೧೬ರಂದು ಸಂಕಷ್ಟ ಚತುರ್ಥಿ ದಿನ ಮುಹೂರ್ತ ನೆರವೇರಿಸಲಾಯಿತು.

ಶಿಲ್ಪಿ ಶ್ರೀನಿವಾಸ ಪ್ರಭು ಅವರು ತೆಂಗಿನ ಕಾಯಿ ಇಟ್ಟು ಆವೆ ಮಣ್ಣಿನ ಮೂಲಕ ಶ್ರೀ ಗಣೇಶನ ವಿಗ್ರಹ ನಿರ್ಮಾಣಕ್ಕೆ ಚಾಲನೆ ನೀಡುವ ಮೂಲಕ ಮುಹೂರ್ತ ನೆರವೇರಿಸಿದರು. ಬೆಳಿಗ್ಗೆ ಸಮಿತಿಯ ಪದಾಧಿಕಾರಿಗಳು ವರ್ಷಂಪ್ರತಿಯಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ, ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ, ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಪ್ರಾರ್ಥನೆ ಮಾಡಿ ಬಳಿಕ ಬೊಳುವಾರಿನಲ್ಲಿ ಸೇರಿ ವಿಗ್ರಹ ಮೂಹರ್ತದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಜೆ ಕೊಟೇಚಾ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೋಶಾಧಿಕಾರಿ ಶ್ರೀನಿವಾಸ, ಜೊತೆಕಾರ್ಯದರ್ಶಿ ನೀಲಂತ್, ಸುಜೀಂದ್ರ ಪ್ರಭು, ಸಚಿನ್ ಶೆಣೈ, ಗಿರೀಶ, ಮಲ್ಲೇಶ್ ಆಚಾರ್ಯ, ಪವನ್ ನಾಯಕ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೈಭವದ ಶೋಭಾಯಾತ್ರೆ ಮತ್ತೆ ಮರುಕಳಿಸಲಿದೆ
ಕಳೆದ ಎರಡು ವರ್ಷದಲ್ಲಿ ಕೊರೋನಾದ ಸಮಸ್ಯೆಯಿಂದಾಗಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಕಷ್ಟ ಸಾಧ್ಯವಾಯಿತು. ಈ ಭಾರಿಯ ಗಣೇಶೋತ್ಸವವನ್ನು ಯತಾವತ್ತಾಗಿ ಹಿಂದೆ ಯಾವ ರೀತಿಯಲ್ಲಿ ಆಚರಿಸುತ್ತಿದ್ದೆವೋ ಅದೇ ರೀತಿ ಈ ಭಾರಿ ಜುರಗಲಿದೆ. ನಾಲ್ಕು ದಿನ ಅನ್ನಸಂತರ್ಪಣೆ, ವೈಭವದ ಸ್ತಬ್ದಚಿತ್ರಗಳೊಂದಿಗೆ ಶೋಭಾ ಯಾತ್ರೆ ಜರುಗಲಿದೆ. ಒಟ್ಟಿನಲ್ಲಿ ವೈಭವ ಶೋಭಾಯಾತ್ರೆ ಮತ್ತೆ ಮರುಕಳಿಸಲಿದೆ.ಅರುಣ್ ಕುಮಾರ್ ಪುತ್ತಿಲ. ಕಾರ್ಯಾಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುತ್ತೂರು

LEAVE A REPLY

Please enter your comment!
Please enter your name here