ಬಲ್ನಾಡು ಒಕ್ಕಲಿಗ ಗೌಡ ಸಂಘ, ಸ್ವಸಹಾಯ ಟ್ರಸ್ಟ್‌ನಿಂದ ಆಟಿಡೊಂಜಿ ದಿನ ಸಮಾರೋಪ

0

ಪುತ್ತೂರು: ಬಲ್ನಾಡು ಒಕ್ಕಲಿಗ ಗೌಡ ಸ್ವ-ಸಹಾಯ ಟ್ರಸ್ಟ್, ಪುತ್ತೂರು ಮಾದರಿ ಗ್ರಾಮ ಸಮಿತಿ ಬಲ್ನಾಡು, ಒಕ್ಕಲಿಗ ಗೌಡ ಸಂಘ ಬಲ್ನಾಡು ಗ್ರಾಮ ಸಮಿತಿ, ಯುವ ಒಕ್ಕಲಿಗ ಗೌಡ ಸೇವಾ ಸಂಘ, ಮಹಿಳಾ ಘಟಕ ಬಲ್ನಾಡು ಗ್ರಾಮ ಸಮಿತಿ ಮತ್ತು ಒಕ್ಕಲಿಗ ಗೌಡ ಸ್ವ-ಸಹಾಯ ಗುಂಪುಗಳ ಒಕ್ಕೂಟ ಬಲ್ನಾಡು ಇದರ ಸಹಯೋಗದಲ್ಲಿ ಜು.17ರಂದು ಬಲ್ನಾಡು ಶ್ರೀಭಟ್ಟಿ ವಿನಾಯಕ ಸಭಾಭವನದಲ್ಲಿ ನಡೆದ ಆಟಿಡೊಂಜಿ ದಿನ ಮತ್ತು ಮಾಹಿತಿ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಜೆ ನಡೆಯಿತು.

 

 

