ನೃತ್ಯಾಂತರಂಗ 92ರಲ್ಲಿ ವಿಭಾಶ್ರೀ ವಿ ಗೌಡರವರಿಂದ ಭರತನಾಟ್ಯ

0

ಪುತ್ತೂರು: ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್‌ರವರ ಶಿಷ್ಯೆ ಕು.ವಿಭಾಶ್ರೀ ವಿ. ಗೌಡ ಅವರಿಂದ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನೃತ್ಯಾಂತರಂಗ 92ರಲ್ಲಿ ಭರತನಾಟ್ಯ ನೃತ್ಯರೂಪಕದ ಪ್ರಥಮ ಪ್ರಯೋಗ ನಡೆಯಿತು.

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯವರು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಲೋಕೇಶ್ ಬನ್ನೂರು ಅಭ್ಯಾಗತರಾಗಿ ಆಗಮಿಸಿ ಶುಭ ಕೋರಿದರು. ಕು.ಪ್ರಣಮ್ಯ ಕಾರ್ಯಕ್ರಮ ನಿರ್ವಹಿಸಿದರು. ಆದಿತ್ಯ ಕೃಷ್ಣ ಪ್ರಾರ್ಥಿಸಿದರು. ಭರತನಾಟ್ಯದಲ್ಲಿ ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಗೀತೇಶ್ ನೀಲೇಶ್ವರ ಮತ್ತು ಕೊಳಲಿನಲ್ಲಿ ರಾಜಗೋಪಾಲನ್ ಕಾಞಂಗಾಡು ಸಹಕರಿಸಿದ್ದರು. ವಿದ್ವಾನ್ ಗಿರೀಶ್ ಕುಮಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here