ಈ ಬಾರಿಯ ಗಣೇಶ ಹಬ್ಬಕ್ಕೆ ಪ್ರವೀಣ್ ವರ್ಣಕುಟೀರರವರ ಕೈಚಳಕದಿಂದ ಪಿವಿಸಿ ಪೈಪ್‌ಗಳಿಂದ ಮೂಡಿದ ಪಂಚಭೂತಗಳ ಗಣಪತಿ ಸಿದ್ಧತೆ

0

ಪುತ್ತೂರು : ಗಣೇಶ ಹಬ್ಬ ಬಂತೆಂದರೆ ಎಲ್ಲರಿಗೂ ಸಡಗರ. ಕಲಾವಿದರಂತೂ ಬೇರೆ ಬೇರೆ ವಿಧದಲ್ಲಿ ಗಣಪತಿ ಮೂರ್ತಿ ಮಾಡಿ ತಮ್ಮ ಕೈಚಳಕ ಪ್ರದರ್ಶಿಸುತ್ತಾರೆ. ಕಳೆದ ಹಲವಾರು ವರ್ಷಗಳಿಂದ ಪ್ರಕೃತಿಗೆ ಹಾನಿಯನ್ನು ಉಂಟು ಮಾಡದ ವಸ್ತುಗಳಿಂದ ನಾನಾ ರೀತಿಯಲ್ಲಿ ಗಣೇಶನ ಮೂರ್ತಿಯನ್ನು ರಚಿಸುತ್ತಿರುವ ಕಲ್ಲಾರೆಯಲ್ಲಿರುವ ಪ್ರವೀಣ್ ವರ್ಣಕುಟೀರರವರು ನೀರಿನ ಪೈಪ್, ವಯರಿಂಗ್ ಪೈಪ್(ಪಿವಿಸಿ ಪೈಪ್)ಗಳ ತುಂಡುಗಳನ್ನು ಬಳಸಿಕೊಂಡು ಪಂಚಭೂತಗಳ ಗಣಪತಿಯ ಮೂರ್ತಿಯನ್ನು ರಚನೆ ಮಾಡುತ್ತಿದ್ದಾರೆ.

ಪ್ರಕೃತಿಗೆ ಯಾವುದೇ ಹಾನಿಯನ್ನು ಮಾಡದ ವಸ್ತುಗಳಿಂದ ನಾನಾ ರೀತಿಯ ಗಣಪನ ವಿಗ್ರಹ ಮಾಡುತ್ತಾ ಬಂದಿರುವ ಇವರು ತನ್ನ 9ನೇ ತರಗತಿಯಲ್ಲೇ ಒಂದು ಅಕ್ಕಿ ಕಾಳಿನಲ್ಲಿ ಕೆತ್ತನೆ ಮಾಡಿದ ಗಣಪನೇ ಇವರಿಗೆ ಮುಂದೆ ಸ್ಪೂರ್ತಿಯಾಗಿತ್ತು. ಪ್ರಸ್ತುತ ಕಲ್ಲಾರೆ ಕಾವೇರಿ ಕಾಂಪ್ಲೆಕ್ಸ್‌ನಲ್ಲಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಇವರ ಒಂದು ಸಾಸಿವೆ ಕಾಳಿನಲ್ಲಿ ರೇಖಾ ಚಿತ್ರ, ಬಿದಿರಿನಲ್ಲಿ ಮಾಡಿದ ಗಣಪ, ಪ್ರೇಮ್ ಒಯಸೀಸ್ ಬ್ರಿಗ್ಸ್, ಡೀಪ್ ಶೀಟ್ ಒಂದು ಪೆನ್ಸಿಲ್ ಮೊನೆಯ ಗಣಪನ ಕೆತ್ತನೆ ಶಿಲ್ಪ, ಮಣ್ಣಿನಿಂದ ಮಾಡಿದ ಪುಟ್ಟ ಗಣಪ, ಪೆನ್ನಿನ ರೀಫಿಲ್‌ನಲ್ಲಿ, ಐಸ್‌ಕ್ಯಾಂಡಿ ಕಡ್ಡಿಯಲ್ಲಿ, ಬೆಂಕಿ ಕಡ್ಡಿಯಲ್ಲಿ ಮಾಡಿದ ಗಣಪ, ಎಲೆಕ್ಟ್ರಾನಿಕ್ ಬಿಡಿಭಾಗಗಳಲ್ಲಿ ಸಣ್ಣ ಸಣ್ಣ ಗಣಪ, ಮೋಲ್ಡಿಟ್ ಎಂಬ ವಸ್ತುವಿನಿಂದ ಮೂಡಿದ ಗಣಪತಿ ಮೂರ್ತಿಗಳು ಪ್ರಸಿದ್ದಿ ಪಡೆದಿದ್ದು, ಇದೀಗ ನೀರಿನ ಪೈಪ್ ಮತ್ತು ವಯರಿಂಗ್ ಪೈಪ್‌ಗಳ ತುಂಡುಗಳನ್ನು ಬಳಸಿಕೊಂಡು ಪಂಚ ಭೂತಗಳನ್ನು ತೋರಿಸುವ ಐದು ಗಣಪತಿ ಮೂರ್ತಿಯನ್ನು ತಯಾರಿಸುತ್ತಿದ್ದಾರೆ. ಇದೀಗ ಗಣಪತಿ ಮೂರ್ತಿಯ ಅಂತಿಮ ಸಿದ್ಧತೆ ನಡೆಯುತ್ತಿದೆ. ವರ್ಣಕುಟೀರದಲ್ಲಿ ಮಕ್ಕಳಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮತ್ತು ಮಕ್ಕಳಿಗೆ ಕ್ರಾಫ್ಟ್‌ ಗಳನ್ನು ಕಳೆದ 20 ವರ್ಷಗಳಿಂದ ಹೇಳಿಕೊಡುತ್ತಾ ಬಂದಿದ್ದು, ಈ ಸಂಸ್ಥೆಯಲ್ಲಿ ಹಲವಾರು ವಿದ್ಯಾರ್ಥಿಗಳು ಚಿತ್ರಕಲಾ, ಕ್ಲೇಮೊಡೆಲಿಂಗ್, ಸಂಗೀತ, ಕೀ ಬೋರ್ಡ್ ಶಿಕ್ಷಣ ಪಡೆಯುತ್ತಿದ್ದಾರೆ.

27, 28ಕ್ಕೆ ಪ್ರದರ್ಶನ

ಪ್ರತಿ ವರ್ಷ ರಚಿಸಿರುವ ವಿವಿಧ ಗಣಪತಿ ಮತ್ತು ಈ ವರ್ಷದ ಗಣಪತಿ ಮೂರ್ತಿ ಸಹಿತ ಹಲವು ಕಲಾ ರಚನೆಗಳ ಪ್ರದರ್ಶನ ಆ.27 ಮತ್ತು 28ರಂದು ಕಲ್ಲಾರೆ ವರ್ಣಕುಟೀರದಲ್ಲಿ ನಡೆಯಲಿದೆ. ಸಾರ್ವಜನಿಕರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು ಎಂದು ವರ್ಣಕುಟೀರದ ಪ್ರವೀಣ್ ವರ್ಣಕುಟೀರ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here