ಪುತ್ತೂರಿನ ‘ಬಿಂದು’ವಿನ ಆಂಧ್ರದ ಘಟಕಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯಿಂದ ಶಿಲಾನ್ಯಾಸ

0

ಪುತ್ತೂರು: ದಕ್ಷಿಣ ಭಾರತದಾದ್ಯಂತ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡದ ಪುತ್ತೂರು ಮೂಲದ ‘ಬಿಂದು’ ಬ್ರ್ಯಾಂಡ್ ಖ್ಯಾತಿಯ ಎಸ್ ಜಿ ಕಂಪನಿ ಘಟಕಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶಿಲಾನ್ಯಾಸಗೈದರು. ಆ.16ರಂದು ಎಪಿ SEZ ನ ನಿರ್ಮಾಣ ಹಂತದ ಹಲವು ಕಂಪನಿಗಳ ಶಿಲಾನ್ಯಾಸ ಮತ್ತು ಎಪಿ ಟೈರ್ಸ್ ಘಟಕದ ಮೊದಲ ಹಂತವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು.

ಪುತ್ತೂರಿನಲ್ಲಿ 2000 ರಲ್ಲಿ ಪ್ರಾರಂಭವಾದ ಎಸ್.ಜಿ ಕಾರ್ಪೊರೇಟ್ ಬಿಂದೂ ಮಿನರಲ್ ವಾಟರ್, ಫಿಝ್ ಜೀರಾ, ಸಿಪಾನ್ ಸಹಿತ ಹಲವು ಪಾನೀಯ ಗಳ ಮಾರಾಟದಿಂದ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಹಿಡಿತ ಹೊಂದಿದೆ. ಪುತ್ತೂರಿನ ನರಿಮೊಗರಿನಲ್ಲಿ ಮತ್ತು ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ತನ್ನ ತಯಾರಿಕ ಘಟಕ ಹೊಂದಿದೆ. ಈ ಸಂಸ್ಥೆ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ.

ಇದೀಗ ಆಂಧ್ರ ಮುಖ್ಯಮಂತ್ರಿ ಜಗನ್ , ವಿಶೇಷ ವಿತ್ತ ವಲಯದಲ್ಲಿ ಬಿಂದೂ ಪಾನೀಯದ ಘಟಕಕ್ಕೆ 12 ಎಕ್ರೆ ಭೂಮಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ, ಆಂಧ್ರ ಪ್ರದೇಶವು ವೇಗವಾಗಿ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಕೈಗಾರಿಕೀಕರಣವನ್ನು ಉತ್ತೇಜಿಸುತ್ತಿದೆ ಮತ್ತು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಿವೆ ಎಂದು ಅಂಕಪಲ್ಲಿ ಜಿಲ್ಲೆಯ ಎಪಿ ಎಸ್‌ಇಜೆಡ್‌ನಲ್ಲಿ ಮಂಗಳವಾರ ಹೇಳಿದರು.

ಎಪಿ ಟೈರ್ಸ್ ಘಟಕದ ಮೊದಲ ಹಂತವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು, ಜಪಾನ್ ಮೂಲದ ಯೊಕೊಹಾಮಾ ಕಂಪನಿಯು ಆಂಧ್ರಪ್ರದೇಶದಲ್ಲಿ ಶಿಲಾನ್ಯಾಸವಾದ 15 ತಿಂಗಳ ನಂತರ ಉತ್ಪಾದನೆಯನ್ನು ಪ್ರಾರಂಭಿಸಿದೆ ಮತ್ತು ಎರಡನೇ ಹಂತವು ಒಂದು ವರ್ಷದಿಂದ ಉತ್ಪಾದನೆಗೆ ಸಿದ್ಧವಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಆಂಧ್ರಕ್ಕೆ 2, 39,350 ಕೋಟಿ ಹೂಡಿಕೆ ಬಂದಿದೆ ಎಂದು ಮುಖ್ಯಮಂತ್ರಿ ಹೇಳಿದರು. 17 ದೊಡ್ಡ ಪ್ರಮಾಣದ ಕೈಗಾರಿಕೆಗಳು ಹಾಗೂ ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 56 ಪ್ರಮುಖ ಕೈಗಾರಿಕೆಗಳು ಸ್ಥಾಪನೆಯಾಗಲಿವೆ ಎಂದರು. “ಎಂಎಸ್‌ಎಂಇ ವಲಯದಲ್ಲಿ, 31,671 ಕೈಗಾರಿಕೆಗಳು 28,285 ಕೋಟಿ ಹೂಡಿಕೆ ಮಾಡುತ್ತಿವೆ. ಅನಾರೋಗ್ಯದ ಎಂಎಸ್‌ಎಂಇಗಳಿಗೆ 21463 ಕೋಟಿ ಪುನರುಜ್ಜೀವನದ ಪ್ಯಾಕೇಜ್ ನೀಡಲಾಗಿದೆ” ಎಂದು ಅವರು ಹೇಳಿದರು.ಸಿಎಂ, ಯೊಕೊಹಾಮಾ ಆಫ್-ಹೈವೇ ಟೈರ್ಸ್‌ನ ಸಿಇಒ, ನಿತಿನ್ ಮಂತ್ರಿ ಮತ್ತು ಇತರ ಅಧಿಕಾರಿಗಳು ಅಚ್ಚುತಪುರಂ SEZ ನಲ್ಲಿ ಟೈರ್ ಉತ್ಪಾದನಾ ಸೌಲಭ್ಯಕ್ಕೆ ಅಡಿಪಾಯ ಹಾಕಿದರು. ಒಟ್ಟಾರೆಯಾಗಿ, 1.54 ಲಕ್ಷ ಕೋಟಿ ಹೂಡಿಕೆಯಾಗಿ ಬರುತ್ತಿದ್ದು, 1.64 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ ಎಂದು ಸಿಎಂ ಹೇಳಿದರು.

ಕೈಗಾರಿಕಾ ಸಚಿವ ಗುಡಿವಾಡ ಅಮರನಾದ್, ಆಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಐಎಎಸ್ ಕರಿಕಲ ವಲವೇಣು, 2 ನೇ ವಿಶೇಷ ವಿತ್ತ ವಲಯದ ಮ್ಯಾನೇಜಿಂಗ್ ಡೈರೆಕ್ಟರ್ ಐಎಎಸ್ ಜೆ.ವಿ.ಎನ್ ಸುಬ್ರಹ್ಮಣ್ಯಮ್, ಎಸ್ ಜಿ ಕಂಪನಿಯ ಸಿಇಓ ಸುಶೀಲ್ ವೈದ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here