ಆಗಸ್ಟ್ 13 ರಿಂದ 15 ರವರೆಗೆ ಪ್ರತಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಜನತೆಗೆ ಪ್ರಧಾನಿ ಕರೆ

0
  •  ಸ್ವಾತಂತ್ರ್ಯದ ಅಮೃತ ಮಹೋತ್ಸವ
  • ಧ್ವಜದೊಂದಿಗಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ

ಪುತ್ತೂರು:ಆಗಸ್ಟ್ 13 ರಿಂದ 15ರವರೆಗೆ ಪ್ರತೀ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದಲ್ಲಿ ಧ್ವಜದೊಂದಿಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದ್ದಾರೆ.


ನಾವು ಆಜಾದಿ ಕಾ ಅಮೃತ್ ಮಹೋತ್ಸವ ಸಂಭ್ರಮದಲ್ಲಿದ್ದೇವೆ.`ನಾವು ಹರ್ ಘರ್ ತಿರಂಗ’ ಚಳುವಳಿ ಬಲಪಡಿಸೋಣ.ತ್ರಿವರ್ಣ ಧ್ವಜವನ್ನು ಹಾರಿಸೋಣ ಅಥವಾ ಮನೆಗಳಲ್ಲಿ ಆ.13 ರಿಂದ 15ರ ನಡುವೆ ಪ್ರದರ್ಶಿಸೋಣ.ಈ ಆಂದೋಲನ ರಾಷ್ಟ್ರಧ್ವಜದೊಂದಿಗೆ ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದಾರೆ.ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿದ್ಧತೆ ನಡೆಸಿರುವ ಕೇಂದ್ರ ಸರ್ಕಾರ, ದೇಶಾದ್ಯಂತ 20 ಕೋಟಿ ಮನೆಗಳ ಮೇಲೆ ಧ್ವಜ ರಾರಾಜಿಸುವಂತೆ ಮಾಡಲು ಸಿದ್ಧತೆ ನಡೆಸಿದೆ.

ಜಿಲ್ಲೆಯಲ್ಲಿ ಭರದಿಂದ ಸಾಗಿದೆ ರಾಷ್ಟ್ರಧ್ವಜ ಸಿದ್ದ ಪಡಿಸುವ ಕಾರ್ಯ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆ.11ರಿಂದ 17ರವರೆಗೆ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದೇಶದ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ರಾಷ್ಟ್ರಧ್ವಜ ಹೊಲಿದು ಸಿದ್ದಪಡಿಸಿ ನೀಡುವಂತೆ ಜಿಲ್ಲೆಯ ಸಂಜೀವಿನಿ ಗ್ರಾಮ ಪಂಚಾಯತ್ ಮತ್ತು ಅದರ ಒಕ್ಕೂಟಗಳಿಗೆ ಆದೇಶ ನೀಡಿದೆ.

ಈ ನಿಟ್ಟಿನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಸಿದ್ಧಪಡಿಸಲು ಅನುಕೂಲವಾಗುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ರುಡ್ ಸೆಟ್‌ನಲ್ಲಿ ಮಹಿಳಾ ಸ್ವ ಸಹಾಯ ಸಂಘದ ೬೨ ಸದಸ್ಯರಿಗೆ ಧ್ವಜ ಸಂಹಿತೆಯನ್ನು ತಿಳಿಸಿಕೊಟ್ಟು,ರಾಷ್ಟ್ರಧ್ವಜವನ್ನು ಹೊಲಿಯುವ ತರಬೇತಿ ಕಾರ್ಯಕ್ರಮವನ್ನು ಜು.22ರಂದು ಹಮ್ಮಿಕೊಳ್ಳಲಾಗಿತ್ತು.

