ಬೊಳ್ಳಾಡಿಯಲ್ಲೊಂದು ಅಪರೂಪದ ಕಲ್ಪವೃಕ್ಷ…!

0

ಪುತ್ತೂರು: ಪ್ರಕೃತಿಯಲ್ಲಿ ಅನೇಕ ವಿಚಿತ್ರಗಳು ಒಂದಲ್ಲೊಂದು ಕಡೆಗಳಲ್ಲಿ ಕಾಣಸಿಗುತ್ತಲೇ ಇರುತ್ತದೆ. ಒಳಮೊಗ್ರು ಗ್ರಾಮದ ಬೊಳ್ಳಾಡಿಯ ಕೃಷಿಕ ಅಶೋಕ್ ಪೂಜಾರಿ ಬೊಳ್ಳಾಡಿ ಎಂಬವರ ಮನೆಯಲ್ಲಿ ಬೆಳೆದ ತೆಂಗಿನ ಮರ ಪ್ರಥಮ ಫಸಲು ನೀಡಿದ್ದು ಈ ಫಸಲೇ ಈಗ ಎಲ್ಲರ ಅಚ್ಚರಿಯಾಗಿ ಮಾರ್ಪಟ್ಟಿದೆ.

ಇಲ್ಲಿ ಕಾಯಿ ಬಿಟ್ಟಿರುವ ತೆಂಗಿನ ಮರ ಸಾಧಾರಣ ತೆಂಗಿನ ಮರವೇ ಆಗಿದೆ. ಆದರೆ ಈ ಮರದಲ್ಲಿ ಬಿಟ್ಟಿರುವ ಕಾಯಿ ಮತ್ರ ವಿಚಿತ್ರವಾಗಿದೆ. ತೆಂಗಿನ ಕಾಯಿ ಹೇಗೆ ಇರಬೇಕಿತ್ತೋ ಆ ರೀತಿಯಲ್ಲಿ ಇಲ್ಲದೇ ಇರುವುದು ಮತ್ತು ತೆಂಗಿನ ಮರ ತಾಳೆಮರದ ಕಾಯಿಯನ್ನೇ ಹೋಲುವ ರೀತಿಯಲ್ಲಿ ಕಾಯಿ ಬಿಟ್ಟಿರುವುದು ವಿಶೇಷತೆಯಾಗಿದೆ.

ತೆಂಗಿನ ಮರದಲ್ಲಿ ತೆಂಗಿನ ಕೊಂಬು ಉತ್ಪತ್ತಿಯಾಗುವ ವೇಳೆ ಸಾಧಾರಣವಾಗಿ ನಾವು ತುಳುವಿನಲ್ಲಿ ಹೇಳುವ ಚೆಂಡೆಲ್ ಈ ಗೊನೆಯಲ್ಲಿಲ್ಲ. ತಾಳೆಮರ (ಇರೋಳ್) ಯಾವ ರೀತಿ ಕಾಯಿ ಬಿಡುತ್ತದೆಯೋ ಅದೇ ರೀತಿ ಈ ತೆಂಗಿನ ಮರದಲ್ಲಿ ಚೆಂಡೆಲ್ ಉಂಟಾಗುತ್ತದೆ. ಕಾಯಿ ಬೆಳೆತಾಗಲೂ ಇರೋಲ್ ತರವೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಯಾವ ಕಾರಣಕ್ಕೆ ಆ ರೀತಿ ತೆಂಗಿನ ಮರದಲ್ಲಿ ಕಾಯಿಯಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಬೊಳ್ಳಾಡಿಯ ತೆಂಗಿನ ಮರ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು ಮಾತ್ರ ಸತ್ಯ.

LEAVE A REPLY

Please enter your comment!
Please enter your name here