ಕೇಪು: ನೇಣುಬಿಗಿದು ಮಹಿಳೆ ಅತ್ಮಹತ್ಯೆ

0

ವಿಟ್ಲ: ಮಹಿಳೆಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ.2ರಂದು ಬಂಟ್ವಾಳ ತಾಲೂಕು ಕೇಪು ಗ್ರಾಮದ ಮಣಿಮುಂಡ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೇಪು ಗ್ರಾಮದ ಮಣಿಮುಂಡ ನಿವಾಸಿ ರಾಮಚಂದ್ರ ನಾಯ್ಕ್ ರವರ ಪತ್ನಿ ಜಯಲಕ್ಷ್ಮಿ(39ವ.) ಆತ್ಮಹತ್ಯೆ ಮಾಡಿಕೊಂಡವರು.

‘ನನ್ನ ತಾಯಿ ಉಬ್ಬಸ ಖಾಯಿಲೆಯಿಂದ ಮತ್ತು ಕೆಮ್ಮಿನಿಂದ ಹಲವು ಸಮಯದಿಂದ ಬಳಲುತ್ತಿದ್ದರು. ಹಲವಾರು ಕಡೆಗಳಿಂದ ಮದ್ದು ಮಾಡಿದರು ಕೂಡಾ ಅವರು ಗುಣಮುಖರಾಗದೆ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆ ಪಕ್ಕದ ಕಾಡಿನಲ್ಲಿ ಸೀರೆಯಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಪುತ್ರ ವಿಜೇತ್‌ರವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here