ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಕಾರ್ಯದರ್ಶಿಯವರ ವಂಚನೆಯ ವಿರುದ್ದ ಜನಾರ್ಧನ ಬೆಳ್ಚಾಡರವರಿಂದ ಉಪವಾಸ ಸತ್ಯಾಗ್ರಹ

0

ಪುತ್ತೂರು : ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆದ ಕಾಮಗಾರಿ ಕೆಲಸಗಳ ಬಾಕಿ ಮೊತ್ತ ರೂ.71,250 ನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕೆರೆಮನೆ ಮತ್ತು ಕಾರ್ಯದರ್ಶಿ ಜನಾರ್ದನ ಜೋಯಿಸರ ವಂಚನೆಯ ವಿರುದ್ಧ ಕಾಮಗಾರಿ ನಿರ್ವಹಿಸಿದ ಅಳಿಕೆ ನಿವಾಸಿ ಜನಾರ್ಧನ ಬೆಳ್ಚಾಡರವರು ದೇವಳದ ವಠಾರದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ನರಿಮೊಗರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಸಂದರ್ಭದಲ್ಲಿ ಕಲ್ಲಿನ ಕೆಲಸಗಳನ್ನು ನಾನು ಮಾಡಿದ್ದು ಸದ್ರಿ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡರ ನಿರ್ದೇಶನದಂತೆ ದೇವಸ್ಥಾನದ ಸಂಪೂರ್ಣ ಕೆಲಸ ಕಾರ್ಯವನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸಿರುತ್ತೇನೆ. ಕಾಮಗಾರಿ ನಿರ್ವಹಿಸಿದ ಬಗ್ಗೆ ರೂ.71250.00 ಬಾಕಿ ಉಳಿಸಿದ್ದು ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ದೈವಜ್ಞರು, ತಂತ್ರಿಗಳು, ಊರಿನ ಭಕ್ತರ ಉಪಸ್ಥಿತಿಯಲ್ಲಿ ತಕ್ಷಣ ನೀಡುತ್ತೇನೆಂದು ಒಪ್ಪಿಕೊಂಡಿದ್ದು ಈ ತನಕ ನನಗೆ ಹಣ ನೀಡಿರುವುದಿಲ್ಲ. ಹಲವಾರು ಬಾರಿ ಪರಿಪರಿಯಾಗಿ ವಿನಂತಿಸಿದರೂ ಲೋಕಪ್ಪ ಗೌಡ ಮತ್ತು ಜನಾರ್ಧನ ಜೋಯಿಸರು ಉಡಾಫೆ ಉತ್ತರ ನೀಡುತ್ತಿದ್ದು ಇದರಿಂದ ಬೇಸತ್ತು ಆ.11ರಂದು ದೇವಾಲಯದ ವಠಾರದಲ್ಲಿ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೇನೆ ಇಲಾಖೆಯವರು ಮತ್ತು ಊರಿನ ಭಕ್ತಾದಿಗಳು ನ್ಯಾಯ ಒದಗಿಸಿ ಕೊಡಬೇಕೆಂದು ಜನಾರ್ಧನ ಬೆಳ್ಚಾಡರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here