ಹೊಲಿಗೆಯನ್ನು ತಿಳಿದಿರುವ 62 ಮಹಿಳೆಯರಿಗೆ ಧ್ವಜ ಸಿದ್ದಪಡಿಸಲು ಉಡುಪಿಯಿಂದ ಸಂಪನ್ಮೂಲ ವ್ಯಕ್ತಿಯೊಬ್ಬರನ್ನು ನಿಯೋಜಿಸಲಾಗಿತ್ತು.ಅವರು ಮೊದಲಿಗೆ ಧ್ವಜ ಸಂಹಿತೆಯನ್ನು ತಿಳಿಸಿ, ಧ್ವಜವನ್ನು ಸಿದ್ಧಪಡಿಸುವ ತರಬೇತಿ ನೀಡಿದರು.ರಾಷ್ಟ್ರಧ್ವಜ ಸಿದ್ಧಪಡಿಸಲು ಅಗತ್ಯವಿರುವ ಸಾಮಗ್ರಿಗಳನ್ನು ಜಿಲ್ಲೆಯಿಂದಲೇ ಖರೀದಿಸಿ ನೀಡಲಾಗಿತ್ತು. ಧ್ವಜವನ್ನು ಹೊಲಿದ ನಂತರ ಸ್ಕ್ರಿನ್ ಪ್ರಿಂಟ್ ಮೂಲಕ ಮಧ್ಯ ಭಾಗದಲ್ಲಿ ಅಶೋಕ ಚಕ್ರವನ್ನು ಮುದ್ರಿಸಲಾಗುವುದು.ಇಲ್ಲಿ ತರಬೇತಿ ಪಡೆದ ಮಹಿಳೆಯರು, ವಿವಿಧ ಗ್ರಾಮ ಪಂಚಾಯತ್‌ಗಳು ಹಾಗೂ ಮನೆಗಳಲ್ಲಿಯೂ ಧ್ವಜಗಳನ್ನು ಹೊಲಿದು, ಸಿದ್ಧಪಡಿಸಿ ಸಂಜೀವಿನಿ ಒಕ್ಕೂಟಗಳ ಮೂಲಕ ಅವುಗಳನ್ನು ಮಾರಾಟ ಕೇಂದ್ರಕ್ಕೆ ತಲುಪಿಸಲಿದ್ದಾರೆ.ಸುಳ್ಯ ತಾಲೂಕಿನ ಆರಂತೋಡು ಗ್ರಾಮ ಪಂಚಾಯಿತ್‌ನಲ್ಲೇ ಈಗಾಗಲೇ 1,500 ಧ್ವಜ ಸಿದ್ಧಪಡಿಸಲು ಆದೇಶ ನೀಡಲಾಗಿದ್ದು ಅದರಲ್ಲಿ 150ಈಗಾಗಲೇ ಸಿದ್ಧಗೊಂಡಿದೆ,ಸುಳ್ಯದ ಜಾಲ್ಸೂರು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲೂ ಕೂಡ ಧ್ವಜ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ.

ಧ್ವಜಸಂಹಿತೆಗೆ ತಿದ್ದುಪಡಿ ಹಗಲು-ರಾತ್ರಿ ಹಾರಿಸಲು ಅವಕಾಶ

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿದ್ದು, ತ್ರಿವರ್ಣ ಧ್ವಜವನ್ನು ಹಗಲು-ರಾತ್ರಿ ಹಾರಿಸಲು ಅವಕಾಶ ನೀಡಿದೆ.

‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಸರ್ಕಾರವು ಆಗಸ್ಟ್ 13  ರಿಂದ 15ರವರೆಗೆ ‘ಹರ್ ಘರ್ ತಿರಂಗ’ (ಪ್ರತಿ ಮನೆಯಲ್ಲೂ ಧ್ವಜಾರೋಹಣ) ಪ್ರಾರಂಭಿಸಲಿರುವುದರಿಂದ ಮಹತ್ವದ ತೀರ್ಮಾನ ಕೈಗೊಂಡಿದ್ದು, ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಹಾರಿಸಲು ಅವಕಾಶ ಕಲ್ಪಿಸಲಾಗಿದೆ. ಖಾದಿ, ಪಾಲಿಸ್ಟರ್‌ನ ಜೊತೆಗೆ ಯಂತ್ರದಿಂದ ತಯಾರಿಸಿದ ಧ್ವಜಗಳ ಬಳಕೆಗೂ ಅವಕಾಶ ನೀಡುವಂತೆ ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಗಿದೆ.

