ನಿಡ್ಪಳ್ಳಿ ದೇವಾಲಯದ ಎದುರು ಭಕ್ತಾದಿಗಳಿಂದ ಶ್ರಮದಾನದ ಮೂಲಕ ಗದ್ದೆ ತಯಾರಿ

0

ನಿಡ್ಪಳ್ಳಿ: ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಎದುರು ಇರುವ ಜಾಗದಲ್ಲಿ ಭತ್ತ ನಾಟಿ ಮಾಡುವ ಉದ್ದೇಶದಿಂದ ಗದ್ದೆ ತಯಾರಿ ಮಾಡುವ ಕೆಲಸ ಭರದಿಂದ ಸಾಗುತ್ತಿದೆ.

ತುಳುನಾಡಿನ ಅನಾದಿ ಕಾಲದ ಆಚಾರ ಮತ್ತು ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಊರ ಭಕ್ತಾದಿಗಳು ಸೇರಿ ಖಾಲಿ ಇರುವ ದೇವಸ್ಥಾನದ ಜಾಗದಲ್ಲಿ ಶ್ರಮದಾನದ ಮೂಲಕ ಗದ್ದೆ ರಚನೆ ಕೆಲಸ ನಡೆಯುತ್ತಿದ್ದು ಭಕ್ತಾದಿಗಳು ಬಹಳ ಉತ್ಸಾಹದಿಂದ ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
       
  ಕದಿರು ತುಂಬಿಸಲು ನಮ್ಮ ಜಾಗದಲ್ಲಿಯೇ ತಯಾರಿ- ಪ್ರತಿ ವರ್ಷ ದೇವಸ್ಥಾನದಲ್ಲಿ ಕದಿರು ತುಂಬಿಸಲು ಬೇರೆ ಗದ್ದೆಯಿಂದ ಕದಿರು ತರ ಬೇಕಾಗಿದೆ.ಅದಕ್ಕಾಗಿ ನಮ್ಮ ಜಾಗದಲ್ಲಿ  ಗದ್ದೆ ಮಾಡಿ ಭತ್ತ ಬೆಳೆಸಿ ಕದಿರು ತಯಾರಿ ಮಾಡಿ ದೇವಸ್ಥಾನ ಮತ್ತು  ದೈವಸ್ಥಾನದಲ್ಲಿ ಕದಿರು ತುಂಬಿಸುವ ಮಹತ್ವಾಕಾಂಕ್ಷೆಯಿಂದ ಗದ್ದೆ ತಯಾರಿ ನಡೆಸಲಾಗಿದೆ. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಊರವರು ಬಹಳ ಉತ್ಸಾಹದಿಂದ ಸೇರಿ ಇದಕ್ಕೆ ಕೈ ಜೋಡಿಸುತ್ತಿರುವುದು ಸಂತೋಷವಾಗುತ್ತಿದೆ. ಇನ್ನು ಮುಂದೆಯೂ ಊರವರ ಸಹಕಾರ ಬಯಸುತ್ತಿದ್ದೇವೆ. –ನಾಗೇಶ ಗೌಡ ಪುಳಿತ್ತಡಿ, ಅಧ್ಯಕ್ಷರು, ದೇವಸ್ಥಾನದ ಆಡಳಿತ ಮಂಡಳಿ.

LEAVE A REPLY

Please enter your comment!
Please enter your name here