ಮಹಾಲಿಂಗೇಶ್ವರ ದೇವಸ್ಥಾನದ ದೇವಿ ಗುಡಿಯಲ್ಲಿ ಆಟಿ ತಿಂಗಳ ವಿಶೇಷ ದುರ್ಗಾಪೂಜೆ – ಸೇವೆಗೆ ಅವಕಾಶ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿರುವ ದೇವಿ ಗುಡಿಯಲ್ಲಿ ಆಷಾಡ/ ಕರ್ಕಾಟಕ ಆಟಿ ತಿಂಗಳ ಪ್ರತೀ ಶುಕ್ರವಾರದಂದು ರಾತ್ರಿ ಗಂಟೆ 7.30ರಿಂದ ವಿಶೇಷ ದುರ್ಗಾಪೂಜೆ ನಡೆಯಲಿದೆ.

ಈಗಾಗಲೇ ಪ್ರತೀ ಶುಕ್ರವಾರ ದುರ್ಗಾ ಪೂಜೆ ಸೇವೆ ನಡೆಯುತ್ತಿದ್ದು, ಆಟಿ ತಿಂಗಳ ದುರ್ಗಾ ಪೂಜೆ ವಿಶೇಷತೆ ಇದೆ. ಜು. 22ರಂದು ರಾತ್ರಿ ಗಂಟೆ 7.30ಕ್ಕೆ ವಿಶೇಷ ದುರ್ಗಾಪೂಜೆ ನಡೆಯಲಿದ್ದು, ರಾತ್ರಿ ಪ್ರಸಾದ ಭೋಜನ ನಡೆಯಲಿದೆ. ಭಕ್ತರು ವಿಶೇಷ ದುರ್ಗಾಪೂಜೆ ಸೇವೆಯಲ್ಲಿ ಭಾಗವಹಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here