ಅಟೊಮ್ಯಾಟ್ರಿಕ್ಸ್‌ ನಿಂದ ಟಾಟಾ ಮೋಟಾರ್ಸ್‌ ಕಾರುಗಳ ಪ್ರದರ್ಶನ, ಎಕ್ಸ್‌ ಚೇಂಜ್‌ ಮತ್ತು ಲೋನ್‌ ಮೇಳ

0

ಪುತ್ತೂರು: ಟಾಟಾ ಮೋಟಾರ್ಸ್‌ ಕಾರುಗಳ ಅಧಿಕೃತ ಮಾರಾಟ ಮತ್ತು ಸೇವಾ ಸಂಸ್ಥೆ ಬೊಳುವಾರಿನಲ್ಲಿರುವ ಅಟೋಮ್ಯಾಟ್ರಿಕ್ಸ್‌ ಸಂಸ್ಥೆಯಿಂದ 2 ದಿನಗಳ ದಿ ಗ್ರೇಟ್‌ ಎಕ್ಸ್‌ ಚೇಂಜ್‌ ಫೆಸ್ಟಿವಲ್‌ ದರ್ಬೆ ಧನ್ವಂತರಿ ಆಸ್ಪತ್ರೆಯ ಎದುರುಗಡೆ ಆ.18 ಮತ್ತು 19 ರಂದು ನಡೆಯಿತು. ಮೇಳದಲ್ಲಿ ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರು ಮತ್ತು ಟಾಟಾ ಪಂಚ್‌ ಕಾರುಗಳ ಪ್ರದರ್ಶನ ನಡೆಯಿತು.ಸುಲಭ ರೀತಿಯ ಸಾಲದ ವ್ಯವಸ್ಥೆ ಅತೀ ಕಡಿಮೆ ಮುಂಗಡ ಪಾವತಿ ಸ್ಥಳದಲ್ಲೇ ಸಾಲ ಸೌಲಭ್ಯ ಹಾಗೂ ಅತೀ ಕಡಿಮೆ ಬಡ್ಡಿ ದರವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದೆಂದು ಸೇಲ್ಸ್‌ ಟೀಮ್‌ ಮ್ಯಾನೇಜರ್‌ ಪ್ರಮೋದ್‌ ತಿಳಿಸಿದರು. ಸೇಲ್ಸ್‌ ಕನ್ಸಲ್ಟೆಂಟ್‌ ಶಿವರಂಜನ್‌, ಗೀತೇಶ್, ರವೀಶ್, ಅನಿಲ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here