ಆ.21 : ಗ್ರಾಮ ಮಟ್ಟದಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಜೋಡಣೆ ಅಭಿಯಾನ

0

ಪುತ್ತೂರು : ಪುತ್ತೂರು ತಾಲೂಕಿನ 206 ವಿಧಾನಸಭಾ ಕ್ಷೇತ್ರದ ಮತಪಟ್ಟಿಯಲ್ಲಿ ಹೆಸರಿರುವ ಎಲ್ಲಾ ಗ್ರಾಮದ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಬಗ್ಗೆ ತಮ್ಮ ತಮ್ಮ ವ್ಯಾಪ್ತಿಯ ಗ್ರಾಮಲೆಕ್ಕಿಗರ ಕಛೇರಿ/ಮತಗಟ್ಟೆಯಲ್ಲಿ ಆಧಾರ್ ಜೋಡಿಸಿಕೊಳ್ಳಬೇಕು ಎಂಬ ಸೂಚನೆಯಂತೆ ಆ.21ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಗ್ರಾಮ ಮಟ್ಟದಲ್ಲಿ ಬಿಎಲ್‌ಒ ರವರು ತಮ್ಮ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತ್ತು ಗ್ರಾಮಲೆಕ್ಕಿಗರ ಕಛೇರಿಯಲ್ಲಿ ವಿಶೇಷ ಆಧಾರ್ ಜೋಡಣೆಯ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮತದಾರರು ತಮ್ಮ ಆಧಾರ್, ಮೊಬೈಲ್ ನಂಬರ್, ಮತದಾರರ ಗುರುತಿನ ಚೀಟಿ ಪಡೆದು ಆಧಾರ್ ಜೋಡಣೆ ಕಾರ್ಯವನ್ನು ನಿರ್ವಹಿಸಲಾಗುವುದು ಎಂದು ಪುತ್ತೂರು ಸಹಾಯಕ ಮತದಾರರ ನೋಂದಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here