ಈ ಕುರಿತಂತೆ ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಭಾರತೀಯ ರಾಷ್ಟ್ರಧ್ವಜದ ಪ್ರದರ್ಶನ, ಹಾರಾಟ ಮತ್ತು ಬಳಕೆಯನ್ನು ಭಾರತದ ಧ್ವಜ ಸಂಹಿತೆ, 2002 ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆ, 1971ರ ಮೂಲಕ ನಿಯಂತ್ರಿಸಲಾಗುತ್ತದೆ. ಭಾರತದ ಧ್ವಜ ಸಂಹಿತೆ, 2002 ಅನ್ನು ಜುಲೈ 20, 2022ರ ಆದೇಶದ ಮೂಲಕ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ ಮತ್ತು ಭಾರತದ ಧ್ವಜ ಸಂಹಿತೆ, 2002ರ ಭಾಗ-II ನ ಪ್ಯಾರಾಗ್ರಾಫ್ 2.2 ರ ಷರತ್ತು () ಅನ್ನು ಈಗ ಈ ಕೆಳಗಿನಂತೆ ಓದಲಾಗುತ್ತದೆ:- ( ) ಧ್ವಜವನ್ನು ತೆರೆದ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ ಅಥವಾ ಸಾರ್ವಜನಿಕ ಸದಸ್ಯರ ಮನೆಯ ಮೇಲೆ ಪ್ರದರ್ಶಿಸಲಾಗುತ್ತದೆ, ಅದನ್ನು ಹಗಲು ರಾತ್ರಿ ಹಾರಿಸಬಹುದು ಎಂದು ಹೇಳಿದ್ದಾರೆ.

ಈ ಹಿಂದೆ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಮಾತ್ರ ತ್ರಿವರ್ಣ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಯಂತ್ರದಿಂದ ತಯಾರಿಸಿದ ಮತ್ತು ಪಾಲಿಸ್ಟರ್ ಧ್ವಜಗಳನ್ನು ಬಳಸಲು ಅನುಮತಿ ಇರಲಿಲ್ಲ. ಪ್ರಗತಿಪರ ಸ್ವತಂತ್ರ ಭಾರತದ 75ವರ್ಷಗಳ ನೆನಪಿಗಾಗಿ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಆಗಸ್ಟ್ 13 ರಿಂದ 15  ರವರೆಗೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ನಾಗರಿಕರನ್ನು ಉತ್ತೇಜಿಸಲು ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

2021೨೦೨೧ ಮತ್ತು ಜುಲೈ 20, 2022ರಂದು ಮಾಡಿದ ಬದಲಾವಣೆಗಳು ಮತ್ತು ರಾಷ್ಟ್ರಧ್ವಜದ ಬಳಕೆ ಮತ್ತು ಪ್ರದರ್ಶನದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಊಅಕಿ ಗಳು) ಸೇರಿದಂತೆ ಧ್ವಜ ಸಂಹಿತೆಯ ಪ್ರಮುಖ ಲಕ್ಷಣಗಳನ್ನು ಗೃಹ ಕಾರ್ಯದರ್ಶಿ ತಮ್ಮ ಪತ್ರದೊಂದಿಗೆ ಲಗತ್ತಿಸಿದ್ದಾರೆ. ನಿಮ್ಮ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ವಿವಿಧ ಸಂಸ್ಥೆಗಳು, ಪಿಎಸ್‌ಯುಗಳಲ್ಲಿ ಇವುಗಳನ್ನು ವ್ಯಾಪಕವಾಗಿ ಹರಡಿರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮನ್ನು ವಿನಂತಿಸಲಾಗಿದೆ ಎಂದು ಗೃಹ ಕಾರ್ಯದರ್ಶಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here