ಮಜಲು ಕ್ಷೇತ್ರದಲ್ಲಿ ಹಗಲು ಕೋಲ, ಅಗೇಲು ಸೇವೆ

0

 

ಪುತ್ತೂರು:ಕಲಿಯುಗ ಕಲೆ,ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಜು.೧೭ರಂದು ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ, ಅಗೇಲು ಸೇವೆ ನಡೆಯಿತು.ನೂರಾರು ಭಕ್ತಾದಿಗಳು ಆಗಮಿಸಿದ್ದು ಮಧ್ಯಾಹ್ನ ಅನ್ನಪ್ರಸಾದ ವಿತರಣೆ ನಡೆಯಿತು. ಜು.೧೯ರಂದು ಮಧ್ಯಾಹ್ನ ಕ್ಷೇತ್ರದಲ್ಲಿ ಸ್ವಾಮಿ ಕೊರಗಜ್ಜ ದೈವದ ಮಾನೆಚ್ಚಿಲ್ ಸೇವೆ ಹಾಗೂ ಅಗೇಲು ಸೇವೆ ನಡೆಯಿತು.ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ಜು.೨೨ರಂದು ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವದ ಮಾನೆಚ್ಚಿಲ್ ಸೇವೆ ಹಾಗೂ ಅಗೇಲು ಸೇವೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here