ಕಾವು: ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

0

ವರದಿ: ಸುನೀಲ್ ಎನ್ ಕಾವು

ಚಿತ್ರ: ಎನ್.ಎಸ್.ಕಾವು

* ರೂ. 6.13 ಲಕ್ಷ ನಿವ್ವಳ ಲಾಭ * ಶೇ.25 ಡಿವಿಡೆಂಡ್ * ಪ್ರತಿ ಲೀಟರ್‌ಗೆ 1 ರೂಪಾಯಿ ಬೋನಸ್

[box type=”tip” bg=”#” color=”#” border=”#” radius=”22″]ಬಹುಮಾನ:

ಸಂಘಕ್ಕೆ ವರದಿ ಸಾಲಿನಲ್ಲಿ ಅತಿ ಹೆಚ್ಚು ಹಾಲು ಪೂರೈಕೆ ಮಾಡಿ ಪ್ರಥಮ ಸ್ಥಾನಗಳಿಸಿದ ಕಿಟ್ಟಣ್ಣ ರೈ ನೀರ್ಪಾಡಿ, ದ್ವಿತೀಯ ಸ್ಥಾನಗಳಿಸಿದ ಕಾವು ದಿವ್ಯನಾಥ ಶೆಟ್ಟಿಯವರಿಗೆ ಶಾಲು ಹಾಕಿ ಬಹುಮಾನ ನೀಡಿ ಅಭಿನಂದಿಸಲಾಯಿತು. ಮತ್ತು ಸಂಘಕ್ಕೆ ರೂ.50 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಹಾಲು ಪೂರೈಕೆ ಮಾಡಿದ ಮತ್ತು ವರ್ಷದಲ್ಲಿ 90ಕ್ಕಿಂತ ಹೆಚ್ಚು ದಿನ ಹಾಲು ಪೂರೈಕೆ ಮಾಡಿದ ಸದಸ್ಯರುಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.[/box]

[box type=”info” bg=”#” color=”#” border=”#” radius=”27″]ಅಭಿನಂದನೆ:

ಒಕ್ಕೂಟದಿಂದ ತಾಲೂಕು ವಿಸ್ತರಣಾಧಿಕಾರಿಯಾಗಿ ನೂತನವಾಗಿ ನೇಮಕವಾಗಿರುವ ನಿರಂಜನ್‌ರವನ್ನು ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಮಹಾಸಭೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.[/box]

ಕಾವು: ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಾವು ಇದರ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿರವರ ಅಧ್ಯಕ್ಷತೆಯಲ್ಲಿ ಜು.17ರಂದು ಬೆಳಿಗ್ಗೆ ಸಂಘದ ಆವರಣದಲ್ಲಿ ನಡೆಯಿತು.

ರೂ. 6.13 ಲಕ್ಷ ನಿವ್ವಳ ಲಾಭ:

