ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ಗೆ ಜಿಎಸ್‌ಟಿ ಅಧ್ಯಕ್ಷರಿಂದ ಪ್ರಶಂಸಾ ಪತ್ರ

0

ಪುತ್ತೂರು : ದೇಶದಾದ್ಯಂತ ಜಿಎಸ್‌ಟಿ ತೆರಿಗೆ ನಿಯಮ ಪ್ರಾರಂಭವಾದ ನಾಲ್ಕು ವರ್ಷದಲ್ಲಿ ಸತತ 4 ನೇ ಬಾರಿಗೆ ಪುತ್ತೂರಿನ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿರುವ ತೆರಿಗೆ ವಾಣಿಜ್ಯಕರ ನಿರ್ವಹಣೆಯಲ್ಲಿ ತೋರಿಸಿರುವ ಗುಣಮಟ್ಟಕ್ಕಾಗಿ ಕೇಂದ್ರ ಸರ್ಕಾರ, ಹಣಕಾಸು ಇಲಾಖೆಯ ಜಿಎಸ್‌ಟಿ ಅಧ್ಯಕ್ಷರಿಂದ ಪ್ರಶಂಸಾ ಪತ್ರ ಲಭಿಸಿದೆ.

ಸತತ 4 ವರ್ಷಗಳಿಂದ ಪ್ರಮಾಣ ಪತ್ರ ಸಿಗುತ್ತಿದ್ದು, 2021-22ರ ಸಾಲಿನಲ್ಲಿ ಪ್ರಾಮಾಣಿಕವಾಗಿ ಜಿಎಸ್‌ಟಿ ಪಾವತಿ ಮಾಡಿದ್ದಲ್ಲದೆ, ಸಮಯಕ್ಕೆ ಸರಿಯಾಗಿ ರಿಟರ್ನ್‌ಗಳನ್ನು ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆ ಸಲ್ಲಿಸಿರುವುದರಿಂದ ದೇಶದ 1.2 ಕೋಟಿ ಜಿಎಸ್‌ಟಿ ಪಾವತಿದಾರರ ನಡುವೆ ವಿಶೇಷ ಸ್ಥಾನಗಳಿಸಿದೆ.

ಈ ಸಾಧನೆ ಮಾಡಿದ ಜಿಲ್ಲೆಯ ಕೆಲವೇ ಕೆಲವು ಸಂಸ್ಥೆಗಳಲ್ಲಿ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಒಂದಾಗಿದೆ. 64 ವರ್ಷಗಳ ಹಿಂದೆ ಜಿ.ಎಲ್ ಆಚಾರ್ಯ ಪುತ್ತೂರಿನಲ್ಲಿ ಪ್ರಾರಂಭಿಸಿದ ಜಿ.ಎಲ್ ಆಚಾರ್ಯ ಸಂಸ್ಥೆ ಇದೀಗ ಪುತ್ತೂರು, ಹಾಸನ , ಕುಶಾಲನಗರ, ಸುಳ್ಯದಲ್ಲಿ ಜ್ಯುವೆಲ್ಲರಿ ಹೊಂದಿದ್ದು, ಜಿ.ಎಲ್ ಪ್ರಾಪರ್ಟಿಸ್ ಮೂಲಕ ಪುತ್ತೂರಿನಲ್ಲಿ ಜಿಎಲ್ ಟ್ರೇಡ್ ಸೆಂಟರ್, ಜಿ.ಎಲ್ ಕಾಂಪ್ಲೆಕ್ಸ್, ಇದೀಗ ಜಿ.ಎಲ್ ಮಾಲ್ ನಿರ್ಮಾಣ ಹಂತದಲ್ಲಿದೆ.

೨ ದಶಕಗಳ ಹಿಂದೆ ಜಿ.ಎಲ್ ಕಾಂಪ್ಲೆಕ್ಸ್ ಪುತ್ತೂರಿನ ಪ್ರಥಮ ಸುಸಜ್ಜಿತ ಲಾಡ್ಜ್ ಆಗಿದ್ದು, ಇದೀಗ ಜಿ.ಎಲ್ ಮಾಲ್ ಕೂಡ ಪುತ್ತೂರಿನ ಪ್ರಥಮ ಮಾಲ್ ಆಗಲಿದೆ , ಈ ಮೂಲಕ ಹಲವು ಪ್ರಥಮಗಳನ್ನು ನೀಡಿದ ಹೆಗ್ಗಳಿಕೆ ಜಿ.ಎಲ್ ಆಚಾರ್ಯ ಸಂಸ್ಥೆಗೆ ಸಲ್ಲುತ್ತದೆ. ಬಲರಾಮ ಆಚಾರ್ಯ, ಲಕ್ಷ್ಮಿಕಾಂತ್ ಆಚಾರ್ಯ, ಸುದನ್ವ ಆಚಾರ್ಯ ಜಿ.ಎಲ್ ಸಮೂಹ ಸಂಸ್ಥೆಗಳನ್ನು ಮುನ್ನಡೆಸುತಿದ್ದಾರೆ.

LEAVE A REPLY

Please enter your comment!
Please enter your name here