ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘ ಡಿ.ಸಿ.ಸಿ ಬ್ಯಾಂಕ್ ಪ್ರಶಸ್ತಿಗೆ ಆಯ್ಕೆ

0

  • ಆ.5ರಂದು ಪ್ರಶಸ್ತಿ ಪ್ರದಾನ

ಕುಂಬ್ರ : ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಿಶಿಷ್ಟ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿಗೆ ಪ್ರಥಮ ಬಾರಿಗೆ ಆಯ್ಕೆಯಾಗಿದೆ. ಆ.5 ರಂದು ನಡೆಯುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2021-22ನೇ ಸಾಲಿನ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಪುತ್ತೂರು ತಾಲೂಕಿನಲ್ಲಿ ಒಟ್ಟು 5 ಮೂರ್ತೆದಾರರ ಸೇವಾ ಸಹಕಾರಿ ಸಂಘಗಳು ವ್ಯವಹರಿಸುತ್ತಿದ್ದು. ಅವುಗಳಲ್ಲಿ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಒಂದು ಕರ್ನಾಟಕ ಸರಕಾರ 1991 ಲ್ಲಿ ಆದೇಶ ನೀಡಿ ಮೂರುವವನೇ ಮಾರುವವ ಎಂಬ ಕಾನೂನನ್ನು ಜಾರಿಗೆ ತಂದು, ಅದರಂತೆ ಪುತ್ತೂರು ತಾಲೂಕಿನ ಒಳಮೊಗ್ರು, ಗ್ರಾಮದಿಂದ ಪಾಣಾಜೆ ಗ್ರಾಮದವರೆಗೆ 14  ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಕುಂಬ್ರದಲ್ಲಿ 1991ರಲ್ಲಿ ಸ್ಥಾಪನೆಗೊಂಡು 2009ರಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಿತು. ಈಗ ಅಕ್ಷಯ ಆರ್ಕೇಡ್ ಕಟ್ಟಡದಲ್ಲಿ ಆದುನಿಕರಣಗೊಂಡ ಕಛೇರಿಯು ಸಂಪೂರ್ಣ ಕಂಪ್ಯೂಟರ್‌ಕರಣಗೊಂಡು ಕಾರ್ಯನಿರ್ವಹಿಸುವುದಿದ್ದು. ಸಂಘವು ಆಡಿಟ್ ವರ್ಗೀಕರಣದಲ್ಲಿ ಎ ತರಗತಿ ಸ್ಥಾನವನ್ನು ಹೊಂದಿದೆ. ಎಂದು ಸಂಘದ ಅಧ್ಯಕ್ಷರಾದ ಆರ್.ಸಿ ನಾರಾಯಣ ತಿಳಿಸಿದ್ದಾರೆ.

ಸಂಘದ ಕಾರ್ಯವ್ಯಾಪ್ತಿ: ಸಂಘವು ಒಳಮೊಗ್ರು, ಅರಿಯಡ್ಕ, ಕೆದಂಬಾಡಿ, ಕೆಯ್ಯೂರು, ಪಾಲ್ತಾಡಿ, ಕೊಳ್ತಿಗೆ, ಮಾಡ್ನೂರು, ನೆಟ್ಟಣಿಗೆಮುಡ್ನೂರು, ಪಡುವನ್ನೂರು,ಬಡಗನ್ನೂರು, ನಿಡ್ಪಳ್ಳಿ, ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ಒಟ್ಟು 14 ಗ್ರಾಮ ವ್ಯಾಪ್ತಿಯನ್ನು ಹೊಂದಿದೆ.

ಸೌಲಭ್ಯಗಳು : ಗ್ರಾಮಾಂತರ ಪ್ರದೇಶದ ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಲಾಕರ್ ವ್ಯವಸ್ಥೆ, ಇ-ಸ್ಟ್ಯಾಂಪ್ ಪೇಪರ್ ಸೌಲಭ್ಯ ಲಭ್ಯವಿದೆ. ಆರ್.ಟಿ.ಸಿ ತೆಗೆದು ಕೊಡಲಾಗುವುದು. ಪಾನ್ ಕಾರ್ಡ್ ವ್ಯವಸ್ಥೆ ಮಾಡಿಕೊಡಲಾಗುವುದು. ಎಲ್ಲಾ ತರದ ಸಾಲ ಸೌಲಭ್ಯ ಇದ್ದು, ಉತ್ತಮ ಬಡ್ಡಿ ದರದಲ್ಲಿ ಠೇವಣಿಯನ್ನು ಸಂಗ್ರಹಿಸಲಾಗುವುದು.

ಆಡಳಿತ ಮಂಡಳಿ : ಸಂಘದ ಅಭಿವೃದ್ಧಿಗಾಗಿ 11  ಮಂದಿ ಚುನಾಯಿತ ಆಡಳಿತ ಮಂಡಳಿ ಇದೆ. ಅಧ್ಯಕ್ಷರಾಗಿ ಆರ್.ಸಿ ನಾರಾಯಣ ಉಪಾಧಕ್ಷರಾಗಿ ಕೆ. ನಾರಾಯಣ ಪೂಜಾರಿ ಕುರಿಕ್ಕಾರ, ನಿರ್ದೇಶಕರಾಗಿ ನಿತೀಶ್ ಕುಮಾರ್ ಶಾಂತಿವನ, ವಸಂತ ಪೂಜಾರಿ ಬಂಬಿಲ, ವಿಶ್ವನಾಥ ಪೂಜಾರಿ ಕೆಂಗುಡೇಲು, ಕೊರಗಪ್ಪ ಪೂಜಾರಿ ಕೆರೆಮಾರು, ವಿಜಯ ಪೂಜಾರಿ ಆನಡ್ಕ, ರಾಮಣ್ಣ ಪೂಜಾರಿ ಕರ್ನೂರು, ರಾಜೇಶ್.ಪಿ , ತ್ರಿವೇಣಿ ಪ್ರವೀಣ್ ಪಲ್ಲತ್ತಾರು ಗಿರಿಜ ಧನಂಜಯ ಪಟ್ಲ ಇದ್ದು. ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಚಂದ್ರಕಾಂತ ಶಾಂತಿವನ ಮತ್ತು ಸಿಬ್ಬಂಧಿ ವರ್ಗ ಸಂಘದ ಶ್ರೇಯೋಭಿವೃಧಿಗಾಗಿ ಕಾರಣರಾಗಿರುತ್ತಾರೆ. ಎಂದು ಸಂಘದ ಅಧ್ಯಕ್ಷರಾದ ಆರ್.ಸಿ ನಾರಾಯಣ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here