ರೋಟರಿ ಸೆಂಟ್ರಲ್‌ನಿಂದ ಪ್ರಜ್ಞಾ ಆಶ್ರಮಕ್ಕೆ ಅಡುಗೆ ಕೋಣೆ ನಿರ್ಮಾಣ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ ಬಿರುಮಲೆಯಲ್ಲಿರುವ ಭಿನ್ನ ಚೇತನರ ಪ್ರಜ್ಞಾ ಆಶ್ರಮಕ್ಕೆ ಸುಮಾರು ರೂ.2.10ಲಕ್ಷ ವೆಚ್ಚದಲ್ಲಿ ನೂತನ ಅಡುಗೆ ಕೋಣೆಯನ್ನು ನಿರ್ಮಿಸಿ ಕೊಡಲಾಗಿದ್ದು, ಇದರ ಉದ್ಘಾಟನೆಯು ಜು.17 ರಂದು ನೆರವೇರಿತು.

ರೋಟರಿ ಪಿಡಿಜಿ ಮೇಜರ್ ಡೋನರ್ ರಂಗನಾಥ್ ಭಟ್‌ರವರು ಉದ್ಘಾಟಿಸಿ, ಮಾತನಾಡಿ, ಇಂತಹಾ ಯೋಜನೆ ಇನ್ನಷ್ಟು ಮೂಡಿ ಬರಲಿ. ಜನರ ಕಷ್ಟ ಅರಿತು ಮಾಡುವ ಸೇವೆ ದೇವರು ಮೆಚ್ಚುವಂತದ್ದು, ಇಂತಹ ಯೋಜನೆ ನಿರಂತರ ನಡೆಯಲಿ ಎಂದು ಹಾರೈಸಿದರು ಮಾತ್ರವಲ್ಲದೆ ಪ್ರಾಜೆಕ್ಟ್‌ನಿಂದ ಸ್ಫೂರ್ತಿಗೊಂಡು ರೂ.25ಸಾವಿರದ ಧನಸಹಾಯ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಗೌರವ ಅತಿಥಿ, ರೋಟರಿ ಜಿಲ್ಲೆ ವಲಯ ೫ರ ಸಹಾಯಕ ಗವರ್ನರ್ ಎ.ಜಗಜೀವನ್ ದಾಸ್ ರೈರವರು ಮಾತನಾಡಿ, ಪ್ರಜ್ಞಾ ಆಶ್ರಮಕ್ಕೆ ನಿರಂತರ ವಸ್ತುವಿನ ರೂಪದಲ್ಲಿ ಸಹಾಯಹಸ್ತ ನೀಡುವಾಗ ಇವರಿಗೆ ಅಗತ್ಯಕ್ಕೆ ಧನ ಸಹಾಯ ನೀಡುವುದೂ ಅಗತ್ಯವಾಗಿದ್ದು ಮುಂದಿನ ದಿನದಲ್ಲಿ ದಾನಿಗಳು ಧನಸಹಾಯದ ಮೂಲಕ ಸಹಕರಿಸಿದರೆ ಇನ್ನಷ್ಟು ಉಪಕಾರ ಆಗಬಹುದು ಎಂದರು.

ರೋಟರಿ ಜಿಲ್ಲಾ ವಲಯ ೫ರ ವಲಯ ಸೇನಾನಿ ಡಾ|ಹರ್ಷಕುಮಾರ್ ರೈ ಮಾಡಾವು ಮಾತನಾಡಿ, ಈ ವರ್ಷದ ಪ್ರಾಜೆಕ್ಟ್‌ನಲ್ಲಿ ಪದ ಪ್ರದಾನ ಆದ ಕೆಲವೇ ದಿನದಲ್ಲಿ ಉದ್ಘಾಟಿಸಿದ ಈ ಯೋಜನೆ ಎಲ್ಲರೂ ಮೆಚ್ಚುವಂತದ್ದು ಎಂದರು.

ರೋಟರಿ ಸೆಂಟ್ರಲ್‌ನ ಮೆಂಬರ್ಶಿಪ್ ಡೆವಲಪ್‌ಮೆಂಟ್ ಚೇರ್‌ಮ್ಯಾನ್, ಪದ್ಮ ಸೋಲಾರಿನ ಮಾಲಕ ಪದ್ಮನಾಭ ಶೆಟ್ಟಿಯವರು ಮಾತನಾಡಿ, ರೋಟರಿ ಕ್ಲಬ್ ಮೂಲಕ ತಿಂಗಳಿಗೆ 5  ಸಾವಿರದಂತೆ ಒಂದು ವರ್ಷಗಳ ಕಾಲ ಒಟ್ಟು 60ಸಾವಿರ ಕೊಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಸಂಯೋಜಕರಾದ ಸನತ್ ಕುಮಾರ್ ರೈಯವರು ಈ ಯೋಜನೆಯ ಬಗ್ಗೆ ವಿವರಣೆ ನೀಡಿದ್ದು, ಯೋಜನೆಗೆ ಸಹಕರಿಸಿದ ಎಲ್ಲರಿಗೂ ಹೂ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಜೆಕ್ಟ್ ವನಸಿರಿ ಯೋಜನೆಯಂತೆ ಪ್ರಜ್ಞಾ ಆಶ್ರಮದ ಸುತ್ತ ಹಣ್ಣಿನ ಗಿಡಗಳನ್ನು ನೆಡಲಾಯಿತು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ನವೀನ್‌ಚಂದ್ರ ನಾಯ್ಕ್, ಕಮ್ಯೂನಿಟಿ ಸರ್ವಿಸ್ ಚೇರ್‌ಮ್ಯಾನ್ ಮಂಜುನಾಥ ಆಚಾರ್ಯ, ಪ್ರಜ್ಞಾ ಆಶ್ರಮದ ಅಣ್ಣಪ್ಪ ದಂಪತಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಹಾಸ ರೈ ವಂದಿಸಿ, ಕೋಶಾಧಿಕಾರಿ ಡಾ|ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು

ಕ್ಲಬ್‌ನ ವಿಶೇಷ ಯೋಜನೆ…
ರೋಟರಿ ಸೆಂಟ್ರಲ್ ಕ್ಲಬ್ ಕಳೆದ ಹಲವಾರು ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆ ಗಳಿಸಿದೆ. ನಮ್ಮ ಯೋಜನೆಗಳು ರೋಗಿಗಳಿಗೆ, ಭಿನ್ನಚೇತನರಿಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ಪ್ರಜ್ಞಾ ಆಶ್ರಮಕ್ಕೆ ಸುಸಜ್ಜಿತ ಅಡುಗೆ ಕೋಣೆಯ ನಿರ್ಮಾಣ ರೋಟರಿ ಸೆಂಟ್ರಲ್‌ನ ಈ ವರ್ಷದ ವಿಶೇಷ ಯೋಜನೆಯಾಗಿದ್ದು ಮುಂದಿನ ದಿನದಲ್ಲಿ ಇಂತಹ ಅನೇಕ ಕೆಲಸ ಕಾರ್ಯಗಳು ರೋಟರಿ ಪುತ್ತೂರು ಸೆಂಟ್ರಲ್‌ನಿಂದ ನಡೆಯಲಿರುವುದು. ರಫೀಕ್ ದರ್ಬೆ, ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್

LEAVE A REPLY

Please enter your comment!
Please enter your name here