ಅರಿಯಡ್ಕ: ಗ್ರಾಮ ಚದುರಂಗ ಆಟ ಆಡೋಣ ಕಾರ್ಯಕ್ರಮ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸಮಾಜಕಾರ್ಯ ವಿಭಾಗ ಮತ್ತು ಅರಿಯಡ್ಕ ಗ್ರಾಮ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ “ಓದುವ ಬೆಳಕು” ಕಾರ್ಯಕ್ರಮದ ಅಂಗವಾಗಿ “ಗ್ರಾಮ ಚದುರಂಗ” ಆಟ ಆಡೋಣ ಕಾರ್ಯಕ್ರಮ ಅರಿಯಡ್ಕ ಪಂಚಾಯತ್ ಗ್ರಂಥಾಲಯದಲ್ಲಿ ಆ.೦೪ ರಂದು ನಡೆಯತು. ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಮಣ್ಯಂರವರು ಉದ್ಘಾಟಿಸಿ ಸಭಾ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿ ಆಗಮಿಸಿದ್ದ ಪಾಪೆಮಜಲು ಪ್ರೌಢಶಾಲೆಯ ಗಣಿತ ಶಿಕ್ಷಕರಾದ ಹರಿಪ್ರಸಾದ್‌ರವರು ಚದುರಂಗ ಆಟದ ಮಹತ್ವವನ್ನು ತಿಳಿಸಿದರು. ಚದುರಂಗ ಸ್ಪರ್ಧೆಯಲ್ಲಿ ಪಂಚಾಯತ್ ವ್ಯಾಪ್ತಿಯ ಶಾಲೆಗಳಿಂದ ೮ ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೂರು ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸದಸ್ಯ ಲೋಕೇಶ ಚಾಕೋಟೆಯವರು ಸಂದರ್ಭೋಚಿತವಾಗಿ ಮಾತನಾಡಿದರು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಪ್ರೋತ್ಸಾಹಕ ಬಹುಮಾನವನ್ನು ಪಂಚಾಯತ್ ಸದಸ್ಯೆ ಮೀನಾಕ್ಷಿ ಹಾಗೂ ಗ್ರಂಥಾಲಯದ ಮೇಲ್ವಿಚಾರಕಿ ಲಾವಣ್ಯ ವಿತರಿಸಿದರು. ಮಿಥನ್.ಎಸ್ ರೈ ಅವರು ಪ್ರಥಮ ಸ್ಥಾನ ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

 

ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ, ಅಭಿವೃದ್ಧಿ ಅಧಿಕಾರಿ ಪದ್ಮ ಕುಮಾರಿ, ಕಾರ್ಯದರ್ಶಿ ಶಿವರಾಮ ಮೂಲ್ಯ, ಮತ್ತು ಸಿಬ್ಬಂದಿಗಳು, ಸ್ಥಳೀಯ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ರಶ್ಮಿತಾ ರೈ. ಎಸ್ ಸ್ವಾಗತಿಸಿ, ಸಿತಾರ ಶೆರಿನ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ ಟಿ.ಕೆ ವಂದಿಸಿದರು.

LEAVE A REPLY

Please enter your comment!
Please enter your name here