ಸಾಮಾನ್ಯ ಸಭೆಯಲ್ಲಿ ಸ್ವಾಗತಿಸಿದ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿರವರು ಮಾತನಾಡಿ ಸಂಘವು 2021-22ನೇ ಸಾಲಿನಲ್ಲಿ 297787.5 ಲೀಟರ್ ಹಾಲು ಶೇಖರಣೆ ಮಾಡಿ ರೂ. 89,74,195.46ನ್ನು ವಿತರಣೆ ಮಾಡಿದೆ. ಸ್ಥಳೀಯ ಮತ್ತು ಮಾದರಿ ಹಾಲು ಮಾರಾಟ ಮಾಡಿ ರೂ. 225219.64/- ನ್ನು ಸಂಗ್ರಹಿಸಲಾಗಿದೆ. ದ.ಕ ಹಾಲು ಉತ್ಪಾದಕರ ಒಕ್ಕೂಟದ ಡೈರಿಗೆ ರೂ. 97,94,641.05 ಮೌಲ್ಯದ ಹಾಲನ್ನು ಮಾರಾಟ ಮಾಡಲಾಗಿದೆ. ವರದಿ ಸಾಲಿನಲ್ಲಿ 20784 ಲೀಟರ್ ಹಾಲು ಶೇಖರಣೆ ಹೆಚ್ಚಾಗಿರುತ್ತದೆ. ಸಂಘವು 3140 ಚೀಲ ಮಾದರಿ 1 ಪೆಲೆಟ್ ಪಶು ಆಹಾರವನ್ನು ಒಕ್ಕೂಟದಿಂದ ಖರೀದಿಸಿ ಸದಸ್ಯರಿಗೆ ಮಾರಾಟ ಮಾಡಿ ರೂ.32,39,550/- ಜಮೆ ಆಗಿರುತ್ತದೆ. ಸಂಘವು ರೂ. 6,13,062.97 ನಿವ್ವಳ ಲಾಭ ಗಳಿಸಿ, ಲಾಭಾಂಶವನ್ನು ನಿಯಮಾನುಸಾರ ಹಂಚಿಕೆ ಮಾಡಿ ಸದಸ್ಯರಿಗೆ ಶೇ.25 ಡಿವಿಡೆಂಡ್ ಮತ್ತು ಪ್ರತಿ ಲೀಟರ್ ಹಾಲಿಗೆ 1 ರೂಪಾಯಿ ಬೋನಸ್ ನೀಡಲಾಗುವುದು ಎಂದು ಹೇಳಿದರು. ಸಂಘವು ಆಡಿಟ್ ವರದಿಯಲ್ಲೂ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಎ ಗ್ರೇಡ್‌ನ್ನು ಹೊಂದಿದೆ, ಸಂಘದ ಪ್ರಗತಿ, ಬೆಳವಣಿಗೆ, ಅಭಿವೃದ್ಧಿಗೆ ಇನ್ನು ಮುಂದೆಯೂ ಉತ್ತಮ ರೀತಿಯ ಸಹಕಾರ, ಪ್ರೋತ್ಸಾಹವನ್ನು ನೀಡುವಂತೆ ಕೃಷ್ಣಪ್ರಸಾದ್ ಕೊಚ್ಚಿರವರು ವಿನಂತಿಸಿದರು.

ಡಿವಿಡೆಂಟ್ ಮೊತ್ತ ಕಟ್ಟಡ ನಿಧಿಗೆ

ಮುಂದಿನ ವರ್ಷದಲ್ಲಿ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣದ ಅವಶ್ಯಕತೆ ಇರುವುದರಿಂದ ವರದಿ ವರ್ಷದ ನಿವ್ವಳ ಲಾಭದಲ್ಲಿ ಸದಸ್ಯರಿಗೆ ಹಂಚಿಕೆಯಾದ ಶೇ.25 ಡಿವಿಡೆಂಟ್‌ನ ಪೂರ್ಣ ಮೊತ್ತವನ್ನು ಕಟ್ಟಡ ನಿಧಿಯಲ್ಲಿ ಉಳಿಸಿಕೊಳ್ಳಲು ಸದಸ್ಯರು ಒಪ್ಪಿಗೆ ನೀಡುವಂತೆ ಅಧ್ಯಕ್ಷರು ವಿನಂತಿಸಿದರು, ಅದರಂತೆ ಸಭೆಯು ಸರ್ವಾನುಮತದ ಒಪ್ಪಿಗೆ ನೀಡಿತು.

ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು-ನನ್ಯ

ಸಂಘದ ನಿರ್ದೇಶಕ ಹಾಗೂ ಸ್ಥಾಪಕಾಧ್ಯಕ್ಷರೂ ಆಗಿರುವ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಸಂಘದ ಸದಸ್ಯರು ಒಕ್ಕೂಟದ ಮತ್ತು ಸಹಕಾರಿ ಸಂಘದ ಮೂಲಕ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಹೈನುಗಾರಿಕೆಯನ್ನು ಲಾಭಾದಾಯಕ ಉದ್ಯಮವಾಗಿ ಮಾಡಲು ಪ್ರಯತ್ನಿಸಬೇಕು, ಸ್ವಸಹಾಯ ಸಂಘದ ಮೂಲಕ ಹೈನುಗಾರಿಕೆಗೆ ಸಹಕಾರಿ ಸಂಘದಲ್ಲಿ ರೂ.20 ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯುವ ಅವಕಾಶವಿದೆ ಆ ಮೂಲಕ ಸಂಘದ ಅಭಿವೃದ್ಧಿ ಮತ್ತು ಪ್ರಗತಿಗೆ ಎಲ್ಲಾ ಸದಸ್ಯರು ಸಹಕರಿಸುವಂತೆ ವಿನಂತಿ ಮಾಡಿದರು.

ಹಾಲಿನ ಖರೀದಿ ದರ ಹೆಚ್ಚಿಸಬೇಕು:-ದಿವ್ಯನಾಥ ಶೆಟ್ಟಿ

ಸಂಘದ ಸದಸ್ಯ ದಿವ್ಯನಾಥ ಶೆಟ್ಟಿಯವರು ಮಾತನಾಡಿ 1 ಚೀಲ ಪಶು ಆಹಾರದ ದರ ರೂ.1 ಸಾವಿರ ದಾಟಿದೆ, ಆದರೆ ಹಾಲಿನ ಖರೀದಿ ದರ ರೂ.29-30ರ ಆಸುಪಾಸಿನಲ್ಲಿದೆ, ಹಾಗಾಗಿ ಹಾಲಿನ ಖರೀದಿ ದರ ಹೆಚ್ಚಳ ಮಾಡುವಂತೆ ಮಹಾಸಭೆಯಲ್ಲಿ ನಿರ್ಣಯ ಕೈಗೊಂಡು ಕೆಎಂಎಫ್‌ಗೆ ಬರೆಯುವಂತೆ ಒತ್ತಾಯಿಸಿದರು. ಉತ್ತರಿಸಿದ ಅಧ್ಯಕ್ಷರು ಈ ಬಗ್ಗೆ ನಿರ್ಣಯ ಕೈಗೊಂಡು ಒಕ್ಕೂಟಕ್ಕೆ ಮನವಿ ಮಾಡಲಾಗುವುದು ಮತ್ತು ಒಕ್ಕೂಟದ ಮಹಾಸಭೆಯಲ್ಲಿ ಕೂಡ ಈ ಬಗ್ಗೆ ವಿಷಯ ಪ್ರಸ್ತಾಪಿಸುವ ಭರವಸೆ ನೀಡಿದರು.

ದ.ಕ ಹಾ.ಉ.ಒಕ್ಕೂಟದ ಪುತ್ತೂರು ವಿಭಾಗದ ಉಪವ್ಯವಸ್ಥಾಪಕ ಸತೀಶ್ ರಾವ್ ಮತ್ತು ವಿಸ್ತರಣಾಧಿಕಾರಿ ನಿರಂಜನ್‌ರವರು ಇಲಾಖಾ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ನಾರಾಯಣ ರೈ, ನಿರ್ಮಲ ಪೂವಂದೂರು, ದಿವಾಕರ ಪ್ರಭು, ನಾರಾಯಣ ಶರ್ಮ, ಜಗನ್ನೀವಾಸ ಗೌಡ, ಬಿ. ಸುಧೀಶ್, ಪ್ರೇಮಲತಾ ಸಿ.ಹೆಚ್, ಎಸ್ ಚಂದ್ರಾವತಿ, ಶ್ರೀಧರ ರಾವ್‌ರವರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಸುರೇಂದ್ರ ಬೋರ್ಕರ್ ನನ್ಯ ವಂದಿಸಿದರು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ಕೆದಿಲಾಯ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here