ಬಲ್ನಾಡು ಶ್ರೀಭಟ್ಟಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ, ಬಲ್ನಾಡು ಒಕ್ಕಲಿಗ ಗೌಡ ಗ್ರಾಮ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವೆಂಕಟ್ರಮಣ ಗೌಡ ಕಳುವಾಜೆ ಮಾತನಾಡಿ ಬಲ್ನಾಡು ಗ್ರಾಮದಲ್ಲಿರುವ ಕಟ್ಟೆಮನೆಯನ್ನು ನಾವೆಲ್ಲರೂ ಸೇರಿ ಮೇಲೆತ್ತುವ ಕೆಲಸ ಆಗಬೇಕು ಇದಕ್ಕೆ ಎಲ್ಲರ ಸಹಾಯವು ಅತ್ಯಗತ್ಯ ಕಟ್ಟೆಮನೆಗೆ ಬಹಳ ಪುರಾಣದ ಇತಿಹಾಸವಿದೆ. ಒಕ್ಕಲಿಗ ಸ್ವ-ಸಹಾಯ ಸಂಘಗಳ ಮೂಲಕ ಬಲ್ನಾಡು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿ ಇಲ್ಲಿ ಪ್ರತಿ ಶನಿವಾರ ಗೌಡ ಸಮುದಾಯದ ಮನೆಯಲ್ಲಿ ಭಜನೆ ಸೇವೆ ನಡೆಯುತ್ತಿದೆ. ಇದು ಬಲ್ನಾಡು ಗ್ರಾಮದ ಒಕ್ಕಲಿಗ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ಪುತ್ತೂರು ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ ಮಾತನಾಡಿ ನಮ್ಮ ಸಂಸ್ಕೃತಿ ನಮ್ಮ ಸಮುದಾಯ ನಮಗೆ ಹೆಮ್ಮ ತರುತ್ತದೆ ನಾನು ಗೌಡ ಸಮುದಾಯದಲ್ಲಿ ಹುಟ್ಟಿದಕ್ಕೆ ಧನ್ಯಳಾಗಿದ್ದೇನೆ. ನಮ್ಮ ಸಮುದಾಯವು ಬಹಳ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮುದಾಯವಾಗಿದೆ ಎಂಬುದಕ್ಕೆ ನನಗೆ ಬಹಳ ಸಂತೋಷವಾಗಿದೆ ನಾವು ಯಾವಾಗಲೂ ಏನು ಇಲ್ಲದವರನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕು. ಏನೂ ಇಲ್ಲದವರಿಗೆ ಇದ್ದವರು ಸಹಾಯ ಮಾಡಬೇಕು ಎಂದು ತಿಳಿಸಿದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಕಾರ್ಯದರ್ಶಿ ದಿವ್ಯ ಪ್ರಸಾದ್, ಮಾದರಿ ಗ್ರಾಮ ಸಮಿತಿಯ ಅಧ್ಯಕ್ಷನಾರಾಯಣ ಗೌಡ ಕುಕ್ಕುತಡ್ಡಿ, ಬಲ್ನಾಡು ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷೆ ಗೀತಾ ಒಳಗುಡ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಾವತಿ ಮುದಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಟಿ ತಿಂಗಳಲ್ಲಿ ಆಡುವ ಆಟ ಆದ ಚೆನ್ನೆಮನೆ ಆಟ, ಪುರುಷರಿಗೆ ಮತ್ತು ಮಹಿಳೆಯರಿಗೆ ಸಂಗೀತ ಕುರ್ಚಿ ಲಕ್ಕಿ ಗೇಮ್, ಅಂಗನವಾಡಿ ಮಕ್ಕಳಿಗೆ ಕಪ್ಪೆ ಜಿಗಿತಾ, ಕಾಳು ಹೆಕ್ಕುವ ಸ್ಪರ್ಧೆ, ೧ ರಿಂದ ೫ನೇ ತರಗತಿ ಮಕ್ಕಳಿಗೆ ಬಾಲ್ ಪಾಸ್, ಬಾಟ್ಲಿಗೆ ನೀರು ತುಂಬಿಸುವುದು ೬ರಿಂದ ೧೦ನೇ ತರಗತಿ ಮಕ್ಕಳಿಗೆ ಲಕ್ಕಿ ಗೇಮ್, ಸಂಗೀತ ಕುರ್ಚಿ ಹಾಗೂ ಮಹಿಳೆಯರಿಗೆ ಶೋಭನೆ ಹೇಳುವುದು, ತಿಂಡಿ-ತಿನಸು ಸ್ಪರ್ಧೆ ನೆರವೇರಿತು. ವಿನಾಯಕ ತಂಡ ಅನ್ನದ ವ್ಯವಸ್ಥೆ, ಗುರಿಕಾರ ತಂಡ ಸಾಂಬಾರು ವ್ಯವಸ್ಥೆ, ಕುಲದೇವತಾ ತಂಡ ಬೆಲ್ಲ ನೀರು ಮತ್ತು ವೀಳ್ಯದೆಲೆ ಅಡಿಕೆ, ಚಿಗುರು ತಂಡ ಪಾಯಸ ಮತ್ತು ಒಂದೆಲಗ ಚಟ್ನಿ, ಕಟ್ಟೆಮನೆ ಪಲ್ಯ, ಸಾಧನ ತಂಡ ಪತ್ರೊಡೆ, ಧನ್ಯಶ್ರೀ ತಂಡ ಹಲಸಿನ ಹಣ್ಣಿನ ಹಲ್ವಾ ಗೊಂಟು ತೆಂಗಿನಕಾಯಿ ಚಟ್ನಿ, ಉಳ್ಳಾಲ್ತಿ ತಂಡ ಪಲ್ಯ, ಅವನಿ ತಂಡ ನುಗ್ಗೆಕಾಯಿ ಸೊಪ್ಪು ಪಲ್ಯ, ವಿಟಮಿನ್ ಸೊಪ್ಪು ಪಲ್ಯ, ಸಮೃದ್ಧಿ ತಂಡ ಹುರುಳಿ ಚಟ್ನಿ, ಕೃತಿ ತಂಡ ಮಜ್ಜಿಗೆ ಉಪ್ಪು ಶುಂಠಿ,ವಿದ್ಯಾಲಕ್ಷ್ಮಿ ತಂಡ ರಾಗಿ ಮಾಲ್ಟ್, ವನದುರ್ಗ ತಂಡ ಟೊಮೆಟೊ ಸಾರು ವ್ಯವಸ್ಥೆ ಮಾಡಿದ್ದರು.

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ, ಬಲ್ನಾಡು ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ, ನಿರ್ದೇಶಕ ಸೀತಾರಾಮ ಗೌಡ ಕಲ್ಲಾಜೆ, ನಗರಸಭಾ ಸದಸ್ಯೆ ಪೂರ್ಣಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರೇರಕಿ ನಮಿತಾ ವರದಿ ಮಂಡಿಸಿದರು. ಪ್ರೇಮ ತಿಮ್ಮಪ್ಪಗೌಡ ವಂದಿಸಿದರು. ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here